30.3 C
ಪುತ್ತೂರು, ಬೆಳ್ತಂಗಡಿ
September 9, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಆದಿನಾಥ್ ಬಜಾಜ್ ಶೋರೂಮ್‌ನಲ್ಲಿ ಹೊಸ ವಿನ್ಯಾಸದ ಪಲ್ಸರ್ 150, 125 ಬಿಡುಗಡೆ

ಬೆಳ್ತಂಗಡಿ: ಹೊಸ ವಿನ್ಯಾಸ ಹಾಗೂ ಆಕರ್ಷಕ ವೈಶಿಷ್ಟ್ಯಗಳೊಂದಿಗೆ ಬಜಾಜ್ ಸಂಸ್ಥೆಯ ನವೀಕೃತ ಪಲ್ಸರ್ 150 ಮತ್ತು ಪಲ್ಸರ್ 125 ಬೈಕ್‌ಗಳು ಸೆ.9ರಂದು ಬೆಳ್ತಂಗಡಿಯ ಆದಿನಾಥ್ ಬಜಾಜ್ ಶೋರೂಮ್‌ನಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಂಡವು.

ಆದಿನಾಥ್ ಬಜಾಜ್ ಶೋರೂಮ್‌ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಹೊಸ ವಿನ್ಯಾಸದ ಪಲ್ಸರ್ ಬೈಕ್‌ಗಳನ್ನು ಗಣ್ಯರು ಅನಾವರಣಗೊಳಿಸುವ ಮೂಲಕ ಮಾರುಕಟ್ಟೆಗೆ ಪರಿಚಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆದಿನಾಥ್ ಬಜಾಜ್ ಶೋರೂಮ್ ಮಾಲಕ ರಾಜೇಶ್ ಟಿ., ಕಳೆದ 13 ವರ್ಷಗಳಿಂದ ಬೆಳ್ತಂಗಡಿ ಭಾಗದ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆ ನೀಡುತ್ತಾ ಬರುತ್ತಿದ್ದೇವೆ. ಇದೀಗ ಬಜಾಜ್ ಸಂಸ್ಥೆಯ ನವೀಕೃತ ವಿನ್ಯಾಸದ ಪಲ್ಸರ್ ಬೈಕ್‌ಗಳು ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆಯುವ ವಿಶ್ವಾಸವಿದೆ ಎಂದರು.

ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಸುದ್ದಿ ಉದಯ ಪತ್ರಿಕೆಯ ಮುಖ್ಯಸ್ಥ ಸಂತೋಷ್ ಪಿ. ಕೋಟ್ಯಾನ್ ಬಳಂಜ, ಬೆಳ್ತಂಗಡಿ ಆಕಾಶ್ ಮೊಬೈಲ್ ಮಾಲಕ ಸಂತೋಷ್ ಮುಂಡೂರು, ಶ್ರೀರಾಮ್ ಫೈನಾನ್ಸ್ ಎಕ್ಸಿಕ್ಯೂಟಿವ್ ಆಫೀಸರ್ ಧರ್ಮರಾಜ್, ಎಲ್‌&ಟಿ ಫೈನಾನ್ಸ್ ಎಕ್ಸಿಕ್ಯೂಟಿವ್ ಆರ್ಚನಾ, ಆದಿನಾಥ್ ಬಜಾಜ್ ಶೋರೂಮ್‌ನ ಸತೀಶ್ ಕೋಟ್ಯಾನ್, ಲತೀಫ್ ಸೇರಿದಂತೆ ಶೋರೂಮ್ ಸಿಬ್ಬಂದಿ ಉಪಸ್ಥಿತರಿದ್ದರು.

Related posts

ಸ್ಮಿತೇಶ್ ಎಸ್ ಬಾರ್ಯರವರಿಗೆ ರಾಜ್ಯ ಯುವ ಪ್ರಶಸ್ತಿ – 2025

Suddi Udaya

ಉಜಿರೆಯ ಎಸ್‌ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಕಾಲೇಜಿಗೆ ಮತ್ತೊಮ್ಮೆ ಶ್ರೇಷ್ಠತೆ ಸಾಬೀತು

Suddi Udaya

ಆಪರೇಷನ್ ಸಿಂಧೂರ ಯಶಸ್ವಿ ಕಾರ್ಯಚರಣೆ: ಬೆಳ್ತಂಗಡಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ನೇತೃತ್ವದಲ್ಲಿ ಸೈನಿಕರಿಗೆ ಅಭಿನಂದನೆ

Suddi Udaya

ನಡ ಸರಕಾರಿ ಪ್ರೌಢಶಾಲೆಗೆ ಶೇ. 97.82 ಫಲಿತಾಂಶ

Suddi Udaya

ಬೆಳ್ತಂಗಡಿ ನಿವಾಸಿ, ವಿದ್ಯಾರ್ಥಿ ಆದಿಲ್ ಹುಸೈನ್ ಮೇಲೆ ಹಲ್ಲೆ

Suddi Udaya

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಬೆಳ್ತಂಗಡಿ ವಲಯದ ಅಧ್ಯಕ್ಷರಾಗಿ ರವಿ ಪೂಜಾರಿ, ಕಾರ್ಯದರ್ಶಿಯಾಗಿ ದಾಮೋದರ ಆಯ್ಕೆ

Suddi Udaya
error: Content is protected !!