September 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕೆ‌ಎಂಜೆ ವತಿಯಿಂದ “ಭಾರತದ ಬಹುತ್ವ- ಬಂಧುತ್ವದ” ಬಗ್ಗೆ ಕಾರ್ಯಕ್ರಮ, ಮೀಲಾದ್ ಸಂದೇಶ ಸಭೆ

ಬೆಳ್ತಂಗಡಿ; ಭಾರತದ ಸ್ವಾತಂತ್ರ್ಯದ ಇತಿಹಾಸವೇ ಬಹುತ್ವ ಮತ್ತು ಬಂಧುತ್ವವಾಗಿದೆ. ಇಲ್ಲಿ ಜಾತಿ ಧರ್ಮದ ವ್ಯತ್ಯಾಸಗಳಿಲ್ಲದೆ ಭಾತರ ಎಂಬ ಧ್ಯೇಯದಿಂದ ಹೋರಾಡಿದ್ದರ ಪರಿಣಾಮ ಈ ಸುಂದರ ದೇಶದ ಆಶಯ ಇಂದಿಗೂ ಭದ್ರವಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹೇಳಿದರು.

ಗುರುವಾಯನಕೆರೆ ಬಿಬಿಎಸ್ ಸಭಾಂಗಣದಲ್ಲಿ, ಕರ್ನಾಟಕ ಮುಸ್ಲಿಂ ಜಮಾಅತ್ ಗುರುವಾಯನಕೆರೆ ಸರ್ಕಲ್ ಸಮಿತಿ ವತಿಯಿಂದ ಭಾರತದ “ಬಹುತ್ವ- ಬಂಧುತ್ವ” ವಿಚಾರ ವಿಮರ್ಷೆ ಹಾಗೂ ಮಿಲಾದ್ ಸಂದೇಶ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.

ಅಬ್ದುಲ್ ಹಮೀದ್ ಫುರ್ಕಾನಿ ಅಧ್ಯಕ್ಷತೆ ವಹಿಸಿದ್ದರು. ಸಯ್ಯಿದ್ ಎಸ್ ಎಂ ಕೋಯ ತಂಙಳ್ ಉಜಿರೆ ಉದ್ಘಾಟಿಸಿದರು.

ಪ್ರವಾದಿಯವರ ಮೌಲಿದ್ ಪಾರಾಯಣದ ಮೂಲಕ ಕಾರ್ಯಕ್ರಮಕ್ಕೆ ದುಆದ ಮೂಲಕ ಅಬ್ದುಲ್ಲಕುಂಞಿ ದಾರಿಮಿ ಚಾಲನೆ ನೀಡಿದರು. ಮೂರು ಮತ ಧರ್ಮಗಳ ಪ್ರತಿನಿಧಿಯಾಗಿ ಭಾಗವಹಿಸಿದ್ದ ಹಾಫೀಝ್ ಮೊಹೀನುದ್ದೀನ್ ಹಮ್ಜಾಡಿ ಇಸ್ಲಾಂ ಧರ್ಮದ ಬಗ್ಗೆ, ರೆ.ಫಾ. ರೋಷನ್ ಕ್ರಾಸ್ತಾ ಕ್ರೈಸ್ತ ಧರ್ಮದ ಬಗ್ಗೆ ಹಾಗೂ ಶಿಕ್ಷಕ ಜಗನ್ನಾಥ ಅವರು ಹಿಂದೂ ಧರ್ಮದ ಬಗ್ಗೆ ತಮ್ಮ ಸಂದೇಶ ನೀಡಿದರು. ಹಾಜಿ ಹಸೈನಾರ್ ಶಾಫಿ ಶುಭ ಕೋರಿದರು.

ಕೆಎಂಜೆ ರಾಜ್ಯ ಸಮಿತಿ ಸದಸ್ಯ ಅಬ್ಬೋನು ಮದ್ದಡ್ಕ, ಹಾಜಿ ಉಸ್ಮಾನ್ ಶಾಫಿ, ಉಸ್ಮಾನ್ ಸಖಾಫಿ, ಉಮರ್ ಮಟನ್, ಹೈದರ್ ಮದ್ದಡ್ಕ, ಎಂ.ಹೆಚ್ ಅಬೂಬಕ್ಕರ್, ಹೆಚ್‌ ಎಂ ಹಸನ್, ಉಸ್ಮಾನ್ ಹಾಜಿ ಮದ್ದಡ್ಕ, ಮುಸ್ತಫಾ, ಅಬ್ದುಲ್ ರಹಮಾನ್, ರಫೀಕ್ ಮುಸ್ಲಿಯಾರ್, ಹಂಝ ಜಾರಿಗೆಬೈಲು, ಅಬುಸ್ವಾಲಿಹ್ ಗೇರುಕಟ್ಟೆ, ಹಾಫಿಲ್ ಹನೀಫ್ ಮಿಸ್ಬಾಹಿ ವೇದಿಕೆಯಲ್ಲಿದ್ದರು.
ಸಮಾರಂಭದಲ್ಲಿ ಕೆಎಂಜೆ ಸರ್ಕಲ್ ಮತ್ತು ಯೂನಿಟ್ ನಾಯಕರು, ಎಸ್‌ವೈಎಸ್, ಎಸ್ಸೆಸ್ಸೆಫ್, ಪದಾಧಿಕಾರಿಗಳು ಭಾಗವಹಿಸಿದ್ದರು.


ಎನ್.ಎಸ್ ಉಮರ್ ಕಾರ್ಯಕ್ರಮ ನಿರೂಪಿಸಿದರು. ಮಾಜಿ ಸೈನಿಕ ಮುಹಮ್ಮದ್ ರಫಿ ವಂದಿಸಿದರು.

Related posts

ಮೂಡುಕೋಡಿಯಲ್ಲಿ ನಿಧಾನಗತಿಯಲ್ಲಿ ಸಾಗುತ್ತಿರುವ ಮತದಾನ : ಬೆಳಿಗ್ಗೆಯಿಂದ ಸರತಿ ಸಾಲಿನಲ್ಲಿ ಜನವೋ ಜನ

Suddi Udaya

ಬಿಜೆಪಿ ಕೊಕ್ಕಡ 237ನೇ ಬೂತು ಸಮಿತಿಯ ಅಧ್ಯಕ್ಷರಾಗಿ ಶಶಿಕುಮಾರ್, ಕಾರ್ಯದರ್ಶಿಯಾಗಿ ಶ್ರೀಧರ್ ಆಯ್ಕೆ

Suddi Udaya

ಸುರ್ಯ: ಕೊಡಮಣಿತ್ತಾಯ – ಪಿಲಿಚಾಮುಂಡಿ, ಕಲ್ಕುಡ – ಕಲ್ಲುರ್ಟಿ, ಮಹಮ್ಮಾಯಿ ದೈವ ಸನ್ನಿಧಿಯಲ್ಲಿ ದೊಂಪದಬಲಿ ಉತ್ಸವ

Suddi Udaya

ಶಿಶಿಲ ಸ.ಉ.ಹಿ.ಪ್ರಾ. ಶಾಲೆಯ ನೂತನ ಕಟ್ಟಡ ಉದ್ಘಾಟಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Suddi Udaya

ಶಿಶಿಲ ಸ.ಉ.ಹಿ.ಪ್ರಾ. ಶಾಲೆಯ ಮರು ನಿರ್ಮಾಣ ಕಾರ್ಯ ನಡೆಯುತ್ತಿದ್ದು ಸ್ಥಳಕ್ಕೆ ಪುತ್ತೂರು ಮಾಸ್ಟರ್ ಪ್ಲಾನರಿಯವರಿಂದ ಭೇಟಿ

Suddi Udaya

ಚದುರಂಗ ಸ್ಪರ್ಧೆ: ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya
error: Content is protected !!