28.2 C
ಪುತ್ತೂರು, ಬೆಳ್ತಂಗಡಿ
September 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಧರ್ಮಸ್ಥಳ ನೇರ್ತನೆ ರಸ್ತೆ; ಸ್ಥಳೀಯರಿಂದ ಶ್ರಮದಾನದ ಮೂಲಕ ದುರಸ್ತಿ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ನೇರ್ತನೆ ರಸ್ತೆ ಮಳೆಗಾಲದಲ್ಲಿ ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು ವಾಹನ ಸಂಚಾರವೇ ಅಸಾಧ್ಯವಾದ ಸ್ಥಿತಿ ನಿರ್ಮಾಣವಾಗಿದ್ದು ಮಾಜಿ ಗ್ರಾ.ಪಂ‌ ಸದಸ್ಯ ಧರ್ಮಸ್ಥಳ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಟಿ.ವಿ ದೇವಸ್ಯ ಅವರ ನೇತೃತ್ವದಲ್ಲಿ ಗ್ರಾಮಸ್ಥರು ಸೆ.6 ರಂದು ಶ್ರಮದಾನದ ಮೂಲಕ ರಸ್ತೆ ದುರಸ್ತಿ ಮಾಡಿದರು.

ಮಳೆ ಕಡಿಮೆಯಾದರೂ ಗ್ರಾಮಪಂಚಾಯತು ಅಡಳಿತ ಕನಿಷ್ಟ ದುರಸ್ತಿಗೂ ಮುಂದಾಗಿರಲಿಲ್ಲ ಈ ಹಿನ್ನಲೆಯಲ್ಲಿ ಇದೀಗ ಸ್ಥಳೀಯರ ನೇತೃತ್ವದಲ್ಲಿ ರಸ್ತೆಯ ದುರಸ್ತಿ ಕಾರ್ಯವನ್ನು ಮಾಡಲಾಗಿದೆ. ತಮ್ಮದೇ ಖರ್ಚಿನಲ್ಲಿ ಕಲ್ಲಿನ ಹುಡಿಯನ್ನು ತಂದು ಸುಮಾರು ಎರಡು ಕಿ.ಮೀ‌ ವರೆಗೆ ರಸ್ತೆಯಲ್ಲಿ ಬಿದ್ದಿದ್ದ ಹೊಂಡಗಳನ್ನು ಮುಚ್ಚುವ ಕಾರ್ಯ ಮಾಡಿದ್ದಾರೆ.
ಸ್ಥಳೀಯ ಮುಖಂಡರುಗಳಾದ ಸದಾಶಿವ, ತೋಮಸ್ ಅಬ್ರಹಾಂ ಜೇಮ್ಸ್ ಹಾಗೂ ಸ್ಥಳೀಯ ಜನರೆಲ್ಲರೂ‌ ಸೇರಿ ಶ್ರಮದಾನದ ಮೂಲಕ ರಸ್ತೆಯನ್ನು ಸಂಚಾರ ಯೋಗ್ಯವಾಗಿಸಿದರು‌ ಕೆಲವು ವರ್ಷಗಳ‌ ಹಿಂದೆ ರಸ್ತೆ ಈ ರಸ್ತೆಯ ಕಾಂಕ್ರಿಟೀಕರಣಕ್ಕೆಂದು ಜಲ್ಲಿ ತಂದು ಹಾಕಿದ್ದರೂ ಕಾಮಗಾರಿ ನಡೆದೆ‌ ಇರಲಿಲ್ಲ‌ ಈ ಮಳೆಗಾಲದಲ್ಲಂತೂ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿತ್ತು. ಈ‌ ಹಿನ್ನಲೆಯಲ್ಲಿ ಸ್ಥಳೀಯರು ಇದೀಗ ಶ್ರಮದಾನ ನಡೆಸಿದ್ದಾರೆ.

Related posts

ಉಜಿರೆ: ಎಸ್ ಡಿ ಎಂ ಕಾಲೇಜು ಆಶ್ರಯದಲ್ಲಿ ಅಧಿವಕ್ತ ಪರಿಷದ್ ದ.ಕ. ಜಿಲ್ಲಾ ಘಟಕ ಮತ್ತು ಬೆಳ್ತಂಗಡಿ ವಕೀಲರ ಸಂಘದ ಸಹಯೋಗದಲ್ಲಿ ಸಂವಿಧಾನ ದಿನ ಆಚರಣೆ

Suddi Udaya

ಓಡಿಲ್ನಾಳ ಸ.ಉ. ಪ್ರಾ ಶಾಲೆಯಲ್ಲಿ ವಿದ್ಯಾರ್ಥಿ ಮಂತ್ರಿ ಮಂಡಲದ ಚುನಾವಣೆ

Suddi Udaya

ಎಕ್ಸೆಲ್ ನಲ್ಲಿ ಗಾಂಧಿ ಜಯಂತಿ ಆಚರಣೆ

Suddi Udaya

ಹದಗೆಟ್ಟಿರುವ ಮಲ್ಲೊಟ್ಟು – ಹರ್ಪಳ ರಸ್ತೆ: ದುರಸ್ತಿಗೊಳಿಸುವಂತೆ ಗ್ರಾಮಸ್ಥರ ಒತ್ತಾಯ

Suddi Udaya

ಭಾರತ್ ಬೀಡಿ ಕಂಪೆನಿ ಉಳಿಸಿ ಭಾರತ್ ಬೀಡಿ ಕಂಪೆನಿ ಎದುರು ಸಿಐಟಿಯು ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ

Suddi Udaya

ಕಲ್ಮಂಜ : ಸಿದ್ದಬೈಲು ಪರಾರಿ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ

Suddi Udaya
error: Content is protected !!