27.6 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಸೋಜಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ಸ್ ಸಂಸ್ಥೆಯ ಸಿಬ್ಬಂದಿ ಸ್ಪಂದನಾ ಎಮ್.ಎಸ್. ರವರಿಗೆ ಬೀಳ್ಕೊಡುಗೆ

ಬೆಳ್ತಂಗಡಿ: ಸೋಜಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ಸ್ ಸಂಸ್ಥೆ ಬೆಳ್ತಂಗಡಿ ಇಲ್ಲಿ ಸುಮಾರು 1 ತಿಂಗಳ ಮಟ್ಟಿಗೆ ಸ್ಪಂದನಾ ಎಮ್.ಎಸ್. ರವರು ತನ್ನ ವಿದ್ಯಾರ್ಥಿ ಜೀವನದಲ್ಲಿ ಒಬ್ಬ ಅತ್ಯುತ್ತಮ ಸುಶ್ರೂಕಿ ಆಗಬೇಕೆಂದು ಬಯಸಿ ಈಗಾಗಲೇ ಸರಕಾರಿ ಮೀಸಲಾತಿ ಅಡಿಯಲ್ಲಿ ಮಂಗಳೂರಿನ ಖ್ಯಾತ ಆಸ್ಪತ್ರೆ ಅಥೆನಾದಲ್ಲಿ ಬಿ.ಎಸ್.ಸಿ. ನರ್ಸಿಂಗ್ ಶಿಕ್ಷಣವನ್ನು ಪಡೆಯುವಲ್ಲಿ ಸಫಲರಾಗಿದ್ದಾರೆ. ಕುಮಾರಿ ಸ್ಪಂದನಾ ಎಮ್.ಎಸ್. ರಜೆಯಲ್ಲಿ ತರಬೇತಿಗಾಗಿ ಸೋಜಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ಸ್ ಸಂಸ್ಥೆಯ ಆಡಳಿತ ವಿಭಾಗದಲ್ಲಿ ಅತ್ಯುತ್ತಮವಾಗಿ ತನ್ನ ಕಾರ್ಯ ವೈಖರಿಯನ್ನು ತೋರಿಸಿ ಸಂಸ್ಥೆಯ ಎಲ್ಲಾ ನೌಕರರಿಗೆ ಮಾದರಿಯಾಗಿರುತ್ತಾರೆ. ಹಾಗೂ ನಿರೀಕ್ಷೆಗೂ ಮೀರಿ ತನ್ನ ಖ್ಯಾತಿಯನ್ನು ತೋರ್ಪಡಿಸಿ ಇಂದು ಸಂಸ್ಥೆಯಿಂದ ಬೀಳ್ಕೊಡಲಾಯಿತು.

ಸಂಸ್ಥೆಯ ಆಡಳಿತ ನಿರ್ದೇಶಕರಾದ ಅಲ್ಫೋನ್ಸ್ ಫ್ರಾಂಕೋರವರು ಸ್ಪಂದನಾರವರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಶುಭಹಾರೈಸಿ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು.

ಸಂಸ್ಥೆಯ ವ್ಯವಸ್ಥಾಪಕರಾದ ಲ್ಯಾನ್ಸಿ ಡಿಸೋಜ ಸ್ವಾಗತಿಸಿ, ಸುಮಲತಾ ವಂದಿಸಿದರು. ಎಲ್ಲಾ ಸಿಬ್ಬಂದಿಗಳು ಸೇರಿ ಶುಭಹಾರೈಸಿದರು.

Related posts

ಉಜಿರೆ ಎಸ್.ಡಿ.ಎಮ್ ಬಿ. ವೋಕ್ ಡಿಜಿಟಲ್ ಮೀಡಿಯಾ ಮತ್ತು ಫಿಲ್ಮ್ ಮೇಕಿಂಗ್ ವಿಭಾಗದ ಲೂಮೋಸ್ ವಿದ್ಯಾರ್ಥಿ ಸಂಘದ ಶೈಕ್ಷಣಿಕ ವರ್ಷದ ಚಟುವಟಿಕೆಗಳಿಗೆ ಚಾಲನೆ

Suddi Udaya

ಧರ್ಮಸ್ಥಳ: ನೇತ್ರಾವತಿ ನದಿ ತೀರದಲ್ಲಿ ಸ್ವಚ್ಛತೆ ಮಾಡುವ ಮೂಲಕ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮಕ್ಕೆ ಚಾಲನೆ

Suddi Udaya

‘ಪ್ರೇರಣಾ – 2026’ ರಾಷ್ಟ್ರ ಮಟ್ಟದ ಸಾಂಸ್ಕೃತಿಕ ಉತ್ಸವ : ಉಜಿರೆಯ ಎಸ್.ಡಿ.ಎಂ ಕಾಲೇಜು ಚಾಂಪಿಯನ್ಸ್

Suddi Udaya

ಬೆಳ್ತಂಗಡಿ : ಕಸ್ತೂರಿ ರಂಗನ್ ವರದಿ ಭಾಧ್ಯಸ್ಥರೊಂದಿಗೆ ಸಮಾಲೋಚನೆ ನಡೆಸಲು ಬೆಳ್ತಂಗಡಿ ಧರ್ಮಪ್ರಾಂತ್ಯದ ಕೆ ಎಸ್ ಎಂ ಸಿ ಎ ವತಿಯಿಂದ ಅಗ್ರಹ

Suddi Udaya

ಆರ್ಕಿಡ್‌ ಪ್ರದರ್ಶನ:  ಧರ್ಮಸ್ಥಳದ  ಸುಪ್ರಿಯಾ ಹರ್ಷೇಂದ್ರ ಕುಮಾರ್‌ರವರಿಗೆ ಬಹುಮಾನ

Suddi Udaya

ಆದಿವಾಸಿ ಸಮುದಾಯಗಳಿಗೆ ರಸ್ತೆ , ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ರಕ್ಷಿತ್ ಶಿವರಾಂ ರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಮನವಿ

Suddi Udaya
error: Content is protected !!