September 4, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ: ಪ್ರಾಧ್ಯಾಪಕ ಮಹಮ್ಮದ್ ಇಕ್ಬಾಲ್ ರವರಿಗೆ ಡಾಕ್ಟರೇಟ್

ಬೆಳ್ತಂಗಡಿ; ಉಜಿರೆ ಗ್ರಾಮದ ಮಾಚಾರು ನಿವಾಸಿ, ಪ್ರಸ್ತುತ ಡಾ. ಪಿ. ದಯಾನಂದ ಪೈ ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಮಂಗಳೂರು ಇಲ್ಲಿ ಮನೋವಿಜ್ಞಾನ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಮಹಮ್ಮದ್ ಇಕ್ಬಾಲ್ ಇವರಿಗೆ ತಮಿಳುನಾಡಿನ ಪೆರಿಯಾರ್ ವಿಶ್ವವಿದ್ಯಾಲಯ ಸೇಲಂ ಇಲ್ಲಿಂದ ಡಾಕ್ಟರೇಟ್ ಪದವಿ ಲಭಿಸಿದೆ.

ಮಾಚಾರು ಬಂಡಸಾಲೆ ನಿವಾಸಿ ದಿ. ಅಬ್ದುಲ್ ರಝಾಕ್ ಮತ್ತು ನಫೀಸ ದಂಪತಿಯ ಪುತ್ರರಾಗಿರುವ ಅವರು ಡಾ. ಜೆ ವೆಂಕಟಾಚಲಂ ಅವರ ಮಾರ್ಗದರ್ಶನದಲ್ಲಿ “ಎಫೆಕ್ಟ್ ಆಫ್ ಜೆಪಿಎಂ‌ಆರ್ ಇಂಟರ್ವೆನ್ಷನ್ ಇನ್ ರೆಡ್ಯೂಸಿಂಗ್ ದ ಟೆಸ್ಟ್ ಆಂಗ್ಸೈಟಿ ಅಮಂಗ್ ಕಾಲೇಜ್ ಸ್ಟೂಡೆಂಟ್ಸ್” ಎಂಬ ವಿಷಯದಲ್ಲಿ ಮಂಡಿಸಿದ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಲಭಿಸಿದೆ.

ಉಜಿರೆ ಎಸ್ ಡಿ ಎಮ್ ಕಾಲೇಜಿನಲ್ಲಿ ಮನೋವಿಜ್ಞಾನ ವಿಭಾಗದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದಿರುವ ಮಹಮ್ಮದ್ ಇಕ್ಬಾಲ್ ಅವರು ಈ‌ ಹಿಂದೆಯೇ ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಎಂಫಿಲ್ ಪದವಿ ಪಡೆದಿದ್ದರು.
ಮುಂಡಾಜೆ ಪ.ಪೂ. ಕಾಲೇಜಿನಲ್ಲಿ ಮನೋವಿಜ್ಞಾನ ಉಪನ್ಯಾಸಕರಾಗಿ, ಗೇರುಕಟ್ಟೆ ಮನ್ಶರ್ ಅಕಾಡಮಿಯ ಪ್ರಾಂಶುಪಾಲರಾಗಿ, ಕುಂದಾಪುರದ ಭಂಡಾರ್ಕರ್ ಕಾಲೇಜು ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು ತೀರ್ಥಹಳ್ಳಿ ಇಲ್ಲಿ ಪ್ರಾಧ್ಯಾಪಕರಾಗಿ ವೃತ್ತಿ ಜೀವನ ನಡೆಸಿ ಪ್ರಸ್ತುತ ಮಂಗಳೂರಿನಲ್ಲಿ ವೃತ್ತಿ ನಿರತರಾಗಿದ್ದಾರೆ. ಉತ್ತಮ ಸಂಘಟಕ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿರುವ ಅವರು ಕಾಜೂರು ಶಿಕ್ಷಣ ಸಂಸ್ಥೆಗಳ ಅಕಾಡಮಿಕ್ ಸಲಹೆಗಾರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

Related posts

ಮಲವಂತಿಗೆ ಗ್ರಾ.ಪಂ. ಪ್ರಥಮ ಸುತ್ತಿನ ಗ್ರಾಮಸಭೆ

Suddi Udaya

ಸೌತಡ್ಕ ಮಹಾಗಣಪತಿ ದೇವಸ್ಥಾನದಲ್ಲಿ ‘ಅಭಯೋದ ಸಿರಿ ಅಪ್ಪೆ ರಕ್ತೇಶ್ವರಿ’ ತುಳು ಭಕ್ತಿ ಗೀತೆ ಬಿಡುಗಡೆ

Suddi Udaya

ಅರಸಿನಮಕ್ಕಿ ಶ್ರೀ ಗೋಪಾಲಕೃಷ್ಣ ಅ.ಹಿ.ಪ್ರಾ. ಶಾಲೆಗೆ ಸಮಗ್ರ ಪ್ರಶಸ್ತಿ

Suddi Udaya

ಪಟ್ರಮೆ: ಚಾಲಕನ ನಿಯಂತ್ರಣ ತಪ್ಪಿ ಹೊಳೆ ಬದಿಗೆ ಬಿದ್ದ ಕಾರು

Suddi Udaya

ಬೆಳ್ತಂಗಡಿ: ಟ್ರಾಫಿಕ್, ಆರ್.ಟಿ.ಒ. ನಿಂದ ಶಾಲಾ ವಾಹನಗಳ ತಪಸಾಣೆ

Suddi Udaya

ಇಂದಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

Suddi Udaya
error: Content is protected !!