September 4, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ವೇಣೂರು: 26ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ; ಅಧ್ಯಕ್ಷರಾಗಿ ಜಗದೀಶ್ ಭಟ್ , ಕಾರ್ಯದರ್ಶಿಯಾಗಿ ಪಿ. ಪ್ರಶಾಂತ್ ಹೆಬ್ಬಾರ್

ವೇಣೂರು: ಫಲ್ಗುಣಿ ಸೇವಾ ಸಂಘ ಸಾಮಾಜಿಕ, ಸಾಂಸ್ಕೃತಿಕ ಸೇವಾ ಸಂಸ್ಥೆಯ ಆಶ್ರಯದಲ್ಲಿ ನಡೆಯುವ ವೇಣೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ನೂತನ ಅಧ್ಯಕ್ಷರಾಗಿ ವೇಣೂರು ಶ್ರೀನಿಧಿ ಎಂಟರ್ ಪ್ರೈಸಸ್‌ನ ಮಾಲಕರು ಪಿ. ಜಗದೀಶ್ ಭಟ್ ಶ್ರೀನಿಧಿ ಹಾಗೂ ಕಾರ್ಯದರ್ಶಿಯಾಗಿ ಪಿ. ಪ್ರಶಾಂತ್ ಹೆಬ್ಬಾರ್, ಸಮಿತಿಯ ಕೋಶಾಧಿಕಾರಿಗಳಾಗಿ ಜಗದೀಶ್ಚಂದ್ರ ಡಿ.ಕೆ. ಹಾಗೂ ಪಿ. ರಮೇಶ್ ಪೂಜಾರಿ ಪಡ್ಡಾಯಿಮಜಲು ಆಯ್ಕೆಯಾಗಿದ್ದಾರೆ.

ಫಲ್ಗುಣಿ ಸೇವಾ ಸಂಘ (ರಿ.) ವೇಣೂರು ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ 26ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಸೆ. 14 ಮತ್ತು 15 ರಂದು ವಿವಿಧ ಧಾರ್ಮಿಕ, ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.

ಉಪಾಧ್ಯಕ್ಷರುಗಳಾಗಿ ಕೆ. ಭಾಸ್ಕರ ಪೈ, ಸುದತ್ ಜೈನ್, ಪ್ರವೀಣ್ ಭಂಡಾರಿ, ನೇಮಯ್ಯ ಕುಲಾಲ್, ನವೀನ್ ಪಚ್ಚೇರಿ, ಸುಧೀರ್ ಭಂಡಾರಿ ಅವರನ್ನು ಆಯ್ಕೆ ಮಾಡಲಾಯಿತು. ಅಲ್ಲದೆ ಸಮಿತಿಗೆ 50 ಮಂದಿ ಸದಸ್ಯರನ್ನು ನೇಮಿಸಲಾಯಿತು. ಫಲ್ಗುಣಿ ಸೇವಾ ಸಂಘ (ರಿ.) ವೇಣೂರು ಇದರ ಸ್ಥಾಪಕಾಧ್ಯಕ್ಷರಾದ ವಿ.ಎಸ್. ಜಯರಾಜ್ ಅವರ ಉಪಸ್ಥಿತಿಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು.

Related posts

ಒಂದನೇ ತರಗತಿ ಸೇರಲು ವಯೋಮಿತಿ ಸಡಿಲಿಕೆ : 5 ವರ್ಷ 5 ತಿಂಗಳು ತುಂಬಿದ್ದರೆ 1ನೇ ತರಗತಿಗೆ ದಾಖಲಾತಿಗೆ ಅವಕಾಶ

Suddi Udaya

ನಿಡ್ಲೆಯ ಪ್ರತಿಷ್ಠಿತ ಸಂಸ್ಥೆ ಅಗ್ರಿಲೀಫ್ ಗೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭೇಟಿ

Suddi Udaya

ಶ್ರೀ ಧರ್ಮರಸು ದೈವ ಕೊಡಮಣಿತ್ತಾಯ ಮತ್ತು ಸಪರಿವಾರ ದೈವಗಳ ಕ್ಷೇತ್ರದಲ್ಲಿ ದಾರಂದ ಪ್ರತಿಷ್ಠೆ: ಡಿಸೆಂಬರ್ ತಿಂಗಳಲ್ಲಿ ಬ್ರಹ್ಮಕಲಶೋತ್ಸವಕ್ಕೆ ಸಿದ್ದತೆ, ಭರದಿಂದ ಸಾಗುತ್ತಿದೆ ಜೀರ್ಣೋದ್ಧಾರ ಕೆಲಸ

Suddi Udaya

ಸೌತಡ್ಕ ಮಹಾಗಣಪತಿ ಕ್ಷೇತ್ರದಲ್ಲಿ ಕಿರಣ್ ಆಗ್ರೋಟೆಕ್ ಉಜಿರೆ -ಕೊಕ್ಕಡ ಇವರ 2025ರ ಕ್ಯಾಲೆಂಡರ್ ಬಿಡುಗಡೆ

Suddi Udaya

ಅ.20: ಬಳಂಜದಲ್ಲಿ ದೀಪಾವಳಿ ಪ್ರಯುಕ್ತ 2ನೇ ವರ್ಷದ ದೋಸೆ ಹಬ್ಬ ಹಾಗೂ ಲೂಡೋ ಟೂರ್ನಮೆಂಟ್

Suddi Udaya

ಕೊಕ್ಕಡ: ಶ್ರೀಮತಿ ಮೋನಕ್ಕ ನಿಧನ

Suddi Udaya
error: Content is protected !!