25.5 C
ಪುತ್ತೂರು, ಬೆಳ್ತಂಗಡಿ
October 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ದಿಡುಪೆ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿಯ 40 ನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಮಲವಂತಿಗೆ: ದಿಡುಪೆ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿಯಿಂದ ಸೆ. 14 ಮತ್ತು 15 ರಂದು ನಡೆಯುವ 40 ನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಸೆ.2ರಂದು ನಡೆಯಿತು.

ಮುಖ್ಯ ಅತಿಥಿಗಳಾಗಿ ಹಿರಿಯರು ಪೂವನಿ ಗೌಡ ನೆಕ್ಕಿಲು ,ಮಲವಂತಿಗೆ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ ದಿನೇಶ್ ಗೌಡ ಕಜಕ್ಕೆ, ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ರೋಹಿಣಿ ಜಯವರ್ಮ ಗೌಡ ಕಲ್ಬೆಟ್ಟು, ಮಿತ್ತಬಾಗಿಲು ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರಶೇಖರಗೌಡ ತಂಗಿತ್ತಿಪಾಲು ಇವರ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ ಅಧ್ಯಕ್ಷ ತೀಕ್ಷಿತ್ ಕೆ.ಕಲ್ಬೆಟ್ಟು, ಗೌರವಾಧ್ಯಕ್ಷರಾದ ಕರಿಯ ಗೌಡ ಕಾರ್ಯದರ್ಶಿ ಜಯಂತ್ ಹೆಗ್ಡೆ, ಕಾರ್ಯದರ್ಶಿ ರಾಜೇಶ್ ಎಮ್, ರಮೇಶ್ ವಿದ್ಯಾನಗರ, ಶ್ರೀಮತಿ ಮೋಹಿನಿ ಮಂಟಮೆ ಉಪಾಧ್ಯಕ್ಷರಾದ ಯೋಗೀಶ್ ಗೌಡ, ಸಂದೇಶ ಗೌಡ, ಪದ್ಮನಾಭ ಗೌಡ ಕೆಮ್ಮಟೆ, ನಿಶಾಂಕ್ ಗೌಡ ಪಾನಿಕ್ಕಲ್ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

Related posts

ಉಜಿರೆಯ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯ ಗೈಡ್ ಕ್ಯಾಪ್ಟನ್ ಉಷಾ. ಕೆ ರವರು ಹಿಮಾಲಯ ವುಡ್ ಬ್ಯಾಡ್ಜ್ ತರಬೇತಿಯಲ್ಲಿ ಅರ್ಹತೆ

Suddi Udaya

ಬೆಂಗಳೂರು ಸೆಮಿಕಂಡಕ್ಟರ್ ವಿನ್ಯಾಸ ಸಂಸ್ಥೆ: 280 ಕೋಟಿ ರೂ. ಗೆ ಇನ್ಫೋಸಿಸ್ ಸ್ವಾಧೀನ

Suddi Udaya

ಎಸ್‌ಡಿಎಂ ಆರೋಹಂ-2026 ಸಮಾರೋಪ ಸಮಾರಂಭ

Suddi Udaya

ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಬೆಳ್ತಂಗಡಿ ತಾಲೂಕು ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

Suddi Udaya

ಆಕಸ್ಮಿಕವಾಗಿ ನದಿಗೆ ಬಿದ್ದು ಬಾಲಕ ಸಾವು

Suddi Udaya

ಇತ್ತೀಚೆಗೆ ಮೃತರಾದ ಕುಕ್ಕಪ್ಪ ಗೌಡರವರ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya
error: Content is protected !!