24.2 C
ಪುತ್ತೂರು, ಬೆಳ್ತಂಗಡಿ
October 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯಲ್ಲಿ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ – ಭಾರತ ಮತ್ತು ಜಪಾನ್

ಉಜಿರೆ: ಭಾರತ ಮತ್ತು ಜಪಾನ್ ನಡುವಿನ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದ ಅಂಗವಾಗಿ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ಕಲಾ ವಿಭಾಗದ ವಿದ್ಯಾರ್ಥಿಗಳೊಂದಿಗೆ ಜಪಾನಿನ ತಂಡವೊಂದು ಒಂದು ತಿಂಗಳ ಕಾಲ ಎಸ್.ಡಿ.ಎಂ. (ಸ್ವಾಯತ್ತ) ಪದವಿ ಕಾಲೇಜಿನಲ್ಲಿ ಅಧ್ಯಯನ ನಡೆಸುತ್ತಿದೆ.

ಈ ತಂಡವು ಇಂದು ಎಸ್.ಡಿ.ಎಂ. ಮಹಿಳಾ ಐ.ಟಿ.ಐ.ಗೆ ಭೇಟಿ ನೀಡಿ, ವಿದ್ಯಾರ್ಥಿನಿಯರು ತಯಾರಿಸಿದ ವಿಶೇಷ ಹೊಲಿಗೆ ವಿನ್ಯಾಸಗಳು ಹಾಗೂ ಕರಕುಶಲ ವಸ್ತುಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿತು. ನಂತರ ಜಪಾನ್‌ನಲ್ಲಿ ತಯಾರಿಸುವ ಉಡುಪುಗಳು, ಉಣ್ಣೆಯ ಬ್ಯಾಗ್‌ಗಳು, ವಿವಿಧ ಕರಕುಶಲ ವಸ್ತುಗಳು ಹಾಗೂ ಕೈಮಗ್ಗದ ಕುರಿತು ಮಾಹಿತಿಯನ್ನು ಹಂಚಿಕೊಂಡರು.

ಸಿರಿ ಸಂಸ್ಥೆಯ ಮಾಜಿ ನಿರ್ದೇಶಕಿ, ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷೆ ಹಾಗೂ ಜಪಾನ್ ತಂಡದ ಸಂಚಾಲಕಿ ಮನೋರಮ ಅವರು ಕಾರ್ಯಕ್ರಮಕ್ಕೆ ಸೂಕ್ತ ಸಹಕಾರ ನೀಡಿ, ಜಪಾನ್ ತಂಡದ ಭೇಟಿಯ ಉದ್ದೇಶಗಳನ್ನು ಹಂಚಿಕೊಂಡರು. ಕರಾವಳಿಯ ಹೆಮ್ಮೆಯ ಕಲೆಯಾದ ಯಕ್ಷಗಾನ ಹಾಗೂ ಸ್ಥಳೀಯ ಸಂಸ್ಕೃತಿಯನ್ನು ಜಾಗತಿಕ ಮಟ್ಟಕ್ಕೆ ಪರಿಚಯಿಸುತ್ತಿರುವ ಎಸ್‌ಡಿಎಂ ಕಾಲೇಜಿನ ಬಿ.ಎ. ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ ಸಂಜನಾ ಅವರು ಕೂಡಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಭೇಟಿಯು ಎಸ್.ಡಿ.ಎಂ. ಮಹಿಳಾ ಐ.ಟಿ.ಐ.ಯ ವಿದ್ಯಾರ್ಥಿನಿಯರು ಮತ್ತು ಜಪಾನಿನ ತಂಡದ ನಡುವೆ ಪರಸ್ಪರ ಸಂವಹನ, ಸಂಸ್ಕೃತಿ, ಸಂಪ್ರದಾಯ, ಅನುಭವ ಮತ್ತು ಆಲೋಚನೆಗಳನ್ನು ಹಂಚಿಕೊಳ್ಳಲು ಉತ್ತಮ ಅವಕಾಶವನ್ನು ಒದಗಿಸಿತು.

ಈ ರೀತಿಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳು ಸ್ನೇಹ, ಪರಸ್ಪರ ತಿಳುವಳಿಕೆ ಮತ್ತು ಅಂತರರಾಷ್ಟ್ರೀಯ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಸಹಕಾರಿಯಾಗುತ್ತವೆ ಎಂದು ಸಂಸ್ಥೆಯ ಪ್ರಾಂಶುಪಾಲರಾದ ವಿ. ಪ್ರಕಾಶ್ ಕಾಮತ್ ಅಭಿಪ್ರಾಯ ವ್ಯಕ್ತಪಡಿಸಿದರು.

Related posts

ಮೇಲಂತಬೆಟ್ಟು ಕುಸುಮಾವತಿ ನಿಧನ

Suddi Udaya

ಮುಳಿಯ ಜ್ಯುವೆಲ್ಸ್‌ನಲ್ಲಿ ಗ್ರಾಹಕರ ಬೇಡಿಕೆ ಮೇರೆಗೆ ಅ.15 ರವರೆಗೆ ಡೈಮಂಡ್ ಫೆಸ್ಟ್ ಅವಧಿ ವಿಸ್ತರಣೆ: ಇಂದಿನಿಂದ ಚಿನ್ನೋತ್ಸವ ಪ್ರಾರಂಭ, ರೂ.20 ಸಾವಿರದ ಡೈಮಂಡ್ ಖರೀದಿಸಿ 5 ಕಾರು ಗೆಲ್ಲುವ ಸುವರ್ಣವಕಾಶ

Suddi Udaya

ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾದ ಎರಡು ಯು.ಡಿ.ಆರ್ ಹಾಗೂ ಒಂದು ದೂರರ್ಜಿ ಎಸ್.ಐ.ಟಿ ತನಿಖೆಗೆ ವರ್ಗಾವಣೆ

Suddi Udaya

ಬೆಳ್ತಂಗಡಿ ಇತಿಹಾಸದಲ್ಲಿ ಪ್ರಥಮ ಹಬ್ಬ: ಬೆಳ್ತಂಗಡಿ ಸಂಭ್ರಮ ಸಂಪನ್ನ,

Suddi Udaya

ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪುನರ್ವಸತಿ ಹೋರಾಟ ಸಮಿತಿಯಿಂದ ಶಾಸಕ ಹರೀಶ್ ಪೂಂಜರ ಭೇಟಿ, ಮನವಿ ಸಲ್ಲಿಕೆ

Suddi Udaya

ವೇಣೂರು: 26ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ; ಅಧ್ಯಕ್ಷರಾಗಿ ಜಗದೀಶ್ ಭಟ್ , ಕಾರ್ಯದರ್ಶಿಯಾಗಿ ಪಿ. ಪ್ರಶಾಂತ್ ಹೆಬ್ಬಾರ್

Suddi Udaya
error: Content is protected !!