September 2, 2026
Uncategorized

ಸೆ.6;ಕಲಾಸಾಧನ ವತಿಯಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಸಂಭ್ರಮ ‘ ರಾಗ ಸುಧಾ’

ಮಂಗಳೂರು: ಮಂಗಳೂರಿನ ಕಲಾಸಾಧನ ಆಶ್ರಯದಲ್ಲಿ ರಾಮಕೃಷ್ಣ ಮಿಷನ್ ಸಹಯೋಗದಲ್ಲಿ ಸೆ.6 ರಂದು ಸಂಜೆ 5ಗಂಟೆಗೆ ನಗರದ ಶ್ರೀರಾಮ ಕೃಷ್ಣ ಮಠದಲ್ಲಿ (ಶ್ರೀಮಂಗಳಾ ದೇವಿ ಬಳಿ )ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಸಂಭ್ರಮ ‘ ರಾಗ ಸುಧಾ’ ಹಮ್ಮಿಕೊ ಳ್ಳಲಾಗಿದೆ.

ಈ ಸಂಗೀತ ಸಂಭ್ರಮದಲ್ಲಿಗ್ವಾಲಿಯರ್ ಘರಾನಾ ಕಲಾಕಾರ ಡಾ. ಪಂಡಿತ್ ರಾಮ್ ದೇಶಪಾಂಡೆ ಅವರ ಹಿರಿಯ ಶಿಷ್ಯ
ಖ್ಯಾತ ಹಿಂದೂಸ್ತಾನಿ ಗಾಯಕರಾದ ಆದಿತ್ಯ ಮೋದಕ್ ,ಗ್ವಾಲಿಯರ್ ಕಿರಾಣಾ ಪದ್ಧತಿಯ ಗಾಯಕ ಮತ್ತು ಹಾರ್ಮೋನಿಯಂ ವಾದಕ ಸತೀಶ್ ಭಟ್ ಹೆಗ್ಗಾರ್,ಪಂಡಿತ್ ಮಾಣಿಕ್ ರಾವ್ ಅವರ ಶಿಷ್ಯ,ತಬಲಾ ವಾದಕ ಮತ್ತು ಗಾಯಕ ಅಕ್ಷಯ ಜೋಶಿ ಭಾಗವಹಿಸ ಲಿದ್ದಾರೆ.
ರಾಮಕೃಷ್ಣ ಮಠದ ಅಧ್ಯಕ್ಷr ಸ್ವಾಮಿ ಜಿತಕಾಮಾನಂದಜಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಬಳಿಕ ಗಣ್ಯರು ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿಸಲಿದ್ದಾರೆ. ಕಾರ್ಯಕ್ರಮ ದಲ್ಲಿ ಭಾಗವಹಿಸಲು ಸಂಗೀತಾಸಕ್ತರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ಕಲಾ ಸಾಧನ ಸಂಸ್ಥೆ ನಿರ್ದೇಶಕಿ ವಿಭಾ ಶ್ರೀನಿವಾಸ್ ನಾಯಕ್ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.
ಕಲಾ ಸಾಧನ ಸಂಸ್ಥೆ ಕಳೆದ 10 ವರ್ಷ ಗಳಿಂದ ಭಾರತೀಯ ಶಾಸ್ತ್ರೀಯ ಸಂಗೀತವನ್ನು ಪ್ರಚುರಪಡಿಸಲು ಹಲವಾರು ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳತ್ತ ಬಂದಿದೆ. ಅಲ್ಲದೆ ಯುವ ಕಲಾವಿದರಿಗೆ ವೇದಿಕೆಯನ್ನು ಕಲ್ಪಿಸಿದೆ. ತಮ್ಮ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಸಂಗೀತಾ ತರಬೇತಿ ಯನ್ನು ನೀಡಲಾಗುತ್ತಿದೆ ಎಂದು ಹೇಳಿದರು.

ಕಲಾವಿದರ ಪರಿಚಯ:-
*ಆದಿತ್ಯ ಮೋದಕ್: -ಎಳೆಯ ವಯಸ್ಸಿನಲ್ಲೇ ಚಂದ್ರಕಾಂತ್ ಪಾರ್ಕರ್ ಅವರಿಂದ ಐದು ವರ್ಷಗಳ ಕಾಲ ಸಂಗೀತ ಅಭ್ಯಾಸ ನಡೆಸಿ, ನಂತರ ಶ್ರೀ ಪ್ರದೀಪ್ ಧೋಂಡ್ ಅವರಿಂದ ನಾಲ್ಕು ವರ್ಷಗಳ ಕಾಲ. ಅವರು ಗ್ವಾಲಿಯರ್ ಘರಾನಾ ಕಲಾವಿದ ಡಾ. ಪಂಡಿತ್ ರಾಮ್ ದೇಶಪಾಂಡೆ ಅವರ ಹಿರಿಯ ಶಿಷ್ಯರಲ್ಲಿ ಒಬ್ಬರು,
ಅವರು ಪಂ. ರಾಮ ಮರಾಠೆ ಪುರಸ್ಕಾರ, ಪುಣೆ, 2025,ಗಾನ್ ಯೋಗಿ ಪಂಡಿತ್ ಪಂಚಾಕ್ಷರಿ ಗವಾಯಿ ಪುರಸ್ಕಾರ, ಧಾರವಾಡ, 2025,ಕೇಂದ್ರ ಸರ್ಕಾರದಿಂದ ಪಂಡಿತ್ ವಸಂತರಾವ್ ದೇಶಪಾಂಡೆ ಪುರಸ್ಕಾರ, 2016,ವೇದಿಕ್ ಹೆರಿಟೇಜ್ ಇಂಕ್, (ಹೆಂಪ್‌ಸ್ಟೆಡ್, ಯು.ಎಸ್.ಎ.), 2008 ರಿಂದ ಅಂತರರಾಷ್ಟ್ರೀಯ ಸಂಗೀತ ಉತ್ಸವ ಗೌರವ,
ಪಂ. ಸವಾಯಿ ಗಂಧರ್ವ ವಿದ್ಯಾರ್ಥಿವೇತನ
ಪಂ. ಭೀಮಸೇನ ಜೋಶಿ ವಿದ್ಯಾರ್ಥಿವೇತನ
ಕೇಂದ್ರ ಸರ್ಕಾರದಿಂದ ನೀಡಲಾಗುವ ರಾಷ್ಟ್ರೀಯ ವಿದ್ಯಾರ್ಥಿವೇತನ
ರಂಗಸ್ವರ್ (ಮುಂಬೈ) ಆಯೋಜಿಸಿದ ವೈ.ಬಿ. ಚವಾಣ್ ಕೇಂದ್ರ ಕಾರ್ಯಕ್ರಮ, 2010 ಭಾಗವಹಸಿದ ಮೇರು ಕಲಾವಿದರಾಗಿದ್ದಾರೆ.
*ಸತೀಶ್ ಭಟ್, ಹೆಗ್ಗಾರ್:-ಸೂರ್ಯಕಲಾ ಭಟ್ ಹಾಗೂ ಶ್ರೀ ಶ್ರೀಧರ್ ಭಟ್ ಪುತ್ರರಾದ ಇವರು ಪ್ರಾಥಮಿಕ ಅಭ್ಯಾಸ ಶ್ರೀಮತಿ ಜಾನಕಿ ಭಟ್ ಇವರಲ್ಲಿ ಪ್ರಾರಂಭಿಸಿ, ನಂತರ ಶ್ರೀ ವಿದ್ವಾನ್ ಗಣಪತಿ ಹೆಗಡೆ, ಯಲ್ಲಾಪುರ. ಇವರಲ್ಲಿ ಕಳೆದ 18 ವರ್ಷಗಳಿಂದ ಗ್ವಾಲಿಯರ್ ಕಿರಾಣಾ ಪದ್ಧತಿಯಲ್ಲಿ ಸಂಗೀತ ಅಭ್ಯಾಸ ಮುಂದುವರಿಸುತ್ತಿದ್ದಾರೆ. ಕರ್ನಾಟಕ ಕಾಲೇಜ್, ಧಾರವಾಡದಲ್ಲಿ ಬಿ, ಮ್ಯೂಸಿಕ್ ಪದವಿಯನ್ನು ಮುಗಿಸಿದ್ದಾರೆ.
ಅದೇ ರೀತಿ.ಹಾರ್ಮೋನಿಯಂ ಸ್ವತಂತ್ರ ವಾದನ ಕಾರ್ಯಕ್ರಮನ್ನೂ ಸಹ ನೀಡುತ್ತಿದ್ದು, CCRT ದೆಹಲಿ, ಇವರ ನ್ಯಾಷನಲ್ ಸ್ಕಾಲರ್ಷಿಪ್ ಪಡೆದಿದ್ದಾರೆ.. ಪುಣೆ, ಮುಂಬೈ, ದೆಹಲಿ, ಪಂಜಾಬ್, ಅಯೋಧ್ಯಾ, ಒರಿಸ್ಸಾ, ಹೈದ್ರಾಬಾದ್, ಚೆನ್ನೈ, ಕೇರಳ, ಗೋವಾ, ನಾಗಪುರ್ ಇನ್ನೂ ದೇಶದ ಹಲವಾರು ಕಡೆ ಕಾರ್ಯಕ್ರಮವನ್ನು ನೀಡುತ್ತಿದ್ದಾರೆ.ಗಾನ ಯೋಗಿ ಚಲನ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
*ಅಕ್ಷಯ ಜೋಶಿ: -ಇವರು ಪಂಡಿತ್ ಮಾಣಿಕ್ ರಾವ್ ಗೋನ್ವಾರ್ ಅವರ ಶಿಷ್ಯ ರಾಗಿ ಪ್ರಸ್ತುತ ಧಾರವಾಡದ ಡಾ. ಪಂಡಿತ್ ರವಿಕಿರಣ್ ನಕೋಡ್ ಹಾಗೂ ಪಂಡಿತ್ ರಘುನಾಥ್ ನಕೋಡ್ ಅವರಿಂದ ಸಂಗೀತವನ್ನು ಕಲಿಯುತ್ತಿದ್ದಾರೆ. ಇವರು ತಬಲಾ ಸೋಲೋ (ಏಕವ್ಯಾಖ್ಯಾನ) ಪ್ರದರ್ಶನದ ಜೊತೆಗೆ ಗಾಯನ, ವಾದ್ಯ ಸಂಗೀತ, ಜುಗಲ್‌ಬಂದಿ ಮತ್ತು ಫ್ಯೂಷನ್ ಕಾರ್ಯಕ್ರಮಗಳಿಗೆ ಪಕ್ಕವಾದ್ಯವನ್ನೂ ನುಡಿಸುತ್ತಾರೆ.
ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಲ್ಲಿ ನಡೆದ ತಬಲಾ ಸೋಲೋ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ.
ಬಿವಿವಿಎಸ್ (BVVS) ಬಾಗಲಕೋಟೆಯಲ್ಲಿ ನಡೆದ ತಬಲಾ ಸೋಲೋ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ.
ಪಂಡಿತ್ ಜಯತೀರ್ಥ ಮೇವುಂಡಿ ಅವರು ಆಯೋಜಿಸಿದ್ದ ಹುಬ್ಬಳ್ಳಿ, ಇಲಕಲ್ ಮತ್ತು ಧಾರವಾಡದ ‘ಸ್ವರತೀರ್ಥ’ ಉತ್ಸವದಲ್ಲಿ ಪ್ರದರ್ಶನ.ಕೇರಳದ ಪಯ್ಯನೂರಿನಲ್ಲಿ ನಡೆದ ‘ತುರಿಯಮ್’ ಉತ್ಸವದಲ್ಲಿ ಪ್ರದರ್ಶನ.
ಅಮೆರಿಕದ ಕಲಾವಿದರ ಯೋಜನೆಯಾದ ‘ಲೀಪ್ ಇಯರ್ ಆಫ್ ಫೆಯಿತ್ ‘ (Leap Year of Faith) ಆಲ್ಬಮ್‌ಗಾಗಿ ತಬಲಾ ವಾದನ.ಮೈಸೂರು ದಸರಾ 2023ರ ಸಂದರ್ಭದಲ್ಲಿ ತಬಲಾ ಸೋಲೋ ಪ್ರದರ್ಶನ ನೀಡಿರುವ ಕಲಾವಿದರಾಗಿದ್ದಾರೆ.
ರಾಷ್ಟ್ರೀಯ ಅಂತರರಾಷ್ಟ್ರೀಯ ಖ್ಯಾತಿಯ ಕಲಾವಿದರು ಭಾಗವಹಿಸುವ ಈ ಸಂಗೀತ ಸಂಭ್ರಮ ಕಾರ್ಯಕ್ರಮಕ್ಕೆ ಸಂಗೀತ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಿಕೊಳ್ಳುತ್ತಿದ್ದೇವೆ.

ಪತ್ರಿಕಾಗೋಷ್ಟಿಯಲ್ಲಿ ಸಂಸ್ಥೆಯ ಗೌರವ ಸಲಹೆಗಾರ ಶ್ರೀನಿವಾಸ್ ನಾಯಕ್ ಇಂದಾಜೆ ಉಪಸ್ಥಿತರಿದ್ದರು.

Related posts

ಗುರುವಾಯನಕೆರೆಯಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆ

Suddi Udaya

ಉಜಿರೆ :ಶ್ರೀ ಧ. ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿನಿಯರ ಬೀಳ್ಕೊಡುಗೆ

Suddi Udaya

ವೇಣೂರು: ಇತಿಹಾಸ ಪ್ರಸಿದ್ದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೃಢಕಲಶ, ಉತ್ಸವ ಮತ್ತು ಮಹಾರಂಗಪೂಜೆ

Suddi Udaya

ಯಕ್ಷಭಾರತಿ ದಶಮಾನೋತ್ಸವದ ಅಂಗವಾಗಿ ನಡೆಯುವ ಸನ್ಮಾನ ಕಾರ್ಯಕ್ರಮ ಮತ್ತು ದೇವಿ ಮಹಾತ್ಮೆ ಯಕ್ಷಗಾನದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬೆಳ್ತಂಗಡಿ ಪವರ್ ಆನ್ ಸಂಸ್ಥೆಯಲ್ಲಿ ಶ್ರೀ ಲಕ್ಷ್ಮಿ ಪೂಜೆ ಕೂಪನ್ ಬಿಡುಗಡೆ ಹಬ್ಬದ ಪ್ರಯುಕ್ತ ವಿಶೇಷ ರಿಯಾಯಿತಿ

Suddi Udaya

ಕಳೆಂಜ ಗ್ರಾಮ ಪಂಚಾಯತ್ ನ ಗ್ರಾಮ ಸಭೆ

Suddi Udaya
error: Content is protected !!