September 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಆತ್ಮಶಕ್ತಿ ಸಹಕಾರ ಸಂಘದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ವಿಶೇಷ ಗೌರವಾರ್ಪಣೆ

ಬೆಳ್ತಂಗಡಿ: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘ ಮಂಗಳೂರು ಇದರ ವತಿಯಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಅಂಗನವಾಡಿ ಕಾರ್ಯಕರ್ತೆಯರಿಗೆ ವಿಶೇಷ ಗೌರವಾರ್ಪಣೆ ಕಾರ್ಯಕ್ರಮವನ್ನು ಸಂಘದ ಎಲ್ಲಾ ಶಾಖೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರನ್ನು ಗೌರವಿಸುವ ಮೂಲಕ ಆಚರಿಸಲಾಯಿತು.

ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ರವರು ವಿಶೇಷ ಗೌರವಾರ್ಪಣೆ ಕಾರ್ಯಕ್ರಮಕ್ಕೆ ಪ್ರಧಾನ ಕಚೇರಿಯಲ್ಲಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ನೇಮಿರಾಜ್ ಪಿ , ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್, ಹಾಗೂ ಸಂಘದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು..

ಸುಮಾರು 50ಕ್ಕೂ ಮಿಕ್ಕಿ ಅಂಗನವಾಡಿ ಕಾರ್ಯಕರ್ತರಿಗೆ ಸಂಘದ ಎಲ್ಲಾ ಶಾಖೆಗಳಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ವಿಶೇಷವಾಗಿ ಗೌರವಾರ್ಪಣೆ ಯನ್ನು ಮಾಡಲಾಯಿತು.

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘವು ಆರ್ಥಿಕ ವ್ಯವಹಾರದ ಜೊತೆ ಜೊತೆಗೆ ತನ್ನನ್ನು ಸಾಮಾಜಿಕ ಸೇವಾ ಚಟುವಟಿಕೆಗಳೊಂದಿಗೆ ಜೋಡಿಸಿಕೊಂಡು ಮುನ್ನಡೆಯುತ್ತಿದೆ. ಅದರೊಂದಿಗೆ ವಿವಿಧ ದಿನಾಚರಣೆಗಳನ್ನು ಕೂಡ ಅರ್ಥಪೂರ್ಣವಾಗಿ ಆಯೋಜಿಸಿಕೊಂಡು ಬರುತ್ತಿರುವುದು ಸಂಘದ ವಿಶೇಷತೆಗಳಲ್ಲೊಂದಾಗಿದೆ.

Related posts

ಅ.3 -13: ಉಪ್ಪಿನಂಗಡಿ ಸವಿ ಫೂಟ್ ವೆರ್ ನಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಆಫರ್

Suddi Udaya

ಭಾರೀ ಗಾಳಿ ಮಳೆ: ನೆರಿಯ ನೆಕ್ಕರೆಯಲ್ಲಿ ಮನೆಗೆ ಮರ ಬಿದ್ದು ಹಾನಿ

Suddi Udaya

ಬೆಳ್ತಂಗಡಿ ವಕೀಲರ ನಿಯೋಗದಿಂದ ವಿ.ಪ. ಶಾಸಕ ಐವನ್ ಡಿ ಸೋಜಾ ರವರ ಭೇಟಿ, ಹೊಸ ನ್ಯಾಯಾಲಯ ಸಂಕೀರ್ಣದ ಕಾಮಗಾರಿಯ ಬಗ್ಗೆ ಚರ್ಚೆ

Suddi Udaya

ಮಣಿನಾಲ್ಕೂರು: ಸ.ಪ.ಪೂ.ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ಶೇ.100 ಫಲಿತಾಂಶ

Suddi Udaya

ಶ್ರೀ ಧ ಮಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಮಹಾ ವಿದ್ಯಾ ನಿಲಯದಲ್ಲಿ ವಿಶ್ವ ಧ್ಯಾನ ದಿನಾಚರಣೆ

Suddi Udaya

ನಿವೃತ್ತ ಸಾಧಕ ಯೋಧ ಪ್ರಶಸ್ತಿ ಸ್ವೀಕರಿಸಿ ಆಗಮಿಸಿದ ಲ| ಡಾ.ಗೋಪಾಲಕೃಷ್ಣ ಕಾಂಚೋಡು: ಉಜಿರೆಯಲ್ಲಿ ಭವ್ಯವಾದ ಸ್ವಾಗತ – ಅಭಿನಂದನೆ

Suddi Udaya
error: Content is protected !!