29.3 C
ಪುತ್ತೂರು, ಬೆಳ್ತಂಗಡಿ
October 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ: ಮುಳಿಯ ಗೋಲ್ಡ್ & ಡೈಮಂಡ್ಸ್‌ನ ‘ಡೈಮಂಡ್ ಫೆಸ್ಟ್’ಗೆ ಚಾಲನೆ

ಬೆಳ್ತಂಗಡಿ: ಮುಳಿಯ ಎಂದರೆ ಕೋಪಿಸು ಎಂದರ್ಥ. ಆದರೆ ಮುಳಿಯ ಸಂಸ್ಥೆ ಎಂದಿಗೂ ಗ್ರಾಹಕರೊಂದಿಗೆ ಕೋಪಿಸದೆ, ಸದಾ ಸೌಜನ್ಯದ ನಗುಮುಖದ ಸೇವೆ ನೀಡುತ್ತಿದೆ. ಡೈಮಂಡ್ ಎಂದರೆ ಆಕರ್ಷಣೆ. ಬೆಳ್ತಂಗಡಿ ಜನತೆಗೆ ಈ ಡೈಮಂಡ್ ಫೆಸ್ಟ್‌ನ ಸದುಪಯೋಗ ಪಡೆದುಕೊಳ್ಳುವ ಅವಕಾಶವಿದೆ. ಮುಳಿಯ ಬೆಳೆದಷ್ಟು ಲೋಕೋಪಕಾರವಾಗುತ್ತದೆ. ಸತ್ಯ, ಧರ್ಮ ಮತ್ತು ನ್ಯಾಯದ ವ್ಯಾಪಾರವನ್ನು ನಡೆಸುತ್ತಿರುವ ಮುಳಿಯ ಸಂಸ್ಥೆಯ ಡೈಮಂಡ್ ಫೆಸ್ಟ್ ಅತ್ಯಂತ ಯಶಸ್ವಿಯಾಗಲಿ” ಎಂದು ಪುಂಜಾಲಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಗಣಪತಿ ಭಟ್ ಕುಳಮರ್ವ ಹೇಳಿದರು.

ಅವರು ಸೆ.2ರಂದು ನಾಡಿನ ಶ್ರೇಷ್ಠ ಸ್ವರ್ಣೋದ್ಯಮ ಸಂಸ್ಥೆ ಮುಳಿಯ ಗೋಲ್ಡ್ & ಡೈಮಂಡ್ಸ್, ಬೆಳ್ತಂಗಡಿ ವತಿಯಿಂದ ಆಯೋಜಿಸಲಾದ ಡೈಮಂಡ್ ಫೆಸ್ಟ್’ಗೆ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಜಿರೆ ಎಸ್.ಡಿ.ಎಂ. ಕಾಲೇಜಿನ ವಾಣಿಜ್ಯ ವಿಭಾಗದ ಸಹ ಪ್ರಾಧ್ಯಾಪಕಿ ಹಾಗೂ ಮುಖ್ಯಸ್ಥೆ ಡಾ. ರತ್ನಾವತಿ ಕೆ. ಮಾತನಾಡಿ, ಮುಳಿಯ ಸಂಸ್ಥೆ ನಾಡಿನ ಜನತೆಗೆ ಡೈಮಂಡ್‌ನ ವೈವಿಧ್ಯಮಯ ಪರಿಚಯ ನೀಡುವುದರ ಜೊತೆಗೆ, ಗ್ರಾಹಕರ ಅಭಿರುಚಿ ಮತ್ತು ಆಸಕ್ತಿಗಳನ್ನು ತಿಳಿದುಕೊಳ್ಳುವ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಸಂಸ್ಥೆಯ ಯಶಸ್ಸು ಕೇವಲ ವ್ಯಾಪಾರದಿಂದ ಮಾತ್ರ ಸಾಧ್ಯವಲ್ಲ. ಗ್ರಾಹಕರ ನಂಬಿಕೆಯನ್ನು ಗಳಿಸಿ ಅದನ್ನು ನಿರಂತರವಾಗಿ ಉಳಿಸಿಕೊಳ್ಳುವುದೇ ನಿಜವಾದ ಯಶಸ್ಸು. ಮುಳಿಯ ಸಂಸ್ಥೆ ತನ್ನ ಪರಂಪರೆಯನ್ನು ಮುಂದುವರಿಸಿಕೊಂಡು, ಆಧುನಿಕತೆಯನ್ನು ಅಳವಡಿಸಿಕೊಂಡು ಬೆಳೆಯುತ್ತಿದೆ ಎಂದರು.

ವಜ್ರಾಭರಣಗಳಿಂದ ಗಾಂಭೀರ್ಯ ಹೆಚ್ಚುತ್ತದೆ: ವೇಣುಶರ್ಮ
ಮುಳಿಯ ಗೋಲ್ಡ್ & ಡೈಮಂಡ್ಸ್‌ನ ಮಾರ್ಕೆಟಿಂಗ್ ಸಲಹೆಗಾರ ವೇಣುಶರ್ಮ ಮಾತನಾಡಿ, ವಜ್ರದ ಗುಣಮಟ್ಟ ಹಾಗೂ ಅದರ ಕುರಿತ ಸಮಗ್ರ ಮಾಹಿತಿಯನ್ನು ನೀಡಿದರು. ಸುಮಾರು 80 ವರ್ಷಗಳಿಂದ ಸುದೀರ್ಘ ಸೇವೆ ನೀಡುತ್ತಾ ಬಂದಿರುವ ಮುಳಿಯ ಸಂಸ್ಥೆಯನ್ನು ಬೆಳ್ತಂಗಡಿ ಜನತೆ ವಿಶ್ವಾಸದಿಂದ ಒಪ್ಪಿಕೊಂಡಿದ್ದಾರೆ. ವಜ್ರಾಭರಣಗಳನ್ನು ಧರಿಸುವುದರಿಂದ ವ್ಯಕ್ತಿತ್ವದ ಗಾಂಭೀರ್ಯ ಮತ್ತಷ್ಟು ಹೆಚ್ಚುತ್ತದೆ. ಮುಳಿಯ ಸಂಸ್ಥೆ ಪ್ರತಿಬಾರಿಯೂ ಹೊಸ ಹೊಸ ವಿನ್ಯಾಸಗಳನ್ನು ಪರಿಚಯಿಸುತ್ತಿದ್ದು, ಸಂಸ್ಥೆಯಲ್ಲಿರುವ ವೈವಿಧ್ಯಮಯ ವಿನ್ಯಾಸದ ಆಭರಣಗಳು ಬೆಳ್ತಂಗಡಿಯಲ್ಲಿ ಬೇರೆಡೆ ಸುಲಭವಾಗಿ ಲಭ್ಯವಿಲ್ಲ ಎಂದರು.

ಉಜಿರೆ ಎಸ್.ಡಿ.ಎಂ. ಪಿಯುಸಿ ಬಾಲಕಿಯರ ವಸತಿ ನಿಲಯದ ಮುಖ್ಯ ವಾರ್ಡನ್ ಕೃತಜ್ಞಾ ಜೈನ್ ಮಾತನಾಡಿ, ಮುಳಿಯ ಎಂದರೆ ನನಗೆ ವಿಶೇಷವಾಗಿ ನಂಬಿಕೆಯ ಸಂಕೇತ. ಗ್ರಾಹಕರು ಬಯಸುವಂತಹ ವೈವಿಧ್ಯಮಯ ವಿನ್ಯಾಸಗಳು ಇಲ್ಲಿ ಲಭ್ಯವಿವೆ. ಮುಳಿಯ ಸಂಸ್ಥೆಯ ಶಕ್ತಿ ಅದರ ಸಿಬ್ಬಂದಿ. ಇನ್ನಷ್ಟು ಶಾಖೆಗಳು ಆರಂಭಗೊಳ್ಳುವ ಮೂಲಕ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿ ಎಂದು ಹಾರೈಸಿದರು.

ವೇದಿಕೆಯಲ್ಲಿ ಮುಳಿಯ ಎಕ್ಸಿಕ್ಯೂಟಿವ್ ಅಸಿಸ್ಟೆಂಟ್ ಶಿವಕೃಷ್ಣ ಮೂರ್ತಿ, ಬೆಳ್ತಂಗಡಿ ಮುಳಿಯ ಗೋಲ್ಡ್ & ಡೈಮಂಡ್ಸ್‌ನ ಉಪ ವ್ಯವಸ್ಥಾಪಕ ಸುಧೀರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಮುನ್ನ ಗಾಯಕ ಸುನಿಲ್ ದೇವಾಡಿಗ ಭಕ್ತಿಗೀತೆ ಹಾಡಿದರು. ಶ್ರಾವ್ಯ ಗೌಡ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಸಿಬ್ಬಂದಿ ಸಹಕರಿಸಿದರು.

ಸಿಲ್ವರ್ ಮ್ಯಾರಥಾನ್: ಮೊದಲ ಹಂತದ ಲಕ್ಕಿ ಡ್ರಾ ಡೈಮಂಡ್ ಫೆಸ್ಟ್ ಅನಾವರಣ ಕಾರ್ಯಕ್ರಮದ ಸಂದರ್ಭದಲ್ಲಿ ಸಿಲ್ವರ್ ಮ್ಯಾರಥಾನ್‌ನ ಪ್ರಥಮ ಹಂತದ ಲಕ್ಕಿ ಡ್ರಾವನ್ನು ಗಣ್ಯರು ನೆರವೇರಿಸಿದರು. ಅದರಲ್ಲಿ ಸೌಜನ್ಯ, ಮಧುಶ್ರೀ ಹಾಗೂ ಮಿಥುನ್ ವಿ. ಶೆಟ್ಟಿ ವಿಜೇತರಾಗಿ ಆಯ್ಕೆಯಾದರು.


Related posts

ಉಜಿರೆೆ ಶ್ರೀ ಧ.ಮಂ ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆಯಿಂದ (NDRF) ಮಾಹಿತಿ ಕಾರ್ಯಾಗಾರ

Suddi Udaya

ಅಪಘಾತದಲ್ಲಿ ಮೃತರಾದ ನಾವೂರು ಚಂದ್ರಹಾಸ ರವರ ಕುಟುಂಬಕ್ಕೆ ನೆರವಾಗುವಂತೆ ಮನವಿ

Suddi Udaya

ನಿಡಿಗಲ್ ಲೋಕನಾಡು ಶ್ರೀ ಲೋಕನಾಥೇಶ್ವರ ದೇವರ ವರ್ಷಾವಧಿ ಜಾತ್ರೆ-ನಡ್ವಾಲ್ ಸಿರಿಜಾತ್ರೆ

Suddi Udaya

ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಸಮಿತಿಯ ವತಿಯಿಂದ ಖಂಡನೆ

Suddi Udaya

ಜೂ. 3: ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನಿಂದ ‘ದಿ ಕೇರಳ ಸ್ಟೋರಿ’ ಚಲನಚಿತ್ರದ ಉಚಿತ ಪ್ರದರ್ಶನ

Suddi Udaya

ಬೆಳ್ತಂಗಡಿ: ನಾಲ್ಕು ಮಂದಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಎಸ್.ಐ.ಟಿ ವಿಚಾರಣೆಗೆ ಹಾಜರು

Suddi Udaya
error: Content is protected !!