ಉಜಿರೆ : ತರಬೇತಿಯು ವ್ಯಕ್ತಿತ್ವದ ಬೆಳವಣಿಗೆಯೊಂದಿಗೆ ಕೌಶಲ್ಯದ ಅಭಿವೃದ್ಧಿಗೆ ಕಾರಣವಾಗಿದೆ. ವ್ಯಕ್ತಿ ತನ್ನೊಳಗೆ ಸಕಾರಾತ್ಮಕ ಬದಲಾವಣೆಗಳನ್ನು ಮಾಡಿಕೊಳ್ಳುವಲ್ಲಿ ವ್ಯಕ್ತಿತ್ವ ವಿಕಸನ ತರಬೇತಿಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ ಇಂತಹ ತರಬೇತಿಯ ಸದುಪಯೋಗವನ್ನು ಎಲ್ಲರು ಪಡೆದುಕೊಳ್ಳಬೇಕು ಎಂದು ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ನಿವೃತ್ತ ಪ್ರಾಂಶುಪಾಲರು, ಜೆಸಿಐ ಇಂಡಿಯಾದ ತರಬೇತುದಾರರು ಡಾ. ಕುಮಾರ್ ಹೆಗ್ಡೆ ಹೇಳಿದರು.
ಇವರು ಜೆಸಿಐ ಉಜಿರೆ ಘಟಕದ ಆತಿಥ್ಯದಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀ, ಜೆಸಿಐ ಉಪ್ಪಿನಂಗಡಿ ಮತ್ತು ಜೆಸಿಐ ಮಡಂತ್ಯಾರ್ ಘಟಕಗಳ ಸಹಕಾರದೊಂದಿಗೆ ನಡೆಯುವ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಎಸ್‌ಡಿಎಂ ಪಾಲಿಟೆಕ್ನಿಕ್ ವಿಭಾಗದ ಪ್ರಾಂಶುಪಾಲ ಸಂತೋಷ್ ರವರು ಸಂದರ್ಭೋಚಿತ ಮಾತುಗಳ ಮೂಲಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫಟಕದ ಅಧ್ಯಕ್ಷ ಮಹಮ್ಮದ್ ಮಿರ್ಷಾದ್ ವಹಿಸಿ ಪ್ರಾಸ್ತಾವಿಕ ಮಾತುಗಳ ಮೂಲಕ ಎಲ್ಲರನ್ನು ಸ್ವಾಗತಿಸಿದರು. ಜೇಸಿ ಸುಮಿತ್ರಾ ಜೆಸಿವಾಣಿ ವಾಚಿಸಿದರು.
ಜೇಸಿ ಅವನೀಶ್ ತರಬೇತುದಾರರ ಪರಿಚಯ ಮಾಡಿದರು. ಜೆಸಿ ಹೇಮಾವತಿ ಕೆ ಅತಿಥಿಗಳನ್ನು ವೇದಿಕೆ ಆಹ್ವಾನ ಮಾಡಿದರು.
ರಾಷ್ಟ್ರೀಯ ತರಬೇತುದಾರರಾದ ಜೆಸಿಐ ಸೆನೆಟರ್ ವೇಣುಗೋಪಾಲ್ ಎಸ್ ಜೆ. ಲೀಡ್ ವಿದ್ ಇನ್ ಶೀರ್ಷಿಕೆ ಯಡಿಯಲ್ಲಿ ನಮ್ಮೊಳಗೆ ನಾಯಕತ್ವ ಗುಣಗಳನ್ನು ಬೆಳೆಸುವ ಬಗ್ಗೆ ತರಬೇತಿಯನ್ನು ನಡೆಸಿಕೊಟ್ಟರು. 40ಕ್ಕೂ ಅಧಿಕ ಮಂದಿ ತರಬೇತಿಯಲ್ಲಿ ಪಾಲ್ಗೊಂಡಿದ್ದರು.
ಸಮಾರೋಪ ಸಮಾರಂಭ : ತರಬೇತಿ ಕಾರ್ಯಕ್ರಮದ ನಂತರ ವೇದಿಕೆಯಲ್ಲಿ ಉಪಸ್ಥಿತರಿದ್ದ ಪೂರ್ವ ವಲಯ ಉಪಾಧ್ಯಕ್ಷರಾದ ಪ್ರಶಾಂತ್ ಲಾಯಿಲಾ ಮಾತನಾಡಿ ತರಬೇತಿಯು ವ್ಯಕ್ತಿತ್ವ ವಿಕಸನದೊಂದಿಗೆ ಉತ್ತಮ ನಾಯಕನನ್ನು ಬೆಳೆಸುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ ಎಂದು ಹೇಳಿದರು. ಈ ದಿನದ ತರಬೇತಿಯು ಪರಿಣಾಮಕಾರಿಯಾಗಿ ಮೂಡಿಬಂದಿದೆ ಎಂದು ಅಭಿಪ್ರಾಯ ಪಟ್ಟರು. ನಿಕಟ ಪೂರ್ವಾಧ್ಯಕ್ಷೆ ಆಶಲತಾ ಪ್ರಶಾಂತ್ ಮಾತನಾಡಿ ತನ್ನ ಅವಧಿಯಲ್ಲಿ ರೂಪುಗೊಂಡ ಜೆಸಿಐ ಉಜಿರೆ ಘಟಕ ಕ್ರಿಯಾಶೀಲವಾಗಿ ಮುನ್ನಡೆಯುತ್ತಿದ್ದು ವಲಯ ಮಟ್ಟದಲ್ಲಿ ತನ್ನದೇ ಆದ ಚಾಪನ್ನು ಮೂಡಿಸಿದೆ. ಜೆಸಿಐ ವೇದಿಕೆಯು ಪರಿಣಾಮಕಾರಿ ಮಾತುಗಾರಿಕೆಗೆ ಬುನಾದಿಯನ್ನು ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.
ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಗೌರವಾರ್ಪಣೆ
ಈ ಸಂದರ್ಭದಲ್ಲಿ ಜೆಸಿಐ ಉಜಿರೆ ಘಟಕದ ವತಿಯಿಂದ ಎಸ್ ಡಿ ಎಂ. ಕಾಲೇಜಿನ ಪಾಲಿಟೆಕ್ನಿಕ್ ವಿಭಾಗದ ಕ್ರೀಡಾ ತರಬೇತುದಾರ, ರಾಷ್ಟ್ರಮಟ್ಟದ ಕ್ರೀಡಾಪಟು ಜಸ್ವಂತ್ ಗೌಡ ಹಾಗೂ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಕ್ರೀಡಾ ತರಬೇತುದಾರ ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ ಪ್ರವೀಣ್ ಎನ್ ಇವರಿಗೆ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ – ಕ್ರೀಡಾ ರತ್ನ ಪುರಸ್ಕಾರ ನೀಡಿ ಗೌರವಿಸಲಾಯಿತು.
ಘಟಕದ ಕಾರ್ಯದರ್ಶಿ ಭವ್ಯಶ್ರೀ ಕೀರ್ತಿರಾಜ್, ಜೇಸಿ ಸದಸ್ಯ ಅಬ್ದುಲ್ ಖಾದರ್ ಸನ್ಮಾನ ಪತ್ರ ವಾಚಿಸಿದರು. ಕಾರ್ಯಕ್ರಮ ಸಂಯೋಜಕ ಜೆಸಿ ಜನಾರ್ಧನ್ ರವರು ಧನ್ಯವಾದವಿತ್ತರು.
ಜೆಸಿ ಉಪ್ಪಿನಂಗಡಿ ಘಟಕ ಅಧ್ಯಕ್ಷ ಜೆಸಿ ಅವಿನಾಶ್, ಜೇಸಿಐ ಬೆಳ್ತಂಗಡಿ ಘಟಕ ಅಧ್ಯಕ್ಷ ಜಿತೇಶ್, ಪೂರ್ವಾಧ್ಯಕ್ಷ ಪ್ರಸಾದ್ ಬಿ. ಎಸ್. ಮಹಿಳಾ ಜೇಸಿ ಸಂಯೋಜಕಿ ಪ್ರತಿಮ ಗೌಡ, ಜೆಸಿ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.











