ನೆರಿಯ : “ಬಂಗೇರ ಬ್ರಿಗೇಡ್ ಬೆಳ್ತಂಗಡಿ ಇದರ ನೆರಿಯ ಗ್ರಾಮದ ನೂತನ ಸಮಿತಿಯನ್ನು ತಾಲೂಕು ಅಧ್ಯಕ್ಷೆ ಶ್ರೀಮತಿ ಬಿನುತಾ ಬಂಗೇರ ಅವರ ನೇತೃತ್ವದಲ್ಲಿ ಬೇಬಿ ಮರೋಟಕುಡಿ ಇವರ ಮನೆಯಲ್ಲಿ ಸೆ.27 ರಂದು ರಚಿಸಲಾಯಿತು.”
ಸಮಿತಿಯ ನೂತನ ಅಧ್ಯಕ್ಷರಾಗಿ ಸಂತೋಷ್ ಎಂ.ಸಿ , ಉಪಾಧ್ಯಕ್ಷರಾಗಿ ಆಗಸ್ಟಿನ್, ಪ್ರಧಾನ ಕಾರ್ಯದರ್ಶಿಯಾಗಿ ವಿನ್ಸೆಂಟ್ ತೋಮಸ್, ಜೊತೆ ಕಾರ್ಯದರ್ಶಿಯಾಗಿ ಪಿ.ಡಿ.ಜೋಸೆಫ್, ಸಂಘಟನಾ ಕಾರ್ಯದರ್ಶಿಯಾಗಿ ಜೋಸೆಫ್ ಎಂ.ವಿ, ಕೋಶಾಧಿಕಾರಿಯಾಗಿ ಜಾಯ್ ಎ.ಕೆ, ಇವರನ್ನು ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು.
ಸದಸ್ಯರಾಗಿ ಮರಿಯಮ್ಮ, ತೋಮಸ್, ಪಿ.ಎ ಸೆಬಾಸ್ಟಿಯನ್, ಪಪ್ಪಚ್ಚನ್ ಎಂ.ಎ, ಜೋಸ್ ಎಂ.ಸಿ, ಜೋಬಿಶ್ ಎಂ.ಎಂ, ಮ್ಯಾಥ್ಯೂ ಕೆ.ಜೆ, ಎಂ.ವಿ ಚಾಕೋಬ್, ಟೋಮಿ ಎಂ.ಸಿ, ಇವರನ್ನು ಆಯ್ಕೆ ಮಾಡಲಾಯಿತು.
ಬೆಳ್ತಂಗಡಿ ಬಂಗೇರ ಬ್ರಿಗೇಡ್‌ನ ಉಪಾಧ್ಯಕ್ಷ ಅನೂಪ್ ಎಂ ಬಂಗೇರ, ಪ್ರಧಾನ ಕಾರ್ಯದರ್ಶಿ ಕೆ.ಸಲೀಂ, ಹೊಸಂಗಡಿ ಬಂಗೇರ ಬ್ರಿಗೇಡ್ ಸಮಿತಿಯ ಅಧ್ಯಕ್ಷರಾದ ತೋಮಸ್ ಎಂ.ಎಂ.ರವರು ಸಭೆಯಲ್ಲಿ ಭಾಗವಹಿಸಿದ್ದರು, ವೇಣೂರು ಬಂಗೇರ ಬ್ರಿಗೇಡ್ ಸಮಿತಿಯ ಅಧ್ಯಕ್ಷರಾದ ಬಾಲಕೃಷ್ಣ ಭಟ್ ರವರು ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿದರು.ತೋಮಸ್ ರವರು ವಂದಿಸಿದರು.












