30.8 C
ಪುತ್ತೂರು, ಬೆಳ್ತಂಗಡಿ
September 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ: ರಾಜ್ಯ ಸರಕಾರಿ ಅಧಿಕಾರಿಗಳ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ಸದಸ್ಯರಿಗೆ ಶೇ 20 ಡಿವಿಡೆಂಡ್ ಘೋಷಣೆ

ಬೆಳ್ತಂಗಡಿ: ರಾಜ್ಯ ಸರಕಾರಿ ಅಧಿಕಾರಿಗಳ ವಿವಿಧೋದ್ದೇಶ ಸಹಕಾರಿ ಸಂಘದ ಮಹಾಸಭೆಯು ಸುವರ್ಣ ಆರ್ಕೇಡ್ ಸಂತೆಕಟ್ಟೆ ಬೆಳ್ತಂಗಡಿಯಲ್ಲಿ ಸಂಘದ ಅಧ್ಯಕ್ಷರಾದ ಡಾ.ಕೆ.ಜಯಕೀರ್ತಿ ಜೈನ್ ರವರ ಅಧ್ಯಕ್ಷತೆಯಲ್ಲಿ ಸೆ.12ರಂದು ನಡೆಯಿತು.

ಮಹಾಸಭೆಯ ಮುಂಚಿತವಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಉಜಿರೆಯ ಸಹಯೋಗದೊಂದಿಗೆ ಉಚಿತ ಹೃದ್ರೋಗ ತಪಾಸಣಾ ಶಿಬಿರವು ನಡೆಯಿತು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಉಜಿರೆಯ ಎಂ.ಡಿ ಎಂ. ಜನಾರ್ಧನ್ ಶಿಬಿರವನ್ನು ಉದ್ಘಾಟಿಸಿ ಸಂಘದ ಈ ಸಮಾಜ ಮುಖಿ ಸೇವೆಯನ್ನು ಶ್ಲಾಘಿಸಿ ಶುಭ ಕೋರಿದರು. ಒಟ್ಟು 200 ಕ್ಕೂ ಮಿಕ್ಕಿ ಶಿಬಿರಾರ್ಥಿಗಳು ಭಾಗವಹಿಸಿ ಶಿಬಿರದ ಸದುಪಯೋಗನ್ನು ಪಡೆದರು.

ವಾರ್ಷಿಕ ಸಭೆಯನ್ನು ಉದ್ದೇಶಿಸಿ ಸಂಘದ ಅಧ್ಯಕ್ಷರಾದ ಡಾ.ಕೆ. ಜಯಕೀರ್ತಿ ಜೈನ್ ರವರು ಮಾತನಾಡುತ್ತಾ ಸಂಘದ ಆಡಳಿತ ಮಂಡಳಿ ಸದಸ್ಯರು ಹಾಗೂ ಎಲ್ಲಾ ಸದಸ್ಯ ಮಿತ್ರರು ಹಾಗೂ ಸಾರ್ವಜನಿಕರ ಸಹಕಾರದಿಂದ ಕಳೆದ 17 ವರ್ಷಗಳಿಂದ ಸಂಘವು ನಡೆದು ಬಂದ ದಾರಿಯನ್ನು ವಿವರಿಸಿದರು. ಪ್ರತೀ ವರ್ಷದಂತೆ ಈ ವರ್ಷವೂ ಸಂಘವು ಲಾಭಾಂಶದಲ್ಲಿದ್ದು ಸದಸ್ಯರಿಗೆ 20% ಡಿವಿಡೆಂಡ್ ಘೋಷಿಸಿದರು.

ಸಂಘದ ಸದಸ್ಯರು ಹಾಗೂ ಸಿಬ್ಬಂದಿಗಳ 5 ಮಂದಿ ಮಕ್ಕಳಿಗೆ S.S.L.C. P.U.C. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಬಗ್ಗೆ ಪ್ರತಿಭಾ ಪುರಸ್ಕಾರವೆಂದು ಪ್ರೋತ್ಸಾಹಕ ಬಹುಮಾನ ನೀಡಿ ಅಭಿನಂದಿಸಲಾಯಿತು.
ಪಿ.ಯು.ಸಿ. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಕುಮಾರಿ ನಿಜ ಕುಲಾಲ್, ಶ್ರೇಯಾ ಗೌಡ, ಸಾನ್ವಿ ಜೈನ್ ಹಾಗೂ ಆಶ್ವೇಷ್ ಡಿ. ಜೈನ್ ರವರಿಗೆ ಹಾಗೂ ಎಸ್.ಎಸ್ ಎಲ್.ಸಿ ಯಲ್ಲಿ ಹೆಚ್ಚು ಅಂಕ ಗಳಿಸಿದ ಪ್ರವಲ್ ರಾಜ್ ಜೈನ್ ರವರಿಗೆ ಪೋತ್ಸಾಹ ಬಹುಮಾನ ನೀಡಲಾಯಿತು.

ಸಂಘದ ಉಪಾಧ್ಯಕ್ಷ ಚಿದಾನಂದ ಹೂಗಾರ್ ಸ್ವಾಗತಿಸಿ, ಪ್ರಶಾಂತ್ ವಂದಿಸಿದರು. ಸಲಹೆಗಾರರಾದ ವಸಂತ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಸನ್ಮಾನ ಕಾರ್ಯಕ್ರಮವನ್ನು ಹರಿಪ್ರಸಾದ್ ನಿರ್ವಹಿಸಿದರು.
ನಿರ್ದೇಶಕರಾದ ಚಂದ್ರಶೇಖರ್, ಅಬ್ದುಲ್ ರಝಾಕ್, ಆರತಿ ಜೈನ್ ಪ್ರಶಾಂತ್ ಕುಮಾ‌ರ್, ಹೇಮಲತಾ, ವಾರಿಜಾ ಕೆ., ಹರಿಪ್ರಸಾದ್, ರತ್ನಾವತಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ವತ್ಸಲಾ ಜ್ಯೋತಿರಾಜ್, ಕೊಕ್ಕಡ ಶಾಖಾಧಿಕಾರಿ ಪಿ. ಅತಿಶಯ್ ಜೈನ್, ಸಿಬ್ಬಂದಿಗಳಾದ ವಿಶಾಲ ಮತ್ತು ಧಾಮಿನಿ ಜೈನ್ ಹಾಗೂ ಪಿಗ್ಮಿ ಸಂಗ್ರಾಹಕರು, ನಿವತ್ತ A.E.E. ಸುಭಾಶ್ಚಂದ್ರ, ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಡಾ.ದಿತೇಶ್ ಎಂ .ಹೃದ್ರೋಗ ತಜ್ಞ ಹಾಗೂ ಡಾ. ಆದರ್ಶ್ ವೈದ್ಯಾಧಿಕಾರಿ ಶಿಬಿರ ನಡೆಸಿಕೊಟ್ಟರು.

Related posts

ನಾವರ ಶ್ರೀ ಮಹಾಲಿಂಗೇಶ್ವರ ದೇವರ ಸಂಭ್ರಮದ ಬ್ರಹ್ಮಕಲಶೋತ್ಸವ: ಧಾರ್ಮಿಕ ಸಭೆ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಭೀಷ್ಮ ಏಕಾದಶೀ ಪ್ರಯುಕ್ತ ವಿಷ್ಣು ಸಹಸ್ರನಾಮ ಪಠಣ

Suddi Udaya

ಕುವೆಟ್ಟು: ಮದ್ದಡ್ಕ ನಿವಾಸಿ ಹೆನ್ರಿ ಡಿಸೋಜ ನಿಧನ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀ ಪೂರ್ವಾಧ್ಯಕ್ಷ, ಉದ್ಯಮಿ ಪೃಥ್ವಿ ರಂಜನ್ ರಾವ್ ಹೃದಯಾಘಾತದಿಂದ ನಿಧನ

Suddi Udaya

ಮೈಸೂರಿನಲ್ಲಿ ಬಾಲಕಿಯರ ವಿಭಾಗದ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟ: ಜಿದ್ದಾಜಿದ್ದಿನ ಪಂದ್ಯಾವಳಿಯಲ್ಲಿ ಸತತ 9ನೇ ಬಾರಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಬಂದಾರು ಶಾಲೆ

Suddi Udaya

ಡೆಂಗ್ಯೂ ಜ್ವರಕ್ಕೆ ಬೆಳ್ತಂಗಡಿ ಖಾಸಗಿ ಕಾಲೇಜು ವಿದ್ಯಾರ್ಥಿ ಬಲಿ

Suddi Udaya
error: Content is protected !!