
ಕಣಿಯೂರು: ಕಣಿಯೂರು ಗ್ರಾಮದ ಪದ್ಮುಂಜ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಪಾಲನಾ ಕೇಂದ್ರದಲ್ಲಿ ಸೆ. 04 ರಂದು ಪ್ರೇಮನಾಥ ಶೆಟ್ಟಿ ಮಲೆಂಗಲ್ಲು ಇವರೂ ಬೆಳಗ್ಗಿನ ತಿಂಡಿ ವ್ಯವಸ್ಥೆ, ಪದ್ಮುಂಜ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿ ವತಿಯಿಂದ ಮಧ್ಯಾಹ್ನದ ಅನ್ನದಾನ,ಹಾಗೂ ರಂಜಿತ್ ಪದ್ಮುಂಜ , ಮಹೇಶ್ ಪದ್ಮುಂಜ ಇವರುಗಳಿಂದ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ, ಮತ್ತು ಪಾನಿಯ ವ್ಯವಸ್ಥೆ, ಪದ್ಮುಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿ ಸುನಿತಾ ಇವರು ಮೊಟ್ಟೆ ನೀಡಿದರು.

ಈ ಸಂದರ್ಭದಲ್ಲಿ ದಾನಿಗಳು, ಪಾಲನ ಕೇಂದ್ರದ ವಿದ್ಯಾರ್ಥಿಗಳು,ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.












