32.1 C
ಪುತ್ತೂರು, ಬೆಳ್ತಂಗಡಿ
September 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಪಡಂಗಡಿಯಲ್ಲಿ ಮದ್ಯವರ್ಜನ ಶಿಬಿರದ ಪ್ರಥಮ ಮಾಸಿಕ ಸಭೆ

ಗುರುವಾಯನಕೆರೆ : ಆಗಸ್ಟ್ ತಿಂಗಳಲ್ಲಿ ನಡೆದ 2102ನೇ ಮದ್ಯವರ್ಜನ ಶಿಬಿರದ ಪ್ರಥಮ ಮಾಸಿಕ ಸಭೆಯನ್ನು ಶ್ರೀ ಗಣಪತಿ ಸಭಾಭವನ ಪಡಂಗಡಿಯಲ್ಲಿ ನಡೆಯಿತು.

ಮಾಸಿಕ ಸಭೆಯನ್ನು ಕ್ಷೇತ್ರ ಯೋಜನಾಧಿಕಾರಿಗಳಾದ ಹರೀಶ್ ರವರು ದೀಪ ಬೆಳಗಿಸುವ ಮೂಲಕ ಸಭೆಯನ್ನು ಉದ್ಘಾಟಿಸಿ ಹೊಸ ಜೀವನ ನಡೆಸುತ್ತಿರುವ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

ಸಭೆಯ ಅಧ್ಯಕ್ಷತೆಯನ್ನು 2102ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುರೇಶ್ ಪೂಜಾರಿ ರವರು ವಹಿಸಿ ಶುಭ ಹಾರೈಸಿದರು.

ಉಡುಪಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯರವರು ಸಭೆಯಲ್ಲಿ ನವಜೀವನ ಸಮಿತಿ ಬಲವರ್ಧನೆ ಮತ್ತು ಅನು ಪಾಲನೆ, ನವಜೀವನ ಸಮಿತಿ ಸದಸ್ಯರ ವಾರದ ಸಭೆಯ ವರದಿ, ಹಾಜರಾತಿ ಕುರಿತು ,ಫ್ರೀ ಕಾನ್ಫರೆನ್ಸ್ ಸಭೆ, ಶತದಿನೋತ್ಸವ ಕುರಿತು ಮಾಹಿತಿ ನೀಡಿದರು .

ಮುಖ್ಯ ಅತಿಥಿಗಳಾದ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಗಿರೀಶ್, ಜನಜಾಗೃತಿ ವೇದಿಕೆ ಸದಸ್ಯರಾದ ರಿಚರ್ಡ್ ಗೋವಿಯಸ್, ಜನಜಾಗೃತಿ ವಲಯಾಧ್ಯಕ್ಷ ಹರೀಶ್ ಕೋಟ್ಯಾನ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ಭಾಸ್ಕರ, ಶಿಬಿರದ ಯೋಗ ಶಿಕ್ಷಕರಾದ ಡಾ . ದ್ವಿತಿ, ಶಿಬಿರಾಧಿಕಾರಿ ದೇವಿಪ್ರಸಾದ್ ಸುವರ್ಣ, ಹಿರಿಯ ನವಜೀವನ ಸಮಿತಿ ಸದಸ್ಯರಾದ ಮೋಹನ್ ಉಪಸ್ಥಿತರಿದ್ದು ಶುಭ ಹಾರೈಸಿದರು.

ಶಿಬಿರಕ್ಕೆ ಸೇರಿ ಪಾನಮುಕ್ತರಾದ ನವ ಜೀವನ ಸಮಿತಿ ಸದಸ್ಯರು ತಮ್ಮ ಒಂದು ತಿಂಗಳ ಪಾನಮುಕ್ತ ಜೀವನದ ಅನುಭವಗಳನ್ನು ಹಂಚಿಕೊಂಡರು. ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ವಲಯ ಮೇಲ್ವಿಚಾರಕಿ ಯಶೋಧ ಸ್ವಾಗತಿಸಿ , ಜನಜಾಗೃತಿ ಮೇಲ್ವಿಚಾರಕ ನಿತೇಶ್ ಕೆ ನಿರೂಪಿಸಿ ವಂದಿಸಿದರು.

Related posts

ಬಳಂಜ: ಅನಾರೋಗ್ಯದಿಂದ ವರದರಾಜ್ ಪೂಜಾರಿ ನಿಧನ

Suddi Udaya

ಎಕ್ಸೆಲ್ ಶಿಕ್ಷಣ ಸಂಸ್ಥೆಯಲ್ಲಿ ಬೆಳ್ಳಿಬೀಡು ಹೇಮರಾಜ್ ಕೆ ಅವರಿಗೆ ಗೌರವಾರ್ಪಣೆ

Suddi Udaya

ಕೊಕ್ಕಡ: ಉಪ್ಪಾರಪಳಿಕೆಯಲ್ಲಿ ಶ್ರೀಕೃಷ್ಣ ಭಜನಾ ಮಂದಿರದ ಪ್ರಾರಂಭೋತ್ಸವ ; ಧಾರ್ಮಿಕ ಸಭೆ

Suddi Udaya

ಖಾತಾ ಬದಲಾವಣಿ, ಪಹಣಿ ತಿದ್ದುಪಡಿಯಂತಹ ಸಾರ್ವಜನಿಕ ಕೆಲಸಗಳಿಗೆ ತಾಂತ್ರಿಕ ಸಮಸ್ಯೆ: ಕನ್ನಡಸೇನೆ-ಕರ್ನಾಟಕ” ಬೆಳ್ತಂಗಡಿ ತಾಲೂಕಿನಿಂದ ಜಿಲ್ಲಾಧಿಕಾರಿಗಳಿಗೆ ಮನವಿ

Suddi Udaya

ಕುವೆಟ್ಟು: ನೂರಲ್ ಹುದಾ‌ ಜುಮಾ ಮಸೀದಿ ಮದ್ದಡ್ಕ ವತಿಯಿಂದ ಮಾದಕ ದ್ರವ್ಯ‌ ಮುಕ್ತ‌ ಜನಜಾಗೃತಿ ಜಾಥಾ

Suddi Udaya

ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ಹೆಚ್ಚಿಸಿ ಕೊಳ್ಳಬೇಕು: ಡಾ ಪ್ರಸನ್ನ ಕುಮಾರ್ ಐತಾಳ್

Suddi Udaya
error: Content is protected !!