30.7 C
ಪುತ್ತೂರು, ಬೆಳ್ತಂಗಡಿ
September 10, 2026
ಪ್ರಮುಖ ಸುದ್ದಿಬೆಳ್ತಂಗಡಿವರದಿ

ಪಣೆಜಾಲು ಶ್ರೀ ಸ್ಟಾರ್ ಯುವಕ ಮಂಡಲ, ಶ್ರೀ ಸ್ಟಾರ್ ಮಹಿಳಾ ಮಂಡಲ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ

ಗುರುವಾಯನಕೆರೆ: ಶ್ರೀ ಸ್ಟಾರ್ ಯುವಕ ಮಂಡಲ, ಶ್ರೀ ಸ್ಟಾರ್ ಮಹಿಳಾ ಮಂಡಲ ಪಣೆಜಾಲು ಇವರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ 34ನೇ ವರ್ಷದ ಮೊಸರು ಕುಡಿಕೆ ಉತ್ಸವವನ್ನು ಸೆ.4ರಂದು ಪಣೆಜಾಲು ಗುರುವಾಯನಕೆರೆ ಮೈದಾನದಲ್ಲಿ ವಿಜೃಂಭಣೆಯಿಂದ ನಡೆಯಿತು.

ಉದ್ಘಾಟನೆಯನ್ನು ನಿವೃತ್ತ ಶಿಕ್ಷಕಿ ಬೇಬಿ ಸುರೇಶ್ ಬಾಬು ನಿರ್ವಹಿಸಿದರು. ಅಧ್ಯಕ್ಷತೆಯನ್ನು ಯುವಕ ಸಂಘದ ಅಧ್ಯಕ್ಷ ಗಣೇಶ್ ಆಚಾರ್ಯ ಗುಂಪಲಾಜೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಗುರುವಾಯನಕೆರೆ ಕೆನರಾ ಬ್ಯಾಂಕ್ ವ್ಯವಸ್ಥಾಪಕ ರಾಜಶೇಖರ್ ಆರ್, ಬೆಳ್ತಂಗಡಿ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ. ರವಿಕುಮಾರ್, ಉಪಸ್ಥಿತರಿದ್ದರು.

ಜಗನ್ನಾಥ್ ಕುಲಾಲ್ ಸ್ವಾಗತಿಸಿ,ದರು. ನಂತರ ವಿವಿಧ ಆಟೋಟ ಸ್ಪರ್ಧೆಗಳು, ಶ್ರೀ ಕೃಷ್ಣ ವೇಷ ಸ್ಪರ್ಧೆ ನಡೆಯಿತು. ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ಗಣೇಶ್ ಆಚಾರ್ಯ ಗುಂಪಾಲಜೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಗುರುದೇವ ವಿವಿಧೋಧ್ದೇಶ ಸಹಕಾರಿ ಸಂಘದ ಅಧ್ಯಕ್ಷ ಭಗೀರಥ ಜಿ , ಎಸ್.ಕೆ.ಡಿ.ಆರ್.ಡಿ.ಪಿ ನಿವೃತ್ತ ಪ್ರಾದೇಶಿಕ ನಿರ್ದೇಶಕ ಜಯಶಂಕರ ಶರ್ಮ, ಬೆಳ್ತಂಗಡಿ ಸ.ಪ.ಪೂ. ಕಾಲೇಜು ಪ್ರಾಂಶುಪಾಲರು ಸುಕುಮಾರ್ ಜೈನ್, ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಸಾಧಕರಾದ ಗುರುವಾಯನಕೆರೆ ಪ್ರೌಢ ಶಾಲೆಯ ನಿವೃತ್ತ ಶಿಕ್ಷಕಿ ತ್ರಿವೇಣಿ ಬಿ ಪ್ರವೀಣ್ ಕುಮಾರ್ ಕೆ. ಶಿವಾಜಿ ನಗರ ಇವರನ್ನು ಸನ್ಮಾನಿಸಲಾಯಿತು. ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಸ್ಥಳೀಯ ಪ್ರತಿಭಾವಂತ ವಿದ್ಯಾರ್ಥಿಗಳೀಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಶಾಂತಿ ರಾಜ್ ಜೈನ್ ಸ್ವಾಗತಿಸಿದರು. ರಾಜೇಶ್ ಆದೇಲು ವಂದಿಸಿದರು. ವಿದ್ಯಾಕುಲಾಲ್, ಸಮನ್ವಿತ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಯುವಕ ಸಂಘದ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸಲಹೆಗಾರರು ಭಾಗವಹಿಸಿ ಯಶಸ್ವಿಗೆ ಸಹಕರಿಸಿದರು.

Related posts

ವೇಣೂರು: ಪಡ್ಡಂದಡ್ಕ ನೂರುಲ್ ಹುಧಾ ಮಸೀದಿಯಲ್ಲಿ ಸಂಭ್ರಮದ ಈದ್ ಉಲ್ ಫಿತರ್ ಆಚರಣೆ

Suddi Udaya

ಫೆ.20-23: ಪಟ್ರಮೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೆ ಮತ್ತು ದೈವಗಳ ನೇಮೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬ೦ಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಮಹಾಸಭೆ: ರೂ. 1020.75 ಕೋಟಿ ವ್ಯವಹಾರ, ರೂ. 4.30 ಕೋಟಿ ಲಾಭ, ಶೇ. 17 ಡಿವಿಡೆಂಡ್

Suddi Udaya

ಬಳಂಜ: ಛದ್ಮವೇಷ ಸ್ಪರ್ಧೆಯಲ್ಲಿ ಸತತ ಪ್ರಶಸ್ತಿ ಪಡೆದ ಬಳಂಜ ಶಾಲಾ ವಿದ್ಯಾರ್ಥಿ ಸಮ್ಯಕ್ ಜೈನ್

Suddi Udaya

ಎಸ್‌ಕೆಎಸ್‌ಎಸ್‌ಎಫ್ ಕಕ್ಕಿಂಜೆ ಕ್ಲಸ್ಟರ್: ಅಧ್ಯಕ್ಷ ಹಫೀಝ್ ಚಿಬಿದ್ರೆ, ಪ್ರ. ಕಾರ್ಯದರ್ಶಿ ಸದಖತುಲ್ಲಾ ದಾರಿಮಿ, ಕೋಶಾಧಿಕಾರಿ ರಫೀಕ್ ಹಾಜಿ

Suddi Udaya

ಎಲ್ ಸಿ ಆರ್ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕ-ರಕ್ಷಕರ ಸಭೆ :

Suddi Udaya
error: Content is protected !!