26.2 C
ಪುತ್ತೂರು, ಬೆಳ್ತಂಗಡಿ
October 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಲಾಯಿಲದಲ್ಲಿ ಗಾಯತ್ರಿ ವಿಶ್ವಕರ್ಮ ಮಹಿಳಾ ಸಂಘದಿಂದ ಕಾಳಿಕಾಂಬಾ, ವರಮಹಾಲಕ್ಷ್ಮೀ ಪೂಜೆ: ಬೆಸ್ಟ್ ಎಂಎಲ್ಎ ಪ್ರಶಸ್ತಿ ಪಡೆದ ಶಾಸಕ ಹರೀಶ್ ಪೂಂಜರಿಗೆ ಸನ್ಮಾನ

ಬೆಳ್ತಂಗಡಿ: ಶ್ರೀ ಗಾಯತ್ರಿ ವಿಶ್ವಕರ್ಮ ಮಹಿಳಾ ಸಂಘ, ಲಾಯಿಲ ವತಿಯಿಂದ ಶ್ರೀ ಕಾಳಿಕಾಂಬಾ ಪೂಜೆ ಹಾಗೂ ಶ್ರೀ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮವು ಆ.28ರಂದು ಲಾಯಿಲ ಶ್ರೀ ವಿಶ್ವಕರ್ಮ ಸಭಾಭವನದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು.

ಸವಣಾಲು ಶಿವಪ್ರಸಾದ್ ಪುರೋಹಿತರ ಆಚಾರ್ಯತ್ವದಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ 500ಕ್ಕೂ ಅಧಿಕ ವ್ರತಧಾರಿ ಮಹಿಳೆಯರು ಪಾಲ್ಗೊಂಡು ದೇವರ ಆರಾಧನೆ ನೆರವೇರಿಸಿದರು.

ರಕ್ಷಾಬಂಧನದ ಪ್ರಯುಕ್ತ ವ್ರತಧಾರಿ ಮಹಿಳೆಯರು ಶಾಸಕ ಹರೀಶ್ ಪೂಂಜರಿಗೆ ರಕ್ಷೆ ಕಟ್ಟಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಲಾಯಿಲ ವಿಶ್ವಕರ್ಮಾಭ್ಯುದಯ ಸಭಾದ ಅಧ್ಯಕ್ಷ ಗಣೇಶ್ ಆಚಾರ್ಯ ಬಲ್ಯಾಯಕೋಡಿ, ಹಂಸ ಫರ್ನಿಚರ್ ಮಾಲಕ ಬಿ.ಕೆ. ಸತೀಶ್ ಆಚಾರ್ಯ, ಪ್ರೇಮಾ ಜುವೆಲ್ಲರ್ಸ್ ಮಾಲಕ ಮುರಳಿ ಆಚಾರ್ಯ, ಶ್ರೀ ಗಾಯತ್ರಿ ವಿಶ್ವಕರ್ಮ ಮಹಿಳಾ ಸಂಘದ ಅಧ್ಯಕ್ಷೆ ಉಷಾ ಹರಿಪ್ರಸಾದ್, ಕೋಶಾಧಿಕಾರಿ ಆಶಾ ಸತೀಶ್ ಆಚಾರ್ಯ, ಕಾರ್ಯದರ್ಶಿ ಪುಷ್ಪಾ ಗಣೇಶ್ ಆಚಾರ್ಯ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು, ಲಾಯಿಲ ವಿಶ್ವಕರ್ಮಾಭ್ಯುದಯ ಸಭಾದ ಪದಾಧಿಕಾರಿಗಳು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.

ಶಾಸಕ ಹರೀಶ್ ಪೂಂಜರಿಗೆ ಸನ್ಮಾನ: ಪೂಜಾ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ ಅವರು ಭಾಗವಹಿಸಿ ದೇವರ ಪ್ರಸಾದ ಸ್ವೀಕರಿಸಿದರು. ಬೆಸ್ಟ್ ಎಂಎಲ್ಎ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ಲಾಯಿಲ ಶ್ರೀ ಗಾಯತ್ರಿ ವಿಶ್ವಕರ್ಮ ಮಹಿಳಾ ಸಂಘದ ವತಿಯಿಂದ ಶಾಸಕರನ್ನು ಗೌರವಿಸಿ, ಸನ್ಮಾನಿಸಲಾಯಿತು.

Related posts

ಪಿಲ್ಯ: ಸದಾಶಿವ ಆಠವಳೆ ನಿಧನ

Suddi Udaya

ಏ.20: ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ: ಪೂರ್ವಭಾವಿ ಸಭೆ

Suddi Udaya

ಲೋಕಸಭಾ ಚುನಾವಣೆ, ಶಾಸಕ ಹರೀಶ್ ಪೂಂಜರವರು ತಾಲೂಕಿನ ಹಲವಾರು ಮತಗಟ್ಟೆಗಳಿಗೆ ಭೇಟಿ

Suddi Udaya

ಶ್ರೀ ದುರ್ಗಾ ಟೆಕ್ಸ್ ಟೈಲ್ ನಲ್ಲಿ ಮಾನ್ಸೂನ್ ದರ ಕಡಿತ ಮಾರಾಟ,10% ರಿಂದ 50% ಡಿಸ್ಕೌಂಟ್ ಸೇಲ್

Suddi Udaya

ಜ.14-18: ಅನಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ

Suddi Udaya

ಫ್ರೆಂಡ್ಸ್ ಬದ್ಯಾರ್ ತಂಡದ ಸದಸ್ಯರಿಂದ ಶ್ರಮದಾನ

Suddi Udaya
error: Content is protected !!