ಬೆಳ್ತಂಗಡಿ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮುಳಿಯ ಗೋಲ್ಡ್ & ಡೈಮಂಡ್ಸ್ ವತಿಯಿಂದ ಸೆ. 12ರಂದು ಬೆಳ್ತಂಗಡಿ ಶೋರೂಂನಲ್ಲಿ ‘ಕೃಷ್ಣ ವೇಷ ಸ್ಪರ್ಧೆ’ ಆಯೋಜಿಸಲಾಗಿದೆ.

ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ, ಸಂಪ್ರದಾಯ ಹಾಗೂ ಶ್ರೀಕೃಷ್ಣನ ಕುರಿತಾದ ಭಕ್ತಿಭಾವವನ್ನು ಬೆಳೆಸುವ ಉದ್ದೇಶದಿಂದ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಮಧ್ಯಾಹ್ನ 2 ಗಂಟೆಗೆ ನಡೆಯಲಿರುವ ಸ್ಪರ್ಧೆಯಲ್ಲಿ ಮೂರು ವಿಭಾಗಗಳಲ್ಲಿ ಮಕ್ಕಳು ಭಾಗವಹಿಸಲಿದ್ದಾರೆ.
0ರಿಂದ 3 ವರ್ಷದ ಮಕ್ಕಳಿಗೆ ‘ಮುದ್ದು ಕೃಷ್ಣ’, 4ರಿಂದ 7 ವರ್ಷದ ಮಕ್ಕಳಿಗೆ ‘ಬಾಲ ಕೃಷ್ಣ’ ಹಾಗೂ 8ರಿಂದ 12 ವರ್ಷದ ಮಕ್ಕಳಿಗೆ ‘ರಾಧಾ ಕೃಷ್ಣ’ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ.
ಪ್ರತಿ ವಿಭಾಗದಲ್ಲಿಯೂ ವಿಜೇತರನ್ನು ಆಯ್ಕೆ ಮಾಡಿ ಆಕರ್ಷಕ ಬಹುಮಾನ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಗುವುದು. ಶ್ರೀಕೃಷ್ಣನ ವೇಷದಲ್ಲಿ ಮುದ್ದು ಮಕ್ಕಳು ಕಂಗೊಳಿಸಲಿರುವ ಈ ಸ್ಪರ್ಧೆ ಜನ್ಮಾಷ್ಟಮಿ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಲಿದೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ 9902349916 / 8792530916 ಸಂಪರ್ಕಿಸಬಹುದು. ಕಾರ್ಯಕ್ರಮ ಮುಳಿಯ ಗೋಲ್ಡ್ & ಡೈಮಂಡ್ಸ್, ಬೆಳ್ತಂಗಡಿಯಲ್ಲಿ ನಡೆಯಲಿದೆ.












