ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಶ್ರೀಕೃಷ್ಣ ಜನ್ಮಾಷ್ಟಮಿಯ ಆಚರಣೆಯು “ಸಾಮೂಹಿಕ ವಿಷ್ಣು ಸಹಸ್ರನಾಮಾವಳಿ ಪಠಣದ ಜೊತೆಯಲ್ಲಿ ತುಳಸಿ ನಾಮಾರ್ಚನೆಯ” ಮೂಲಕ ಆರಂಭಗೊಂಡಿತು.

ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಜಾತಿ ಭೇದ ಮರೆತು ಭಾಗವಹಿಸಿ ಪಾವನರಾದರು. ಈ ಸಂದರ್ಭದಲ್ಲಿ ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ (ರಿ) ಇದರ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಪದಾಧಿಕಾರಿಗಳು, ಸದಸ್ಯರು ಹಾಗೂ ಭಕ್ತರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಸಹಸ್ರನಾಮಾವಳಿ ಪಠಣವನ್ನು ಪ್ರಧಾನ ಅರ್ಚಕರಾದ ದಿನೇಶ ಭಟ್ಟ ನೆರವೇರಿಸಿ ಕೊಟ್ಟರು.


ಕಳೆದ ನಾಲ್ಕು ದಶಕಗಳಿಂದ ನಾವೂರಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯು ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದ್ದು, ಶ್ರೀ ಗೋಪಾಲಕೃಷ್ಣನ ಪ್ರತಿಷ್ಠಾಪನೆಯಾದ ನಂತರ ದೇವಸ್ಥಾನದಲ್ಲಿ ಕಾರ್ಯಕ್ರಮವು ಗ್ರಾಮದ ಹಾಗೂ ಪರಿಸರದ ಅನೇಕ ಭಕ್ತರ ಪಾಲ್ಗೊಳ್ಳುವಿಕೆಯ ಮೂಲಕ ಅತ್ಯಂತ ವಿಜೃಂಭಣೆಯಿಂದ ನಡೆದು ಬರುತ್ತಿದ್ದು, ಈ ವರ್ಷವೂ ಬೆಳಗಿನ ಪೂಜಾ ಕಾರ್ಯಕ್ರಮಗಳು ವಿಧ್ಯುಕ್ತವಾಗಿ ನಡೆದಿರುತ್ತವೆ. ಮಧ್ಯಾಹ್ನ ಮಹಾಪೂಜೆ, ಸಾಯಂಕಾಲ ರಂಗಪೂಜೆಯೂ ನಡೆಯಲಿದೆ. ಇಡೀ ದಿನ ಮಕ್ಕಳಿಗೆ, ಯುವಕರಿಗೆ, ಯುವತಿಯರಿಗೆ ಅನೇಕ ಕಾರ್ಯಕ್ರಮಗಳು, ಅನೇಕ ಸ್ಪರ್ಧೆಗಳು ಆಯೋಜನೆಗೊಳ್ಳಲಿವೆ.












