November 28, 2026
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳು

ಬೆಳ್ತಂಗಡಿ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ವಾರ್ಷಿಕ ಮಹಾಸಭೆ

ಬೆಳ್ತಂಗಡಿ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ವಾರ್ಷಿಕ ಮಹಾಸಭೆ ನ.27ರಂದು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಸಭಾಭವನ ಹಳೆಕೋಟೆ ಬೆಳ್ತಂಗಡಿಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಪಿ.ಕುಶಾಲಪ್ಪ ಗೌಡ ವಹಿಸಿದ್ದರು.


ದಿನೇಶ್ ಗೌಡ ಕೊಯ್ಯೂರು ಸಭೆಯ ನೋಟೀಸ್ ಓದಿ ದಾಖಲಿಸಿದರು. ಕಾರ್ಯದರ್ಶಿ ಗಣೇಶ್ ಗೌಡ ವರದಿ ನೀಡಿದರು. ಕೋಶಾಧಿಕಾರಿ ಯುವರಾಜ್ ಅನಾರು 2025-26ನೇ ಸಾಲಿನ ಲೆಕ್ಕಪತ್ರ ಮಂಡಿಸಿದರು.

ಸಂಘದ ಗೌರವಾಧ್ಯಕ್ಷರಾದ ಹೆಚ್. ಪದ್ಮ ಗೌಡ ಮುಂದಿನ ವರ್ಷದ ಅಭಿವೃದ್ಧಿ ವಿಷಯಗಳ ಬಗ್ಗೆ ಮಾತನಾಡಿದರು.
ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರುಗಳಾದ ಧರ್ಣಪ್ಪ ಗೌಡ ಬಾನಡ್ಕ, ನಾರಾಯಣ ಗೌಡ ದೇವಸ್ಯ, ನಿರ್ದೇಶಕರಾದ ಜಯಾನಂದ ಗೌಡ ಪ್ರಜ್ವಲ್, ಡಿ.ಎಂ. ಗೌಡ ಉಜಿರೆ, ಬಾಲಕೃಷ್ಣ ಗೌಡ ಬಿರ್ಮೋಟ್ಟು, ವಿಜಯ ಗೌಡ ನ್ಯಾಯತರ್ಪು, ಉಷಾದೇವಿ, ಭವಾನಿ ಕೆ, ಹರೀಶ್ ಗೌಡ ಬಂದಾರು, ಮಾಧವ ಗೌಡ, ವಸಂತ ಗೌಡ ನಡ, ಕೃಷ್ಣಪ್ಪ ಗೌಡ ಸವಣಾಲು, ಪ್ರಸನ್ನ ಬಾರ್ಯ, ಮಾಜಿ ಅಧ್ಯಕ್ಷರಾದ ಸೋಮೇ ಗೌಡ ಉಪಸ್ಥಿತರಿದ್ದರು.

ವಾರ್ಷಿಕ ಮಹಾಸಭೆಯಲ್ಲಿ ಯುವ ವೇದಿಕೆ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ, ಪ್ರಧಾನ ಕಾರ್ಯದರ್ಶಿ ಸುರೇಶ್ ಕೌಡಂಗೆ, ಪದಾಧಿಕಾರಿಗಳು, ಮಹಿಳಾ ವೇದಿಕೆಯ ಪದಾಧಿಕಾರಿಗಳು, ಸ್ಪಂದನಾ ಸೇವಾ ಸಂಘದ ಪದಾಧಿಕಾರಿಗಳು, ಗ್ರಾಮ ಸಮಿತಿಗಳ ಅಧ್ಯಕ್ಷರು, ಸದಸ್ಯರು, ವಾಣಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ವಾಣಿ ಸೌಹಾರ್ದ ವಿವಿದ್ದೋದ್ದೇಶ ಸಹಕಾರಿ ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಶಿಕ್ಷಕಿಯರಾದ ವಂದನಾ, ವಿಜೇತಾ, ಯೋಗಿನಿ, ಚೇತನ, ಶೋಭ, ಮಮತ ಪ್ರಾರ್ಥಿಸಿದರು. ವಕೀಲರಾದ ಗೋಪಾಲಕೃಷ್ಣ ಗುಲ್ಲೋಡಿ ಸ್ವಾಗತಿಸಿ, ವಾಣಿ ಪ.ಪೂ. ಕಾಲೇಜು ಉಪನ್ಯಾಸಕ ಬೆಳಿಯಪ್ಪ ಕೆ. ಕಾರ್ಯಕ್ರಮ ನಿರೂಪಿಸಿ, ಜತೆ ಕಾರ್ಯದರ್ಶಿ ಶ್ರೀನಾಥ್ ಕೆ.ಎಮ್ ವಂದಿಸಿದರು

Related posts

ಗೇರುಕಟ್ಟೆ ಸರ್ಕಾರಿ ಪ್ರೌಢಶಾಲೆಗೆ ಶೇ.100 ಫಲಿತಾಂಶ

Suddi Udaya

ಕೊಲ್ಪಾಡಿ ಸ. ಕಿ. ಪ್ರಾ. ಶಾಲಾ ಮಂತ್ರಿ ಸಂಸತ್ ಚುನಾವಣೆ

Suddi Udaya

ಬಂದಾರು: ಪೆರ್ಲ-ಬೈಪಾಡಿ ನಿವಾಸಿ ಶತಾಯುಷಿ ಲಕ್ಷ್ಮೀ ನಿಧನ

Suddi Udaya

ಅನಿಯಮಿತ ವಿದ್ಯುತ್: ವ್ಯಾಪಾರಸ್ಥರಿಗೆ ಸಂಕಷ್ಟವರ್ತಕರ ಸಂಘದಿಂದ ಮೆಸ್ಕಾಂ ಇಲಾಖೆಗೆ ಮನವಿ

Suddi Udaya

ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವ ಸವಣಾಲುವಿನ ಹಿತ್ತಿಲಪೇಲ ನಿವಾಸಿಗಳು; ಸಂಪರ್ಕ ಕೊಂಡಿಯಾಗಿರುವ ನದಿಯನ್ನೇ ದಾಟದಂತೆ ಬ್ಯಾನರ್ ಹಾಕುವ ಮೂಲಕ ಅಧಿಕಾರಿಗಳ ದಿಗ್ಬಂಧನ

Suddi Udaya

ಗುಂಡೂರಿ: ಮಂಜಪ್ಪ ದೇವಾಡಿಗರಿಗೆ ನುಡಿನಮನ ಕಾರ್ಯಕ್ರಮ

Suddi Udaya
error: Content is protected !!