September 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಸೆ.25: ತಾಲೂಕು ಮಟ್ಟದಲ್ಲಿ ಹಿರಿಯ ನಾಗರಿಕರಿಗಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ

ಬೆಳ್ತಂಗಡಿ: ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಬೆಳ್ತಂಗಡಿ, ಕಾನೂನು ಸೇವೆಗಳ ಸಮಿತಿ ಬೆಳ್ತಂಗಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳ್ತಂಗಡಿ ಹಾಗೂ ತಾಲೂಕು ಪಂಚಾಯತ್ ಬೆಳ್ತಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ 2026-27ನೇ ಸಾಲಿನ ಕೇಂದ್ರ ಸರಕಾರದ ಹಿರಿಯ ನಾಗರೀಕರ ರಾಜ್ಯ ಕ್ರಿಯಾ ಯೋಜನೆಯಂತೆ ತಾಲೂಕು ಮಟ್ಟದಲ್ಲಿ ಹಿರಿಯ ನಾಗರಿಕರಿಗಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಸೆ.25 ರಂದು ಬೆಳ್ತಂಗಡಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಪೂರ್ವಾಹ್ನ 10.00ಕ್ಕೆ ನಡೆಯಲಿದೆ ಎಂದು ತಾಲೂಕು ಪಂಚಾಯತ್ ಪ್ರಕಟಣೆ ತಿಳಿಸಿದೆ.

ಪ್ರಧಾನ ಸಿವಿಲ್ ನ್ಯಾಯಧೀಶರು ಹಾಗೂ ತಾ. ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ರಾಮಲಿಂಗಪ್ಪ ಉದ್ಘಾಟನೆ ನಡೆಸಲಿದ್ದಾರೆ. ಅಧ್ಯಕ್ಷತೆಯನ್ನು ತಾ.ಪಂ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ವಹಿಸಲಿದ್ದಾರೆ.

ತಹಶೀಲ್ದಾರರು ಎಸ್. ಎನ್. ನರಗುಂದ ಮುಖ್ಯ ಅತಿಥಿಗಳಾಗಿರಲಿದ್ದಾರೆ‌. ತಾಲೂಕು ವಕೀಲರ ಸಂಘದ ಅಧ್ಯಕ್ಷ ಅಲೋಶಿಯಸ್ ಎಸ್. ಲೋಬೊ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಮ್, ಕೋಶಾಧಿಕಾರಿ ಮಮ್ತಾಝ್ ಬೇಗಂ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಿಯಾ ಆಗ್ರೇಸ್ ಚಾಕೋ ತಾಲೂಕು ಆರೋಗ್ಯಧಿಕಾರಿ ಡಾ. ಸಂಜಾತ್ ಆರ್.ಬಿ., ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶ್ರೀ ಬಿ. , ಜಿ.ಪಂ., ಮಾಜಿ ಸದಸ್ಯೆ ಹಾಗೂ ಸೌಭಾಗ್ಯ ವಿಕಲಚೇತನರ ಪತ್ತಿನ ಸಹಕಾರಿ ಸಂಘ ಬೆಳ್ತಂಗಡಿ ಸಲಹಾ ಸಮಿತಿ ಸದಸ್ಯೆ ಸಿ.ಕೆ. ಚಂದ್ರಕಲಾ ಮೊದಲಾದವರು ಗೌರವ ಉಪಸ್ಥಿತರಿರಲಿದ್ದಾರೆ‌.

ಹಿರಿಯ ನಾಗರಿಕರಿಗೆ ಕಾನೂನು ಮಾಹಿತಿಯನ್ನು ಹಿರಿಯ ವಕೀಲೆ ಸುಭಾಶಿನಿ ಆರ್, ಸರಕಾರದ ಯೋಜನೆಗಳ ಮಾಹಿತಿಯನ್ನು ತಾಲೂಕು ವಿಕಲಚೇತನರ ಮೇಲ್ವಿಚಾರಕ ಜೋನ್ ಬ್ಯಾಪ್ಟಿಸ್ಟ್ ಡಿಸೋಜ ನಡೆಸಿಕೊಡಲಿದ್ದಾರೆ. ಅರ್ಹರು ಇದರ ಪ್ರಯೋಜನ ಪಡೆಯಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Related posts

ಸೇಕ್ರೆಡ್ ಹಾರ್ಟ್ ಪ.ಪೂ.ಕಾಲೇಜು ವಾರ್ಷಿಕ ಕ್ರೀಡಾಕೂಟ

Suddi Udaya

ಬೆಳ್ತಂಗಡಿ ಧರ್ಮಾಧ್ಯಕ್ಷರ ಪೀಠಾರೋಹಣ ವರ್ದಂತಿ: ನೆಲ್ಯಾಡಿ ಅಲ್ಫೋನ್ಸ ಚರ್ಚ್ ವತಿಯಿಂದ ಶುಭಾಶಯ

Suddi Udaya

ಒಕ್ಕಲಿಗ ಗೌಡರ ಕ್ರಿಕೆಟ್ ಪ್ರೀಮಿಯರ್ ಲೀಗ್: ರಂಜನ್ ಗೌಡ ಮಾಲಿಕತ್ವದ ಕೆಂಪೇಗೌಡ ಬ್ರಿಗೇಡಿಯರ್ಸ್ ಪ್ರಥಮ

Suddi Udaya

ವಿ.ಪ. ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ರವರ ಪರವಾಗಿ ಶಾಸಕ ಹರೀಶ್ ಪೂಂಜರಿಂದ ಕುಕ್ಕೇಡಿ, ವೇಣೂರು, ಅಂಡಿಂಜೆ, ಅಳದಂಗಡಿ, ಬಳೆಂಜ ಗ್ರಾ.ಪಂ. ವ್ಯಾಪ್ತಿಯಲ್ಲಿ ಮತ ಪ್ರಚಾರ

Suddi Udaya

ಉಜಿರೆ ಶ್ರೀ ಧ. ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಶಿಕ್ಷಕರಿಗೆ ‘ವೃತ್ತಿ-ವ್ಯಕ್ತಿತ್ವ ವಿಕಸನ’ ತರಬೇತಿ ಕಾರ್ಯಾಗಾರ

Suddi Udaya

ಸಹಕಾರಿ ಸಪ್ತಾಹದಲ್ಲಿ ಕೃಷಿ ಕ್ಷೇತ್ರದ ಸಾಧಕರಾದ ಪೆರಾಡಿ ಸೊಸೈಟಿ ಸದಸ್ಯರಿಗೆ ಸನ್ಮಾನ

Suddi Udaya
error: Content is protected !!