26.9 C
ಪುತ್ತೂರು, ಬೆಳ್ತಂಗಡಿ
October 16, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಾರಿನಲ್ಲಿ ನಿಷೇಧಿತ MDMA ಮಾದಕವಸ್ತು ಸಾಗಾಟ: ವೇಣೂರು ಪೊಲೀಸರಿಂದ ಇಬ್ಬರು ಆರೋಪಿಗಳ ಬಂಧನ

ಬೆಳ್ತಂಗಡಿ : ಗುರುವಾಯನಕೆರೆಯಿಂದ ಮೂಡಬಿದಿರೆ ಕಡೆಗೆ ಕಾರಿನಲ್ಲಿ ಮಾರಾಟ ಮಾಡಲು ನಿಷೇಧಿತ ಮಾದಕವಸ್ತು MDMA ಸಾಗಾಟ ಮಾಡಲು ಯತ್ನಿಸುತ್ತಿದ್ದಾಗ ವೇಣೂರು ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಮಾದಕವಸ್ತು ಸಮೇತ ಪತ್ತೆ ಹಚ್ಚಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಿಷೇಧಿತ MDMA ಮಾದಕ ವಸ್ತು ಸಾಗಾಟ ಮಾಡುತ್ತಿರುವ ಬಗ್ಗೆ ವೇಣೂರು ಪೊಲೀಸ್ ಠಾಣಾ ಸಬ್ ಇನ್ಸ್‌ಪೆಕ್ಟರ್ ಅಕ್ಷಯ್ ಡವಗಿ ರವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಮೇ.27 ರಂದು ಸಂಜೆ 3 ಗಂಟೆಗೆ ಸಿಬ್ಬಂದಿಗಳಾದ ಕೃಷ್ಣ ಕೆ.ಬಿ, ವಸಂತ್ ಕುಮಾರ್, ಮೋಹನ್ ಕುಮಾರ್ ರವರನ್ನು ಜೊತೆಯಲ್ಲಿ ಕರೆದುಕೊಂಡು ವೇಣೂರು ಠಾಣಾ ವ್ಯಾಪ್ತಿಯ ಕಂಬಳದಡ್ಡ ಎಂಬಲ್ಲಿ ಗುರುವಾಯನಕೆರೆ- ಮೂಡಬಿದ್ರೆ ಸಾರ್ವಜನಿಕ ರಸ್ತೆಯಲ್ಲಿ ನಾಖಾಬಂದಿ ಹಾಕಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಮಧ್ಯಾಹ್ನ ಸುಮಾರು 3:20 ಗಂಟೆಗೆ ಗುರುವಾಯನಕೆರೆ ಕಡೆಯಿಂದ ವೇಣೂರು ಕಡೆಗೆ KA-13-P-2905 ನಂಬರಿನ i20 ಕಾರನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದ 40 ಸಾವಿರ ಮೌಲ್ಯದ 4 ಗ್ರಾಂ MDMA ನಿಷೇಧಿತ ಮಾದಕವಸ್ತುವನ್ನು ಪತ್ತೆ ಹಚ್ಚಿದ್ದಾರೆ.

ಕಾರಿನಲ್ಲಿದ್ದ ಇಬ್ಬರು ಆರೋಪಿತರಾದ ಮಂಗಳೂರು ತಾಲೂಕಿನ ಪುತ್ತಿಗೆ ಗ್ರಾಮದ ಹಂಡೇಲು ನಿವಾಸಿ ಹೆಚ್.ಹುಸೇನ್ ಮಗ ತನ್ವೀರ್(27) ಮತ್ತು ಮಂಗಳೂರು ತಾಲೂಕಿನ ಮೂಡಬಿದಿರೆಯ ಕಲ್ಲಬೆಟ್ಟು ನಿವಾಸಿ ಅಬ್ದುಲ್ ಖಾದರ್ ಮಗ ಮಹಮ್ಮದ್ ಸಲ್ವಾನ್(22) ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಮಾದಕವಸ್ತುವನ್ನು ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಸುನ್ನತ್ ಕೆರೆ ನಿವಾಸಿ ಹಂಝತ್ ಕರಾರ್ ಎಂಬಾತನ್ನು ಮಾರಾಟ ಮಾಡಲು ನೀಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.

4 ಗ್ರಾಂ MDMA ನಿಷೇಧಿತ ಮಾದಕ ವಸ್ತುವಿನ ಅಂದಾಜು ಮೌಲ್ಯ ಸುಮಾರು 40 ಸಾವಿರ ಹಾಗೂ ಸಾಗಾಟ ಮತ್ತು ಮಾರಾಟಕ್ಕೆ ಉಪಯೋಗಿಸಿದ KA-13-P-2905 i20 ಕಾರಿನ ಅಂದಾಜು ಮೌಲ್ಯ ಸುಮಾರು 2 ಲಕ್ಷ ಅಗಿದ್ದು ಪಂಚರು ಮತ್ತು ಸೋಕೋ ತಂಡದ ಸಮ್ಮುಖದಲ್ಲಿ ಮಹಜರು ನಡೆಸಿ ವೇಣೂರು ಪೊಲೀಸ್ ಠಾಣೆಯಲ್ಲಿ A-1 ಮಹಮ್ಮದ್ ತನ್ವೀರ್, A-2 ಮಹಮ್ಮದ್ ಸಲ್ವಾನ್, ಮಾರಾಟ ಮಾಡಲು ನೀಡಿದ A-3 ಹಂಝತ್ ಕರಾರ್ ವಿರುದ್ಧ ಕಲಂ: 8(c), 22(b) NDPS Act ರಂತೆ ಪ್ರಕಾರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಬಂಧಿತ ಮಹಮ್ಮದ್ ತನ್ವೀರ್ ಮತ್ತು ಮಹಮ್ಮದ್ ಸಲ್ವಾನ್ ಬಂಧಿಸಿ ಮೇ.28 ರಂದು ಮಂಗಳೂರು ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದ್ದು‌. ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇನ್ನೂ ಮೂರನೇ ಆರೋಪಿ ಕುವೆಟ್ಟು ಗ್ರಾಮದ ಸುನ್ನತ್ ಕೆರೆ ನಿವಾಸಿ ಹಂಝತ್ ಕರಾರ್ ಪ್ರಕರಣದ ಬಳಿಕ ಪರಾರಿಯಾಗಿದ್ದು ಆತನ ಬಂಧನಕ್ಕೆ ವೇಣೂರು ಪೊಲೀಸರು ಬಲೆ ಬಿಸಿದ್ದಾರೆ.

ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿನಿ ಸಿ.ಕೆ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ.ಬಿ.ಎಸ್ ನೇತೃತ್ವದ ವೇಣೂರು ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅಕ್ಷಯ್ ಡವಗಿ ಮತ್ತು ಸಬ್ ಇನ್ಸ್‌ಪೆಕ್ಟರ್ (ತನಿಖೆ) ಶ್ರೀಮತಿ ಓಮನ ಹಾಗೂ ಸಿಬ್ಬಂದಿ ಕೃಷ್ಣ, ಶ್ರೀಮತಿ ಕೇಶವತಿ, ಮೋಹನ್ ಕುಮಾರ್, ವಸಂತ್ ಕುಮಾರ್, ಸಂತೋಷ್, ರಾಕೇಶ್ ತಂಡದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

Related posts

ಬೆಳ್ತಂಗಡಿ ಧರ್ಮ ಪ್ರಾಂತ್ಯ ರಜತ ಮಹೋತ್ಸವ ಕ್ರೀಡಾ ಸಂಭ್ರಮ

Suddi Udaya

ಮೃತದೇಹ ಹೂತು ಹಾಕಿದ ಪ್ರಕರಣ: 8ನೇ ಗುರುತು ಮಾಡಿದ ಜಾಗದಲ್ಲಿ ಸಿಗದ ಕಳೇಬರ

Suddi Udaya

ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ನಾವೂರು ಗ್ರಾಮ ಪಂಚಾಯತ್ ನಲ್ಲಿ ಪ್ರತಿಭಟನೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ

Suddi Udaya

ಕಾಶಿಪಟ್ಣ ಸರಕಾರಿ ಶಾಲೆಗೆ ಕೊಠಡಿ ನಿರ್ಮಿಸುವ ಬಗ್ಗೆ ಶಿಕ್ಷಣ ಸಚಿವರಿಗೆ ಸತೀಶ್ ಕಾಶಿಪಟ್ಣರವರಿಂದ ಮನವಿ

Suddi Udaya

ವಾಣಿ ಶಿಕ್ಷಣ ಸಂಸ್ಥೆಯ ಮುಂಭಾಗದಲ್ಲಿ ಅತಿ ಶೀಘ್ರದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಇಂಜಿನಿಯರ್ ಗಳಿಗೆ ಜಯನಂದ ಗೌಡ ಮನವಿ

Suddi Udaya
error: Content is protected !!