ಬೆಳ್ತಂಗಡಿ : ವಿಶ್ವ ಹಿಂದೂ ಪರಿಷದ್ ಬಜರಂಗದಳ ಬೆಳ್ತಂಗಡಿ ಪ್ರಖಂಡ ವತಿಯಿಂದ ಬೈಂದೂರಿನಲ್ಲಿ ಚಾತುರ್ಮಾಸ್ಯ ವ್ರತಾಚರಣೆ ನಡೆಸುತ್ತಿರುವ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಬೆಳ್ತಂಗಡಿ ಪ್ರಖಂಡ ಕಾರ್ಯದರ್ಶಿ ರಮೇಶ್ ಧರ್ಮಸ್ಥಳ, ವಿಶ್ವ ಹಿಂದೂ ಪರಿಷದ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಬಜರಂಗದಳ ಪುತ್ತೂರು ಜಿಲ್ಲಾ ಸಹ ಸಂಯೋಜಕ ದಿನೇಶ್ ಚಾರ್ಮಾಡಿ, ವಿಶ್ವ ಹಿಂದೂ ಪರಿಷದ್ ಬಜರಂಗದಳ ಪ್ರಚಾರ ಪ್ರಮುಖ ಬೆಳ್ತಂಗಡಿ ಪ್ರಖಂಡ ನಾಗೇಶ್ ಕಲ್ಮಂಜ, ಬಜರಂಗದಳ ಸಹ ಸಂಯೋಜಕ ಗೌರವ್ ಉಜಿರೆ, ನಂದಗೋಕುಲ ಗೋಶಾಲೆ ನಿಕಟಪೂರ್ವ ಅಧ್ಯಕ್ಷರು ಡಾ.ಎಂ.ಎಂ. ದಯಾಕರ್ ಉಜಿರೆ, ರಾಘವೇಂದ್ರ ಗೌಡ ಊಂಕ್ರೊಟ್ಟು, ಜಯಾನಂದ ಗೌಡ ಕಲ್ಮಂಜ, ದಾಮೋದರ್ ದಾಮು ಉಜಿರೆ, ಹೇಮಂತ್ ಉಜಿರೆ ಉಪಸ್ಥಿತರಿದ್ದರು.












