ಶಿಬಾಜೆ: ಇಲ್ಲಿಯ ಆಚಾರಿ ಕೊಟ್ಯ ಮನೆ ನಿವಾಸಿ ಶಿವಪ್ಪ ಪೂಜಾರಿ (65) ಅವರು ಮನೆಯ ಕೊಟ್ಟಿಗೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೆ. 28ರಂದು ನಡೆದಿದೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನೆ ಕುರಿತು ಮಾಹಿತಿ ತಿಳಿದು ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಮೃತರು ಪತ್ನಿ ಬೇಬಿ ಹಾಗೂ ಮಕ್ಕಳಾದ ಪ್ರಭಾಕರ ಮತ್ತು ಯಶೋಧ ಅವರನ್ನು ಅಗಲಿದ್ದಾರೆ.












