October 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮೇಲಂತಬೆಟ್ಟುವಿನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ; ಗ್ರಾಮೀಣ ಸ್ಪರ್ಧೆಗಳ ಆಯೋಜನೆ

ಬೆಳ್ತಂಗಡಿ; ಕೃಷಿಕ ಯುವಕ ಮಂಡಲ ಮೇಲಂತಬೆಟ್ಟು ಇದರ ವತಿಯಿಂದ ಮೇಲಂತಬೆಟ್ಟು, ಮುಂಡೂರು, ಸವಣಾಲು, ಮತ್ತು ಲಾಯಿಲ ಗ್ರಾಮಸ್ತರಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 4 ನೇ ವರ್ಷದ ಮೊಸರು ಕುಡಿಕೆ ಉತ್ಸವ ಮತ್ತು ವಿವಿಧ ಸ್ಪರ್ಧೆಗಳನ್ನು ಸೆ.7 ರಂದು ನಡೆಯಿತು.

ವೇದಮೂರ್ತಿ ಗೋಪಾಲಕೃಷ್ಣ ತಂತ್ರಿಗಳು ಮಡಂತ್ಯಾರು ಉದ್ಘಾಟನೆ ನೆರವೇರಿಸಿದರು.
ಅಧ್ಯಕ್ಚತೆಯನ್ನು ಮೇಲಂತಬೆಟ್ಟು ಸರಕಾರಿ ಶಾಲಾ ಮುಖ್ಯ ಶಿಕ್ಷಕಿ ರೂಪಾ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮೇಲಂತಬೆಟ್ಟು ಗ್ರಾ.ಪಂ ಆಡಳಿತಾಧಿಕಾರಿ ರಾಜೇಂದ್ರಕೃಷ್ಣ, ಜಿ.ಪಂ ಮಾಜಿ ಸದಸ್ಯ ಶೈಲೇಶ್ ಕುಮಾರ್ ಕುರ್ತೋಡಿ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ., ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ಸುಮತಿ ಪ್ರಮೋದ್ ನೂಜೋಡಿ, ಗ್ರಾ.ಪಂ ಮಾಜಿ ಅಧ್ಯಕ್ಷೆ ಸವಿತಾ, ಕೃಷಿಕ ಯುವಕ ಮಂಡಲದ ಗೌರವಾಧ್ಯಕ್ಷ ಧರ್ಣಪ್ಪ ಸಪಲ್ಯ ನೂಜೇಲು ಶುಭ ಕೋರಿದರು.

ಗ್ರಾ. ಯೋಜನೆಯ ಕೃಷಿ ವಿಭಾಗದ ಮೇಲ್ವಿಚಾರಕ ರಾಮ್ ಕುಮಾರ್, ಚಾರ್ಟರ್ಡ್ ಎಕೌಂಟೆಂಟ್ ಯೋಗೀಶ್ ಪೂಜಾರಿ, ಶ್ರೀ ದೇವಿ ಭಗವತಿ ದೇವಸ್ಥಾನ ಮೇಲಂತಬೆಟ್ಟು ಇಲ್ಲಿನ ಧರ್ಮದರ್ಶಿ ಯೋಗೀಶ್ ಪೂಜಾರಿ, ಲಕ್ಷ್ಮೀ ಕಾಂತ್ ಬೇಕಲ್, ಗಿರೀಶ್ ಕುಮಾರ್ ಒಡ್ಯಾನೆ, ದಮಯಂತಿ ಪಾಲೆತ್ತಾಡಿಗುತ್ತು ಮೊದಲಾದವರು ಗೌರವ ಉಪಸ್ಥಿತರಿದ್ದರು.
ಸಂಸ್ಥೆಯ ಕಾರ್ಯದರ್ಶಿ ಸೂರಜ್‌ ಸ್ವಾಗತಿಸಿದರು.


ಕೋಶಾಧಿಕಾರಿ ಹರ್ಷ ಧನ್ಯವಾದ ಸಲ್ಲಿಸಿದರು. ಕೃಷಿಕ‌ ಯುವಕ ಮಂಡಲದ ಅಧ್ಯಕ್ಷ ಜಗದೀಶ್ ಬರಮೇಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಗಿರೀಶ್ ಮಾಪಲಾಡಿ ವಂದಿಸಿದರು.

Related posts

ಭಾರತೀಯ ಮಜ್ದೂರು ಸಂಘ ದ.ಕ.: ರಾಜ್ಯಘಟಕದ ತೀರ್ಮಾನಗಳ ಅನುಷ್ಠಾನಕ್ಕೆ ಜಿಲ್ಲಾ ಮಟ್ಟದಲ್ಲಿ ಸಮನ್ವಯ ಸಭೆ

Suddi Udaya

ಅಕ್ಷಯ ಕೆರಿಯರ್ ಅಕಾಡೆಮಿಯ “ಡಿಪ್ಲೊಮ ಇನ್ ಏವಿಯೇಷನ್” ಶಾರ್ಟ್ ಟಾರ್ಮ್ ಕೋರ್ಸ್ ನ ಹೊಸ ಬ್ಯಾಚ್ ಪ್ರಾರಂಭ

Suddi Udaya

ಎ.07 -17: ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವರಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಜಾತ್ರೋತ್ಸವ: ಇಂದು ಮತ್ತು ನಾಳೆ ದೇವಸ್ಥಾನದಲ್ಲಿ ವಿವಿಧ ವೈದಿಕ ಕಾರ್ಯಕ್ರಮ

Suddi Udaya

ಫೆ.28: ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಸೇವಾ ನಿವೃತ್ತಿ

Suddi Udaya

ಗೇರುಕಟ್ಟೆ ಪ್ರೌಢಶಾಲೆಯಲ್ಲಿ ಪ್ರತಿಭಾ ಪುರಸ್ಕಾರ

Suddi Udaya

ಬೆಳ್ತಂಗಡಿ:ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಪ್ರತಿಭಾನ್ವಿತ ವಿದ್ಯಾರ್ಥಿ ಸಾವು

Suddi Udaya
error: Content is protected !!