September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವೇಣೂರು ವಿ.ಹಿಂ.ಪ. ಬಜರಂಗದಳ ಹಾಗೂ ಹಿಂದೂ ಜಾಗರಣ ವೇದಿಕೆ ಆಶ್ರಯದಲ್ಲಿ ಅಖಂಡ ಭಾರತ ಸಂಕಲ್ಪ ದಿನ ಮತ್ತು ಪಂಜಿನ ಮೆರವಣಿಗೆ

ವೇಣೂರು: ವಿಶ್ವ ಹಿಂದೂ ಪರಿಷತ್ ಬಜರಂಗದಳ ಪ್ರಖಂಡ ಹಾಗೂ ಹಿಂದೂ ಜಾಗರಣ ವೇದಿಕೆ ಇದರ ಆಶ್ರಯದಲ್ಲಿ ಅಖಂಡ ಭಾರತ ಸಂಕಲ್ಪ ದಿನ ಮತ್ತು ಪಂಜಿನ ಮೆರವಣಿಗೆಯು ಆ.14ರಂದು ವೇಣೂರು ಶ್ರೀರಾಮ ಭಜನಾ ಮಂದಿರದಿಂದ ಹೊರಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದವರೆಗೆ ಪಂಜನ್ನು ಹಿಡಿದು ಮೆರವಣಿಗೆಯ ಮೂಲಕ ನಡೆಯಿತು.

ಸಂಘದ ಮಂಗಳೂರು ವಿಭಾಗದ ಸಾಮರಸ್ಯ ಸಹ ಸಂಯೋಜಕ ಶಿವಪ್ರಸಾದ ಮಲೆಬೆಟ್ಟು ಇವರು ದಿಕ್ಸೂಚಿ ಭಾಷಣವನ್ನು ಮಾಡಿ ಸ್ವಾತಂತ್ರ್ಯದ ಪೂರ್ವದಲ್ಲಿ ಅಖಂಡವಾಗಿದ್ದ ಭಾರತ ತ್ರಿಖಂಡವಾದ ಕರಾಳ ದಿನದ ಸನ್ನಿವೇಶಗಳನ್ನು ನೆನಪಿಸಿ ಹಿಂದೂ ಸಮಾಜ ಸಂಘಟಿತವಾಗಿ ಜಾಗೃತವಾದಾಗ ಮಾತ್ರ ರಾಷ್ಟ್ರ ಉಳಿದೀತು ಎಂದರು.

ವೇದಿಕೆಯಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಹಿಂದೂ ಜಾಗರಣ ವೇದಿಕೆ ತಾಲೂಕು ಸಂಚಾಲಕ ನಿರಂಜನ ನಿಟ್ಟಡೆ, ಪ್ರಮುಖರಾದ ವಿಜಯ ಗೌಡ, ಸುದರ್ಶನ್ ಕಾರಂತ್, ಸೋಮನಾಥ ಕೆ.ವಿ., ರಮೇಶ್ ಹೆಗ್ಡೆ, ದಿನೇಶ್ ಕರಿಮಣೇಲು, ಕೆ.ವೈ. ರವಿ ಭಟ್ ಇನ್ನಿತರರು ಉಪಸ್ಥಿತರಿದ್ದರು.

ವಿ.ಹಿಂ.ಪ. ನ ಪ್ರಮುಖರಾದ ಸುದೀಪ್ ಪಟವರ್ಧನ್ ಸ್ವಾಗತಿಸಿ, ರೋಹಿತ್ ಆಚಾರ್ಯ ನಡ್ತಿಕಲ್ಲು ವೈಯಕ್ತಿಕ ಗೀತೆ ಹಾಡಿದರು. ಸಂತೋಷ ಮಂಜಿಲ ಸಂಕಲ್ಪ ಬೋಧಿಸಿ, ವಿ.ಹಿಂ.ಪ. ನ ಪ್ರಮುಖ ಪ್ರಜ್ವಲ್ ವೇಣೂರು ಧನ್ಯವಾದ ವಿತ್ತರು. ಉಮೇಶ ನಡ್ತಿಕಲ್ಲು ಕಾರ್ಯಕ್ರಮವನ್ನು ನಿರೂಪಿಸಿದರು. ಸರ್ವಾರ್ಥ ಎಸ್ ಜೈನ್ ಹಾಡಿದ ವಂದೇಮಾತರಂ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

Related posts

ಏ.2-10: ಕುರಾಯ ಶ್ರೀ ಸದಾಶಿವ ದೇವರ ಪ್ರತಿಷ್ಠಾ ಮಹೋತ್ಸವ ಮತ್ತು ವಾರ್ಷಿಕ ಜಾತ್ರೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ನಿವೃತ್ತ ಶಿಕ್ಷಕ ಶಂಕರ್ ಎನ್. ತಾಮನ್ಕರ್ ಅವರಿಂದ ರೂ.47 ಸಾವಿರ ಧನಸಹಾಯ

Suddi Udaya

ತಾಲೂಕು ಮಟ್ಟದ ಭತ್ತ ಬೆಳೆ ಪ್ರಶಸ್ತಿಗೆ ಸೆ.30ರ ತನಕ ಅರ್ಜಿ ಸಲ್ಲಿಸಲು ಅವಕಾಶ

Suddi Udaya

ತಾಜುಲ್ ಉಲಮಾ ರಿಲೀಫ್ ಟ್ರಸ್ಟ್ ಮದ್ದಡ್ಕ ವತಿಯಿಂದ 3 ಜೋಡಿ ಸರಳ ಸಮೂಹಿಕ ವಿವಾಹ

Suddi Udaya

ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಯಲ್ಲಿ “ಪ್ರಥಮ ಚಿಕಿತ್ಸೆ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಶಿಬಿರ

Suddi Udaya

ನಡ : 2024-25ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆ

Suddi Udaya
error: Content is protected !!