26.9 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಸ್ತೂರಿ ರಂಗನ್ ಸೂಕ್ಷ್ಮ ವಲಯ ಪ್ರದೇಶ ಜಾರಿ ವಿರೋಧಿಸಿ ಭಾರತೀಯ ಕಿಸಾನ್ ಸಂಘದಿಂದ ಪ್ರತಿಭಟನೆ ; ತಹಶೀಲ್ದಾರರಿಗೆ ಮನವಿ

ಬೆಳ್ತಂಗಡಿ: ಭಾರತದ ಸರಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯದ ಆದೇಶದಂತೆ ರಾಜ್ಯದ ಪಶ್ಚಿಮ ಘಟ್ಟ ವ್ಯಾಪ್ತಿಯ 1576 ಗ್ರಾಮಗಳ ಪರಿಶೀಲನೆ ಗೆ ಶಿಪಾರಸ್ಸು ಮಾಡಲಾಗಿದ್ದು ಇದರಲ್ಲಿ ಉಡುಪಿ 35 ದ.ಕ ಜಿಲ್ಲೆ 7 ಗ್ರಾಮಗಳನ್ನು ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ಪ್ರದೇಶಗಳೆಂದು ಶಿಪಾರಸ್ಸು ಮಾಡಿದ್ದು ಈ ಭಾಗದ ಅನೇಕ ಕುಟುಂಬ ಕಂಗಾಲಾಗಿದ್ದಾರೆ. ಜೊತೆಗೆ ಕಾಡುಪ್ರಾಣಿಗಳ ಹಾವಳಿಯಿಂದ ಬೆಳೆ ಹಾನಿಯಾಗಿ ಆದಾಯ ಇಲ್ಲದಂತಾಗಿದೆ ಇದರಿಂದ ಕೃಷಿಕರ ಬದುಕು ಶೋಚನೀಯ ಎಂದು ಭಾರತೀಯ ಕಿಸಾನ್ ಸಂಘ ಮಂಗಳೂರು ವಿಭಾಗದ ಅದ್ಯಕ್ಷ ಯಂ ಜಿ ಸತ್ಯನಾರಾಯಣ ಹೇಳಿದರು.

ಅವರು ಆ.31ರಂದು ಭಾರತೀಯ ಕಿಸಾನ್ ಸಂಘ ವತಿಯಿಂದ ಕೃಷಿಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿ ಶತಮಾನಗಳಿಂದ ವಂಶ ಪಾರಂಪರಿಕವಾಗಿ ಕೃಷಿಯನ್ನೆ ಅವಲಂಬಿತವಾಗಿ ಸಂಸಾರ ಸಮೇತರಾದ ರೈತ ವರ್ಗದವರು ಸೂಕ್ತ ಕಂದಾಯ ದಾಖಲೆಗಳನ್ನು ಹೊಂದಿದ್ದು ಸರಿಯಾಗಿ ಭೂಕಂದಾಯ, ಇತರ ತೆರಿಗೆಗಳನ್ನು ಪಾವತಿಸುವ ಪ್ರಾಮಾಣಿಕ ವರ್ಗದವರು. ಕಸ್ತೂರಿರಂಗನ್ ಜಾರಿ ಗೊಂದಲದಿಂದ ದಿಕ್ಕು ಕಾಣದಾಗಿದೆ ಕಸ್ತೂರಿರಂಗನ್ ರವರ 2014 ರ ವರದಿ ಪುನರ್ ಪರಿಶೀಲನೆ ಮಾಡುವ ತನಕ ಜಾರಿಗೊಳಿಸಬಾರದು, ಕಾಡುಪ್ರಾಣಿಗಳ ಹಾವಳಿಯಿಂದ ರಕ್ಷಣೆ ಇಲ್ಲದಾಗಿದೆ. ಕೋವಿ ಪರವಾನಗಿ ನಡೆಯುತ್ತಿಲ್ಲ. ಇದಕ್ಕೆಲ್ಲ ಸಂಭಂದ ಪಟ್ಟ ಸರಕಾರ, ಇಲಾಖೆಗಳು ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕಿಸಾನ್ ಸಂಘದ ಪ್ರಮುಖರಾದ ಅಂಬುಜಾಕ್ಷರು, ರಾಮ ಪ್ರಸಾದ್ ,ಶಾಂಭವಿ, ಎಸ್.ಆರ್ ಭಾಸ್ಕರ್ ಸಾಲಿಯಾನ್, ಜಯಣ್ಣ, ಶಿವಣ್ಣ, ಜಯಸಾಲಿಯಾನ್ ಬದಿನಡೆ, ಸುರೇಶ್ ಶೆಟ್ಟಿ ಕುರೇಲ್ಯ, ರಮಾನಾಥ ಶೆಟ್ಟಿ ಪಂಬಾಜೆ, ಕರುಣಾಕರ ಶೆಟ್ಟಿ ನಾಲ್ಕೂರು, ಬಾಲಕೃಷ್ಣ ಶೆಟ್ಟಿ ಸವಣಾಲು, ರಾಜೇಂದ್ರ ಶೆಟ್ಟಿ ಕುರೇಲ್ಯ, ಜಗನ್ನಾಥ ಶಿರ್ಲಾಲ್, ಕುಶಾಲಪ್ಪ ಗೌಡ ಶಿರ್ಲಾಲ್ , ಶಿವಾನಂದ ಹೆಗ್ಡೆ ಕರಂಬಾರು ಇನ್ನಿತರ ಮುಖಂಡರು ಭಾಗವಹಿಸಿದ್ದರು. ಬೆಳ್ತಂಗಡಿ ಸಂತೆಕಟ್ಟೆ ಅಯ್ಯಪ್ಪ ಗುಡಿಯಿಂದ ಮೆರವಣಿಗೆ ಬಂದು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಶಿಲ್ದಾರರ ಮೂಲಕ ಸಂಭಂದ ಪಟ್ಟ ಇಲಾಖೆಗೆ ಮನವಿ ನೀಡಿದರು. ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೋರಾಟ ಮಾಡಲಾಗುವುದೆಂದರು. ಭಾಸ್ಕರ್ ಸಾಲಿಯಾನ್ ವಂದಿಸಿದರು.

Related posts

ಭಾರತ್ ಕೋ ಆಪರೇಟಿವ್ ಬ್ಯಾಂಕ್ ಮುಂಬೈ ಲಿಮಿಟೆಡ್ ಇದರ ನೂತನ ನಿರ್ದೇಶಕರಾಗಿ ಮುಂಬಯಿ ಉದ್ಯಮಿ ನಾರಾಯಣ ಸುವರ್ಣ ಮರೋಡಿ ಆಯ್ಕೆ

Suddi Udaya

ಡಿ.27: ನಾವೂರುನಲ್ಲಿ 40ನೇ ವರ್ಷದ ಅಯ್ಯಪ್ಪ ದೀಪೋತ್ಸವ: ‘ಹರಿವರಾಸನಂ’ ಗೀತೆಯ ಶತಾಬ್ಧಿ ಕಾರ್ಯಕ್ರಮ – ಪಂದಳರಾಜ ಶಶಿಕುಮಾರ ವರ್ಮ ನಾವೂರುಗೆ

Suddi Udaya

ಧರ್ಮಸ್ಥಳ: 23ನೇಯ ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧೆಗೆ ಆಹ್ವಾನ

Suddi Udaya

ಬೆಳ್ತಂಗಡಿ ‘ಶಾಂತಿಶ್ರೀ’ ಜೈನ ಮಹಿಳಾ ಸಮಾಜದಿಂದ ಮಹಿಳಾ ದಿನಾಚರಣೆ

Suddi Udaya

ಉಜಿರೆ: ರುಡ್‌ಸೆಟ್ ಸಂಸ್ಥೆಯಲ್ಲಿ ವಿವಿಧ ಉಚಿತ ತರಬೇತಿಗಳಿಗೆ ಅರ್ಜಿ ಆಹ್ವಾನ

Suddi Udaya

Edu Hustle ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಇನ್‌ಸ್ಪೈರ್ ಕರ್ನಾಟಕ ಪ್ರಶಸ್ತಿ ಪ್ರದಾನ

Suddi Udaya
error: Content is protected !!