26.9 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ತಾಲೂಕು ಮರಾಟಿ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ, ಸನ್ಮಾನ, ಸಾಧನಾ ಪುರಸ್ಕಾರ ಮತ್ತು ಪ್ರತಿಭಾ ಪುರಸ್ಕಾರ

ಬೆಳ್ತಂಗಡಿ: ಮರಾಟಿ ಸಮುದಾಯದ ‌ಜನತೆ ತಮ್ಮ ಅಂಜಿಕೆ – ಅಳುಕನ್ನು ಬಿಟ್ಟು ಸಮಾಜದ ಮುನ್ನೆಲೆಗೆ ಬಂದು ಗೌರವಯುತವಾದ ಜೀವನ‌ ನಡೆಸಲು ಸಂಘಗಳು ಅವಶ್ಯಕ. ಸಮುದಾಯದ ಎಲ್ಲರೂ‌ ನನ್ನಿಂದಾಗುವ ಕೊಡುಗೆ ನೀಡುತ್ತೇವೆ ಎಂದು ಸಂಘಗಳಿಗೆ ಬಲತುಂಬಿದಾಗ ಸಾಧನೆ‌ ಮಾಡಿದ ಹಾಗೂ ಪ್ರತಿಭಾವಂತರನ್ನು ಹಾಗೂ ಕಟ್ಟಕಡೆಯ ವ್ಯಕ್ತಿಯನ್ನೂ ಮುನ್ನೆಲೆಗೆ ತಂದು ಸರ್ವರ ಅಭಿವೃದ್ಧಿ ನಡೆಸಲು ಸಹಕಾರಿಯಾಗುತ್ತದೆ ಎಂದು ಮುಂಡಾಜೆ ಸಿ.ಎ. ಬ್ಯಾಂಕ್ ‌ನಿರ್ದೇಶಕ ಚೆನ್ನಕೇಶವ ಅರಸಮಜಲು ಹೇಳಿದರು.

ಅವರು ಬೆಳ್ತಂಗಡಿ ತಾಲೂಕು ಮರಾಟಿ ಸಮಾಜ ಸೇವಾ ಸಂಘದಿಂದ ಮಾರಿಗುಡಿ ಬಳಿಯ ಸರಕಾರಿ ನೌಕರರ ಸಂಘದ ‘ಏಕತಾ ಸೌಧ’ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಮಹಾಸಭೆ ಹಾಗೂ ಸನ್ಮಾನ ಕಾರ್ಯಕ್ರಮ, ಸಾಧನಾ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂಘ ಎಂದರೆ‌ ಅವುಗಳಿಂದ ಫಲವನ್ನು ಪಡೆಯುವ ಮುಂಚಿತವಾಗಿ ಅವುಗಳನ್ನು ವ್ಯಕ್ತಿಗತ ಸಹಕಾರದಿಂದ ಪೋಷಿಸುವುದು ಅಗತ್ಯ. ಮುಂದಿನ ತಲೆಮಾರುಗಳಿಗೆ‌ ಇದರಿಂದ ವಿವಿಧ ರೀತಿಯಲ್ಲಿ ‌ಸಹಕಾರಿಯಾಗುತ್ತದೆ ಎಂದರು.
ಮುಖ್ಯ ಅತಿಥಿ ಕೆ.ಎಸ್.ಆರ್.ಟಿ.ಸಿ. ಪುತ್ತೂರು ವಿಭಾಗದ ಭದ್ರತಾ ಅಧೀಕ್ಷಕ ಮಧುಸೂದನ ನಾಯ್ಕ್ ಮಾತನಾಡಿ, ಸಮುದಾಯಕ್ಕೆ ನಾವು ನಮ್ಮಿಂದಾಗುವ ಕೊಡುಗೆ ನೀಡಿದಾಗ ಕೂಡಿ‌ ಬದುಕುವ ಹಿರಿಯರ ಆಶಯ ಪೂರ್ಣಗೊಳ್ಳುತ್ತದೆ ಎಂದರು.


ಸುಸಜ್ಜಿತ ಭವನ‌ ನಿರ್ಮಾಣ:
ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಮರಾಟಿ ಸೇವಾ ಸಂಘದ ಅಧ್ಯಕ್ಷ ಸತೀಶ್ ಹೆಚ್. ಎಲ್., ಸಮುದಾಯದ ಜನತೆಯ ನೋವುಗಳಿಗೆ ಸಕಾಲಿಕವಾಗಿ ಸ್ಪಂದಿಸುವ ಕಾರ್ಯ ನಡೆಸಲಾಗುತ್ತಿದೆ. ಮುಂದೆ ಸಂಘದ ದಶಮಾನೋತ್ಸವ ಸಂದರ್ಭದಲ್ಲಿ ತಾಲೂಕಿನಲ್ಲಿ ‌ಸುಸಜ್ಜಿತ ಮರಾಟಿ ಸಭಾಭವನ‌ ನಿರ್ಮಿಸುವ ಗುರಿಯನ್ನು ಹೊಂದಲಾಗಿದೆ. ಗ್ರಾಮ ಸಮಿತಿಗಳು ‌ಸ್ವಯಂ ಪ್ರೇರಿತವಾಗಿ ಒಗ್ಗೂಡಿದಾಗ ಸಂಘಟನೆಗೆ ಇನ್ನಷ್ಟು ಬಲ ಬರುತ್ತದೆ, ಅದೇ ರೀತಿ ಗ್ರಾಮ‌ಸಮಿತಿಗಳ ಪುನಃ ರಚನೆಗೂ ಆದ್ಯತೆ ನೀಡಲಾಗುತ್ತಿದೆ ಎಂದರು.


ಮುಖ್ಯ ಅತಿಥಿಗಳಾಗಿ ಅಬಕಾರಿ ಇಲಾಖೆ ಮಂಗಳೂರು ವಿಭಾಗ ಉಪ ಅಧೀಕ್ಷಕರಾದ ಸೌಮ್ಯಲತಾ ಎನ್., ನಿವೃತ್ತ ಶಿಕ್ಷಕ ಕುಮಾರಯ್ಯ ನಾಯ್ಕ ನೈನಾಡು, ಬೆಳ್ತಂಗಡಿ ತಾಲೂಕು ಮರಾಟಿ‌ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ ಉಮೇಶ್ ನಾಯ್ಕ ಕೇಳ್ತಡ್ಕ, ನಿವೃತ್ತ ಸೈನಿಕ ಗಣೇಶ್ ಬಿ.ಎಲ್., ನ್ಯೂ ಇಂಡಿಯಾ ಇನ್ಶ್ಯೂರೆನ್ಸ್ ಕಂಪನಿಯ ನಿವೃತ್ತ ಅಧಿಕಾರಿ ಪಿ. ಕುಮಾರಯ್ಯ ನಾಯ್ಕ್, ಸಂಘದ ಉಪಾಧ್ಯಕ್ಷ ವಸಂತ ನಾಯ್ಕ್ ಹಾಗೂ ಪ್ರಭಾಕರ ನಾಯ್ಕ್, ಕೋಶಾಧಿಕಾರಿ ‌ಹರೀಶ್ ಪೆರಾಜೆ, ಸಂಘದ ಪದಾಧಿಕಾರಿಗಳಾದ ರವಿ ನಾಯ್ಕ್ ಬಡಕೋಡಿ, ರಾಘವೇಂದ್ರ ‌ನಾಯ್ಕ್ ಮಾಚಾರು, ಶರತ್ ನಾಯ್ಕ್ ಕಣಿಯೂರು, ರಾಜೇಶ್ ಮದ್ದಡ್ಕ, ರಜನೀಶ್, ವಿಶಾಲ ಹಾಗೂ ಚಂದ್ರಾವತಿ ಕೊಯ್ಯೂರು ಉಪಸ್ಥಿತರಿದ್ದರು.
ಸನ್ಮಾನ‌ ಸ್ವೀಕರಿಸಿದ ಬೆಳ್ತಂಗಡಿ ಪೊಲೀಸ್ ಠಾಣೆ ಪೊಲೀಸ್ ಸಹಾಯಕ ಉಪನಿರೀಕ್ಷಕ ಕುಶಾಲಪ್ಪ ನಾಯ್ಕ್ ಸನ್ಮಾನ ಸ್ವೀಕರಿಸಿ, ಅನಿಸಿಕೆ ವ್ಯಕ್ತಪಡಿಸಿದರು.


ಸಂಘದ‌ ಕಾರ್ಯದರ್ಶಿಗಳಾದ ಪವಿತ್ರಾ ಲೋಕೇಶ್ ಹಾಗೂ ಸುರೇಶ್ ಹೆಚ್.ಎಲ್. ಸನ್ಮಾನಿತರ ಪಟ್ಟಿ ವಾಚಿಸಿದರು.
ಸಂಘದ ಪ್ರಧಾನ‌ ಕಾರ್ಯದರ್ಶಿ ತಾರನಾಥ‌ನಾಯ್ಕ್ ಲೆಕ್ಕಪತ್ರ ಮಂಡನೆ ಮಾಡಿದರು.
ಅಕ್ಷರ್ ಪ್ರಾರ್ಥಿಸಿದರು. ಸಂಘದ ಪದಾಧಿಕಾರಿ ಪ್ರಸಾದ್ ನಾಯ್ಕ್ ಪ್ರಾಸ್ತಾವಿಕವಾಗಿ‌ ಮಾತನಾಡಿ, ಸ್ವಾಗತಿಸಿದರು.‌ ಪದಾಧಿಕಾರಿ ಬಾಲಕೃಷ್ಣ ನಾಯ್ಕ್ ಇಂದಬೆಟ್ಟು ವಂದಿಸಿದರು.

ಸಾಧಕರಿಗೆ ಸನ್ಮಾನ:
ಶ್ರೀ ಮಹಮ್ಮಾಯಿ‌ ದರ್ಶನ ಪಾತ್ರಿಗಳಾದ ಬೊಮ್ಮಯ್ಯ ನಾಯ್ಕ ಮಾಚಾರು ಹಾಗೂ ರೋಹಿತ್ ನಾಯ್ಕ್ ತಣ್ಣೀರುಪಂಥ, ಬೆಳ್ತಂಗಡಿ ಪೊಲೀಸ್ ಠಾಣೆ ಸಹಾಯಕ ಉಪನಿರೀಕ್ಷಕ ಕುಶಾಲಪ್ಪ ನಾಯ್ಕ್, ಉಜಿರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸುರಕ್ಷಾಧಿಕಾರಿ ಮೋಹಿನಿ ಅವರನ್ನು ಸನ್ಮಾನಿಸಲಾಯಿತು.
ಎಸ್.ಎಸ್.ಎಲ್.ಸಿ. ವಿಭಾಗದಲ್ಲಿ ಪ್ರಾರ್ಥನಾ ಪಿ.ಎಸ್. ಬಡೆಕೊಟ್ಟು, ಜಯಶ್ರೀ ತೆಂಕಕಾರಂದೂರು, ಅನನ್ಯಾ ಉಜಿರೆ, ಕೀರ್ತನ್ ಕೊಡಂಗೆಕೋಡಿ, ಸುಜನ್ ಓಡಿಲ್ನಾಳ, ತೇಜಸ್ವಿನಿ ಇಳಂತಿಳ, ಪ್ರತೀಕ್ ಬಡಕೋಡಿ, ಚೇತನ್ ಬಡಕೋಡಿ, ರಕ್ಷಿತಾ ಮಚ್ಚಿನ ಅವರನ್ನು ‌ಪುರಸ್ಕರಿಸಲಾಯಿತು.
ಪದವಿಪೂರ್ವ ವಿಭಾಗದಲ್ಲಿ ವಿನ್ಯಾಸ್ ಲಾಯಿಲಾ, ಭವಿತ್ ಹೆಚ್ ಎಸ್. ಉರುವಾಲು, ದೀಕ್ಷಾ ನಾಯ್ಕ್ ಮೂಡುಕೋಡಿ, ಚರಣ್ ಕುಮಾರ್ ಮಾಚಾರು, ಸಹನಾ ಉಜಿರೆ, ನವ್ಯಾ ಮಚ್ಚಿನ, ಜನಾರ್ದನ ನಾಯ್ಕ್‌ ಮುಂಡಾಜೆ, ರಂಜಿತ್ ಕುಮಾರ್ ಮಚ್ಚಿನ ಅವರನ್ನು ಗೌರವಿಸಲಾಯಿತು. ‌

Related posts

ವಿ.ಹಿ.ಪ ಬಜರಂಗದಳ ಕಳೆಂಜ ಘಟಕದ ವತಿಯಿಂದ ದತ್ತಮಾಲಧಾರಣೆಗೆ ಚಾಲನೆ

Suddi Udaya

ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ವಿವಿಧ ಸಮಸ್ಯೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಾರತೀಯ ಮಜ್ದೂರ್ ಸಂಘದಿಂದ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಮನವಿ

Suddi Udaya

ಕೊಕ್ಕಡ: ಶಾಲೆತ್ತಡ್ಕ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಮಾಹಿತಿ ಕಾರ್ಯಕ್ರಮ

Suddi Udaya

ಉಜಿರೆ: ಶ್ರೀ.ಧ.ಮಂ. ಆಂ.ಮಾ. ಶಾಲೆಯ ಸ್ಕೌಟ್ಸ್ ಗೈಡ್ಸ್ ವತಿಯಿಂದ “ರಾಷ್ಟ್ರಪತಿ ಪದಕ” ಪುರಸ್ಕೃತ ವೀರಯೋಧ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ರವರಿಗೆ ಶ್ರದ್ಧಾಂಜಲಿ

Suddi Udaya

ಅ.17: ಅಳದಂಗಡಿ ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ಇದರ ನೇತೃತ್ವದಲ್ಲಿ ಅಂಗಾಂಗ ದಾನ ನೊಂದಣಿ

Suddi Udaya

ಕೆಮ್ಮಿನ ಸಿರಪ್‌ ಗೆ ವೈದ್ಯರ ಚೀಟಿ ಕಡ್ಡಾಯ: ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ

Suddi Udaya
error: Content is protected !!