26.2 C
ಪುತ್ತೂರು, ಬೆಳ್ತಂಗಡಿ
October 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸೆ.17: ದೈವ ಕ್ಷೇತ್ರ ಬಡೆಕ್ಕಾವಿನಲ್ಲಿ ಉಚಿತ ಕಣ್ಣಿನ ಪರೀಕ್ಷೆ ಹಾಗೂ ಕನ್ನಡಕ ವಿತರಣೆ

ಬೆಳ್ತಂಗಡಿ: ದೈವ ಕ್ಷೇತ್ರ ಬಡೆಕ್ಕಾವಿನಲ್ಲಿ ನಿರಂತರವಾಗಿ ಕಾರ್ಯಕ್ರಮಗಳು ನಡೆಯುತ್ತಿದ್ದು ಪ್ರತಿ ತಿಂಗಳು ಸಂಕ್ರಮಣದಂದು ಅಪ್ಪೆ ಕಲ್ಲುರ್ಟಿಗೆ ದೊಂದಿ ಕೋಲ ಕೊರಗಜ್ಜನಿಗೆ ಅಗೇಲು ಸೇವೆ ನಡೆಯುತ್ತಿದೆ.

ಈಗಾಗಲೇ ಒಂದನೇ ತರಗತಿಯಿಂದ ಪದವಿ ಪೂರ್ವ ಕಾಲೇಜಿನವರೆಗೆ ನೋಟ್ ಬುಕ್ ವಿತರಣೆ, ವಿದ್ಯಾರ್ಥಿವೇತನ ಕಾರ್ಯಕ್ರಮಗಳು ಹಲವು ಬಾರಿ ನಡೆದಿದ್ದು ಸಾಂಸ್ಕೃತಿಕ ಕಾರ್ಯಕ್ರಮಗಳು ದೈವಕ್ಕೆ ಸಂಬಂಧಪಟ್ಟ ನಾಟಕ ಸಕ್ರಿಯವಾಗಿ ನಡೆಯುತ್ತಿದ್ದು ಇದೀಗ ನಾವೂರು, ಇಂದಬೆಟ್ಟು, ನಡ, ಕನ್ಯಾಡಿಯ 40 ವರ್ಷಕ್ಕಿಂತ ಮೇಲ್ಪಟ್ಟ ಗ್ರಾಮಸ್ಥರಿಗೆ ತಜ್ಞ ವೈದ್ಯರುಗಳಿಂದ ಸೆ.17ರಂದು ಕಣ್ಣಿನ ಪರೀಕ್ಷೆ ಹಾಗೂ ಉಚಿತ ಕನ್ನಡಕ ವಿತರಣೆಯು ಸಂಜೆ 5 ಗಂಟೆಗೆ ದೈವ ಕ್ಷೇತ್ರ ಬಡೆಕ್ಕಾವುಗುತ್ತುವಿನಲ್ಲಿ ನಡೆಯಲಿದೆ.

ಇದರ ಸದುಪಯೋಗವನ್ನು ನಾಲ್ಕು ಗ್ರಾಮಗಳ ಗ್ರಾಮಸ್ಥರು ಪಡೆದುಕೊಳ್ಳಬಹುದು. ಆಸಕ್ತರು ಸೆ.05 ರ ಒಳಗೆ 9845590323 ಫೋನ್ ಮಾಡಿ ತಿಳಿಸಬಹುದು

Related posts

ಮಾ.21: ಇತಿಹಾಸ ಪ್ರಸಿದ್ದ ವೇಣೂರು-ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಕಂಬಳ

Suddi Udaya

ಪುದುವೆಟ್ಟು ಶ್ರೀ ಧ.ಮಂ.ಅ.ಹಿ. ಪ್ರಾ. ಶಾಲೆಯಲ್ಲಿ ಆಟಿಡೊಂಜಿ ದಿನ

Suddi Udaya

ಬೆಳ್ತಂಗಡಿ ಶ್ರೀ ಕ್ಷೇ.ಧ.ಗ್ರಾ.ಯೋಜನೆಯಿಂದ ಮುಂಡತ್ತೊಡಿ ಹಿ.ಪ್ರಾ. ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ಪುದುವೆಟ್ಟು ಹಿಂದೂ ಸೇವಾ ಸಮಿತಿ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ 108 ತೆಂಗಿನಕಾಯಿ ಗಣಹೋಮ : ಶಾಸಕ ಹರೀಶ್ ಪೂಂಜ ಭಾಗಿ

Suddi Udaya

ಕಳೆಂಜ: ಬರೆಮೇಲು ನಿವಾಸಿ ಗಣಪನ ಗೌಡ ನಿಧನ

Suddi Udaya

ಬೆದ್ರಬೆಟ್ಟು ಶ್ರೀ ಕ್ಷೇತ್ರ ಮಹಮ್ಮಾಯಿ ಮಾರಿಗುಡಿ ಜೀರ್ಣೋದ್ಧಾರದ “ವಿಜ್ಞಾಪನಾ ಪತ್ರ” ಬಿಡುಗಡೆ

Suddi Udaya
error: Content is protected !!