September 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಲ್ಲೇರಿ: ಕರಾಯ ಮೂರ್ತೆದಾರರ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

ಬೆಳ್ತಂಗಡಿ : ಕಲ್ಲೇರಿ ಕರಾಯ ಮೂರ್ತೆದಾರರ ಸೇವಾ ಸಹಕಾರಿ ಸಂಘದ 2025-26 ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು ಅಧ್ಯಕ್ಷತೆಯಲ್ಲಿ ಕಲ್ಲೇರಿ ಬಾಪೂಜಿ ಕೇಂದ್ರದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು ಮಾತನಾಡಿ,  ಸಂಘವು ಹಂತ ಹಂತವಾಗಿ ಬೆಳೆದು ಕಳೆದ ವರ್ಷ ನೂತನ ಕಟ್ಟಡ ಲೋಕಾರ್ಪಣೆಗೊಂಡಿದೆ. ಸಿಬ್ಬಂದಿಗಳ ನಗಮೊಗದ ಸೇವೆ, ಗ್ರಾಹಕರ ಸಹಕಾರದಿಂದ ಬ್ಯಾಂಕ್ ಪ್ರಗತಿ ಹಾದಿಯಲ್ಲಿ ಮುಂದುವರಿಯುತ್ತಿದ್ದು, ವಾರ್ಷಿಕವಾಗಿ 70 ಕೋಟಿ ರೂ. ವ್ಯವಹಾರ ನಡೆಸಿ, 33 ಲಕ್ಷ ರೂ. ಲಾಭ ಗಳಿಸಿದ್ದು ಸದಸ್ಯರಿಗೆ 8% ಡಿವಿಡೆಂಟ್ ಘೋಷಿಸಲಾಗಿದೆ, ಗೇರುಕಟ್ಟೆಯಲ್ಲಿ ನೂತನ ಶಾಖೆ ತೆರೆಯುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.

ಕಂಬಳ ಕ್ಷೇತ್ರದ ಸಾಧಕರಾದ ದಿಲೀಪ್ ಪಂಜಿಕುಡೇಲು ಮತ್ತು ಚರಣ್, ಶೇಕ್ಷಣಿಕ ಕ್ಷೇತ್ರದ ಸಾಧಕರಾದ ತೃಪ್ತಿ ಕೆ, ಸಾತ್ವಿಕ್ ಪಿ. ಟಿ. ಪಾಲೇದು, ಅನುಜ್ಞಾ ಸಾಲ್ಯಾನ್ ಅವರನ್ನು ಗೌರವಿಸಲಾಯಿತು. ವಿದ್ಯಾರ್ಥಿ ವೇತನ, ಪಿಗ್ಮಿ ಸಂಗ್ರಹಕರಿಗೆ ಗೌರವಧನ ವಿತರಿಸಲಾಯಿತು.

ನಿರ್ದೇಶಕರಾದ  ಉಷಾ ಶರತ್, ಓಬ್ಬಯ್ಯ ಬಂಗೇರ, ಅಣ್ಣು ಪೂಜಾರಿ, ಸೂರಪ್ಪ ಬಂಗೇರ, ಸದನಾಂದ ಸಾಲ್ಯಾನ್, ಸಂತೋಷ್ ಕುಮಾರ್, ಪ್ರಭಾಕರ ಸಾಲ್ಯಾನ  ಮತ್ತು ಹೇಮಂತ್ ಕುಮಾರ್ ಉಪಸ್ಥಿತರಿದ್ದರು.

ಸಿಬ್ಬಂದಿ ರೇಖಾ ಸ್ವಾಗತಿಸಿ, ಮುಖ್ಯಕಾರ್ಯ ನಿರ್ವಹಾಧಿಕಾರಿ ಮಮತಾ ಯೋಗೀಶ್ ಅಳಕ್ಕೆ ವಾರ್ಷಿಕ ವರದಿ ವಾಚಿಸಿದರು, ಸಿಬಂದಿ ದೀಪ್ತಿ ಸನ್ಮಾನ ಪತ್ರ ವಾಚಿಸಿದರು. ರವೀಂದ್ರ ಬೋಲೋಡಿ ಮತ್ತು  ಗ್ರಾ. ಪಂ. ಮಾಜಿ ಸದಸ್ಯ ಯೋಗೀಶ್  ಕುಮಾರ್ ಅಳಕ್ಕೆ ನಿರೂಪಿಸಿದರು.

Related posts

ಲಾಯಿಲ: ಕುಂಟಿನಿ ಸ.ಕಿ.ಪ್ರಾ. ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

ವೇಣೂರು: ಚಿರತೆಯ ಮೃತದೇಹ ಪತ್ತೆ ಪ್ರಕರಣ:ಚಿರತೆಯ ಶವಪರೀಕ್ಷೆ ಮಾಡಿ ಅಂತ್ಯಕ್ರಿಯೆ ನಡೆಸಿದ ಅರಣ್ಯ ಇಲಾಖೆ

Suddi Udaya

ಬೆಳ್ತಂಗಡಿ ಎಸ್ ಡಿ ಎಂ ಆಂ.ಮಾ. ಶಾಲೆಯಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

Suddi Udaya

ಬೆಳ್ತಂಗಡಿ: ಸಂತೆಕಟ್ಟೆ ಮೆಸ್ಕಾಂ ರಸ್ತೆಯಲ್ಲಿ ರಾತ್ರಿ ತಿರುಗಾಡುತ್ತಿದ್ದ ಮಾನಸಿಕ ಅಸ್ವಸ್ಥತೆ; ಬೆಳ್ತಂಗಡಿ ಪ.ಪಂ ಅಧ್ಯಕ್ಷ ಜಯಾನಂದ ಗೌಡ ನೇತೃತ್ವದಲ್ಲಿ ಬಾಲಕಿ ಸಿಯೋನ್ ಆಶ್ರಮಕ್ಕೆ ದಾಖಲು

Suddi Udaya

ಅಯೋಧ್ಯೆ ನಗರದ ಶ್ರೀ ರಾಮ ಪ್ರತಿಷ್ಠಾ ಕಾರ್ಯಕ್ರಮದ ಅಂಗವಾಗಿ ಜ.22ರಂದು ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ”ಶ್ರೀ ರಾಮನಾಮ ತಾರಕ ಮಂತ್ರ ಹೋಮ”

Suddi Udaya

ದಕ್ಷಿಣ ಕನ್ನಡ ಜಿಲ್ಲಾ ಪರವಾನಿಗೆ ಭೂಮಾಪಕರ ಸಂಘದ ಜಿಲ್ಲಾಧ್ಯಕ್ಷ ನಾಗ ವಿ ಮತ್ತು ಪದಾಧಿಕಾರಿಗಳ ಪದಪ್ರದಾನ ಸಮಾರಂಭ

Suddi Udaya
error: Content is protected !!