ವಾರದಲ್ಲಿ ಐದು ದಿನಗಳ ಕೆಲಸ ಸಹಿತ ವಿವಿಧ ಬೇಡಿಕೆಗಳ ಬಗ್ಗೆ ಪರಿಶೀಲಿಸುವುದಾಗಿ ಭಾರತೀಯ ಬ್ಯಾಂಕ್‌ಗಳ ಒಕ್ಕೂಟವು ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ಯೂನಿಯನ್‌ಗಳು ಸೋಮವಾರದಿಂದ ನಡೆಸಲು ನಿರ್ಧರಿಸಿದ್ದ ಮೂರು ದಿನಗಳ ದೇಶವ್ಯಾಪಿ ಮುಷ್ಕರವನ್ನು ಮುಂದೂಡಿವೆ.
ಸೋಮವಾರದಿಂದ ಮೂರು ದಿನ ಮುಷ್ಕರ ನಡೆಸಲು ಯುನಿಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಕರೆ ನೀಡಿತ್ತು. ರವಿವಾರ ಸಂಜೆ ನಡೆದ ಸಭೆಯ ಬಳಿಕ ಮುಷ್ಕರ ಮುಂದೂಡಿರುವುದನ್ನು ರಾತ್ರಿಯ ವೇಳೆಗೆ ಘೋಷಿಸಲಾಯಿತು. ಸೋಮವಾರ ಬ್ಯಾಂಕ್‌ಗಳು ಯಥಾರೀತಿ ಕಾರ್ಯನಿರ್ವಹಿಸಲಿವೆ.
ಬೇಡಿಕೆ ಈಡೇರಿಸುವ ಕುರಿತಂತೆ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗುವುದು. ಈ ಸಮಿತಿಯು ಎಲ್ಲ ವಿಷಯಗಳ ಕುರಿತು ಪರಿಶೀಲಿಸಿ ಎಲ್ಲರಿಗೂ ಒಪ್ಪಿತವಾಗುವ ಪರಿಹಾರ ಕಂಡುಕೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ












