26.9 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ನೆಕ್ಕಿಲು: ಶಾಲಾ ನಿವೃತ್ತ ಮುಖ್ಯ ಶಿಕ್ಷಕರ ಬೀಳ್ಕೊಡುಗೆ ಮತ್ತು ಸ್ಮಾರ್ಟ್ ಟಿವಿ ಉದ್ಘಾಟನಾ ಸಮಾರಂಭ

ಬೆಳ್ತಂಗಡಿ: ಉರುವಾಲು ಗ್ರಾಮದ ದ.ಕ.ಜಿ.ಪಂ.ಕಿ ಪ್ರಾ.ಶಾಲೆ ನೆಕ್ಕಿಲು ಇಲ್ಲಿನ ನಿವೃತ್ತ ಮುಖ್ಯ ಶಿಕ್ಷಕಿ ಸಂಧ್ಯಾರಾಣಿ .ಕೆ ರವರ ಬೀಳ್ಕೊಡುಗೆ ಮತ್ತು ಊರ ದಾನಿಗಳಾದ ಪದ್ಮನಾಭ ಶಿಲ್ಪಿ ಅವರು ನೀಡಿರುವ 50,000 ರೂ ಮೌಲ್ಯದ ಸ್ಮಾರ್ಟ್ ಟಿವಿ ಉದ್ಘಾಟನಾ ಸಮಾರಂಭ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಎಸ್. ಡಿ . ಎಮ್ .ಸಿ ಅಧ್ಯಕ್ಷ ಅಬ್ದುಲ್ ಶರೀಫ್ ವಹಿಸಿದ್ದರು. ಸಮಾರಂಭದಲ್ಲಿ ಸುಮಾರು ಏಳು ವರ್ಷಗಳ ಕಾಲ ಶಿಕ್ಷಕರಾಗಿ ಮತ್ತು ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಶ್ರೀಮತಿ ಸಂಧ್ಯಾರಾಣಿ ಕೆ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕುಪ್ಪೆಟ್ಟಿ ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ಶಬಾನ ಬಾನು ಮಾತನಾಡಿ ಸಂಧ್ಯಾ ರವರು ತುಂಬಾ ಕ್ರಿಯಾಶೀಲ ವ್ಯಕ್ತಿತ್ವ ಉಳ್ಳವರು ,ಇವರು ನಮಗೆಲ್ಲ ಮಾದರಿಯಾಗಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಹಳೆ ವಿದ್ಯಾರ್ಥಿಗಳು, ಪೋಷಕರು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಸಂಧ್ಯಾರವರಿಗೆ ಪ್ರೀತಿಯಿಂದ ಉಡುಗೊರೆಗಳನ್ನು ನೀಡಿ ಗೌರವಿಸಿದರು.

ಊರ ಕೊಡುಗೈ ದಾನಿ ಪದ್ಮನಾಭ ಶಿಲ್ಪಿ ಪಿಲಿಗೂಡು ಇವರು ಶಾಲೆಗೆ 50,000 ಮೌಲ್ಯದ ಸ್ಮಾರ್ಟ್ ಟಿವಿಯನ್ನು ಕೊಡುಗೆಯಾಗಿ ನೀಡಿದ್ದು, ಇದನ್ನು ಶ್ರೀಯುತ ರಿಂದಲೇ ಉದ್ಘಾಟಿಸಲಾಯಿತು. ಇದರಿಂದ ಮಕ್ಕಳಿಗೆ ಡಿಜಿಟಲ್ ಕಲಿಕೆ ಸಾಧ್ಯವಾಗುವಂತೆ ಶ್ರೀಯುತರು ಅವಕಾಶ ಕಲ್ಪಿಸಿದ್ದಾರೆ ಎಂದು ಮಕ್ಕಳು, ಶಿಕ್ಷಕರು ಮತ್ತು SDMC ಸದಸ್ಯರು ಅಭಿಪ್ರಾಯ ಹಂಚಿಕೊಂಡರು. ಶಾಲೆಯ ಪರವಾಗಿ ಶ್ರೀಯುತರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ ಶ್ರೀಮತಿ ವಿನಯ , ಶಾಲೆಯ ಎಲ್ಲಾ ಕೆಲಸ ಕಾರ್ಯಗಳಲ್ಲಿ ತನು, ಮನ, ಧನದಿಂದ ಸಹಕಾರ ನೀಡುತ್ತಿರುವ ಸುರೇಶ ಎಚ್ ಎಲ್ ಸಮಾಜ ಸೇವಕರು, ಅಬ್ದುಲ್ ಶುಕುರು ಗ್ರಾಮ ಪಂಚಾಯತ್ ಮಾಜಿ ಸದಸ್ಯರು ಮತ್ತು ಬಾಬು ನಾಯ್ಕ ಹಲೇಜಿ ಇವರನ್ನು ಶಾಲೆಯ ಪರವಾಗಿ ಸನ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ ಕುಪೆಟ್ಟಿ ಮತ್ತು ಕರಾಯ ಕ್ಲಸ್ಟರಿನ ಮುಖ್ಯ ಶಿಕ್ಷಕರು, ಸಹಶಿಕ್ಷಕರು, ಅತಿಥಿ ಶಿಕ್ಷಕರು, ಹಳೆ ವಿದ್ಯಾರ್ಥಿಗಳು, ಪೋಷಕರು, ಎಸ್ ಡಿ ಎಂ ಸಿ ಸದಸ್ಯರು ಮತ್ತು ಶಾಲೆಯ ಅಡುಗೆ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಮುಖ್ಯ ಶಿಕ್ಷಕರಾದ ಶ್ರೀಮತಿ ಲೀಲಾವತಿ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಅತಿಥಿ ಶಿಕ್ಷಕರಾದ ಕಾವ್ಯ ಮತ್ತು ಗೌರವ ಶಿಕ್ಷಕಿ ರಕ್ಷಿತಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Related posts

ವೇಣೂರು: ಮಹಾವೀರ ನಗರದ ನಿವಾಸಿ ವಿಜಯಮ್ಮ ನಿಧನ

Suddi Udaya

ಯಕ್ಷ ಪ್ರಣವ -2023 ಅಂತರ್ ಕಾಲೇಜು ಮಟ್ಟದ ಯಕ್ಷಗಾನ ಸ್ಪರ್ಧೆ: ಎಸ್.ಡಿ.ಎಮ್. ಕಾಲೇಜಿಗೆ ತೃತೀಯ ಸ್ಥಾನ

Suddi Udaya

ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ಉಚಿತ ದಂತ ತಪಾಸಣಾ ಶಿಬಿರ

Suddi Udaya

ಕೊಕ್ಕಡ: EduNest ಅಕಾಡೆಮಿ ಕೋಚಿಂಗ್ ಕೇಂದ್ರ ಉದ್ಘಾಟನೆ

Suddi Udaya

ಡಿ.28 (ನಾಳೆ) ವಿದ್ಯುತ್ ನಿಲುಗಡೆ

Suddi Udaya

ಬೆಳ್ತಂಗಡಿ ಸರಕಾರಿ ಐ.ಟಿ.ಐ 2024ನೇ ಸಾಲಿನ ಪ್ರವೇಶಕ್ಕೆ ಅರ್ಜಿ ಆಹ್ವಾನ

Suddi Udaya
error: Content is protected !!