27.8 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಬೆಳ್ತಂಗಡಿವರದಿ

ವೇಣೂರು: ಶಾಸಕ ಹರೀಶ್ ಪೂಂಜರಿಂದ ಕಾಂಕ್ರಿಟ್ ರಸ್ತೆ ಕಾಮಗಾರಿಗಳಿಗೆ ಶಿಲಾನ್ಯಾಸ- ಸಾರ್ವಜನಿಕ ರಿಕ್ಷಾ ತಂಗುದಾಣ ಉದ್ಘಾಟನೆ

ವೇಣೂರು: ವೇಣೂರು ಗ್ರಾಮ ಪಂಚಾಯತ್‌ನ ವಿಶೇಷ ಅನುದಾನಗಳಡಿಯ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಮತ್ತು ಉದ್ಘಾಟನೆಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಇಂದು ನೆರವೇರಿಸಿದರು.

ವೇಣೂರು ಸ್ವಸ್ತಿಕ ನಗರದಲ್ಲಿ ರೂ. ೨.೩೦ ಲಕ್ಷ ಮತ್ತು ಬಜಿರೆ ಗ್ರಾಮದ ಮುದ್ದಾಡಿ ಬಳಿ ರೂ. ೧.೭೦ ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕಾಂಕ್ರಿಟ್ ರಸ್ತೆಗೆ ಶಿಲಾನ್ಯಾಸ ಮತ್ತು ಬಜಿರೆಯ ಮುದ್ದಾಡಿಯಲ್ಲಿ ರೂ. ೧.೨೫ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸಾರ್ವಜನಿಕ ರಿಕ್ಷಾ ತಂಗುದಾಣದ ಉದ್ಘಾಟನೆಯನ್ನು ಶಾಸಕರು ನೆರವೇರಿಸಿದರು.

ವೇಣೂರು ಗ್ರಾ.ಪಂ. ಅಧ್ಯಕ್ಷೆ ಮಲ್ಲಿಕಾ ಕಾಶಿನಾಥ್ ಹೆಗ್ಡೆ, ಸುರೇಶ್ ಆರಿಗ ಪೆರ್ಮಾಣುಗುತ್ತು, ಉದ್ಯಮಿ ಕೆ. ಭಾಸ್ಕರ ಪೈ, ತಾ.ಪಂ. ಮಾಜಿ ಸದಸ್ಯ ಕೆ. ವಿಜಯ ಗೌಡ, ನ್ಯಾಯವಾದಿ ಸಹನಾ ಕುಂದರ್ ಸೂಡಾ ಗುಂಡೂರಿ, ಪಂಚಾಯತು ಸದಸ್ಯರಾದ ಸುನಿಲ್ ಕುಮಾರ್, ಸುಜಾತ, ಲೀಲಾವತಿ, ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷರಾದ ವಸಂತ ಮಡಿವಾಳ ಅಂಡಿಂಜೆ, ಪ್ರಮುಖರಾದ ಶಶಿಕುಮಾರ್ ಇಂದ್ರ, ಶ್ರೀಮತಿ ರೂಪಾ ಚಂದನ ಸೇರಿದಂತೆ ಊರಿನ ಹಲವು ಮಂದಿ ಗಣ್ಯರು, ಬೂತ್ ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.ಗ್ರಾ.ಪಂ. ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯರಾಗಿರುವ ಅರುಣ್ ಕ್ರಾಸ್ತ ಅವರು ಸ್ವಾಗತಿಸಿದರು.

Related posts

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ ಹಾಗೂ ಅರಣ್ಯ ಇಲಾಖೆ ವತಿಯಿಂದ ವನಮಹೋತ್ಸವ

Suddi Udaya

ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯು. ಶೇಖ್ ಲತೀಫ್ ರವರಿಗೆ ಸೇವಾ ನಿವೃತ್ತಿ

Suddi Udaya

ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಮೇಷ ಜಾತ್ರೋತ್ಸವ

Suddi Udaya

ವೈಯಕ್ತಿಕ ದ್ವೇಷ ಹಿನ್ನೆಲೆ ವ್ಯಕ್ತಿಯ ಮೇಲೆ ಹಲ್ಲೆ – ಪ್ರಕರಣ ದಾಖಲು

Suddi Udaya

ಹತ್ಯಡ್ಕ: ನಿವೃತ್ತ ಶಿಕ್ಷಕ ಮಹಾದೇವ ಹೆಬ್ಬಾರ್ ನಿಧನ

Suddi Udaya

ಉಜಿರೆ ಎಸ್‌ಡಿಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಪೋಷಕರ ಸಭೆ

Suddi Udaya
error: Content is protected !!