30.6 C
ಪುತ್ತೂರು, ಬೆಳ್ತಂಗಡಿ
September 28, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಇಳಂತಿಲದಲ್ಲಿ ವಿಜೃಂಭಣೆಯ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಉತ್ಸವ: ‘ದೋಸೆ ಹಬ್ಬ’ದ ಸಂಭ್ರಮ

​ಬೆಳ್ತಂಗಡಿ: ತಾಲೂಕಿನ ಇಳಂತಿಲ ಗ್ರಾಮದ ವಾಣಿಶ್ರೀ ಭಜನಾ ಮಂದಿರದಲ್ಲಿ ಸೆ.27 ರಂದು ‘ಟೀಮ್ ಬಿರುವ’ ಹಾಗೂ ಸಮಸ್ತ ಬಿಲ್ಲವರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಉತ್ಸವವು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಸಂಪನ್ನಗೊಂಡಿತು.

​ಕಾರ್ಯಕ್ರಮಕ್ಕೆ ಗ್ರಾಮದ ಹಿರಿಯರು ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು. ಸಮುದಾಯದ ಸಮಸ್ತ ಬಿಲ್ಲವ ಬಾಂಧವರು ಭಾರತ ಮಾತೆ ಹಾಗೂ ನಾರಾಯಣ ಗುರುಗಳಿಗೆ ಭಕ್ತಿಪೂರ್ವಕ ಅರ್ಚನೆ ಸಲ್ಲಿಸಿ, ಅವರ ತತ್ವಾದರ್ಶಗಳನ್ನು ಸ್ಮರಿಸಿದರು.

​ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸುವರ್ಣ ಪ್ರತಿಷ್ಠಾನ ಹಾಗೂ ಮಂಜ ವೈದ್ಯ ಸಂಸ್ಮರಣ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಪ್ರಮುಖರಾದ ಸಂಪತ್ ಬಿ. ಸುವರ್ಣ ಮಾತನಾಡಿ, “ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ-ಸಂದೇಶಗಳು ಸಮಗ್ರ ಸಮಾಜ, ಹಿಂದುಳಿದ ವರ್ಗಗಳು ಹಾಗೂ ದೀನ-ದಲಿತರ ಏಳಿಗೆಗೆ ದಾರಿದೀಪವಾಗಿವೆ. ಗುರುಗಳ ಆದರ್ಶಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವುದರ ಜತೆಗೆ, ಸಮಸ್ತ ಸಮಾಜವನ್ನು ಪ್ರೀತಿ-ವಿಶ್ವಾಸದಿಂದ ಒಗ್ಗೂಡಿಸಿಕೊಂಡು ಮುನ್ನಡೆಯುವ ದೂರದೃಷ್ಟಿಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು” ಎಂದು ಕರೆ ನೀಡಿದರು.

​ಇದೇ ಸಂದರ್ಭದಲ್ಲಿ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ‘ಉತ್ತಮ ಶಿಕ್ಷಕ’ ಪ್ರಶಸ್ತಿಗೆ ಭಾಜನರಾದ ಕೃಷ್ಣಪ್ಪ ಪೂಜಾರಿ ಅವರನ್ನು ‘ಟೀಮ್ ಬಿರುವ’ ಹಾಗೂ ಸಮುದಾಯದ ಪರವಾಗಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
​ಕಾರ್ಯಕ್ರಮದ ಅಂಗವಾಗಿ ಸಮಸ್ತ ಬಿಲ್ಲವ ಬಾಂಧವರಿಗೆ ಆಯೋಜಿಸಲಾಗಿದ್ದ ‘ದೋಸೆ ಹಬ್ಬ’ವು ಎಲ್ಲರೂ ಒಂದೇ ಕುಟುಂಬದಂತೆ ಬೆರೆತು ಸಾಮರಸ್ಯ ಹಂಚಿಕೊಳ್ಳುವ ಆತ್ಮೀಯ ವಾತಾವರಣವನ್ನು ನಿರ್ಮಿಸಿತು.


​ಕಾರ್ಯಕ್ರಮದಲ್ಲಿ ಟೀಮ್ ಬಿರುವದ ಪ್ರಮುಖರಾದ ಅಶೋಕ್ ಇಳಂತಿಲ, ಉಮೇಶ್ ಅಣ್ಣಾಜೆ, ಮನೋಜ್ ಅನ್ನಾಜೆ, ಪರಮೇಶ್ವರ ಅಣ್ಣಾಜೆ ರಾಜೇಶ್ ಪಾಡಿಂಕಿ, ಅರುಣ್ ಪಾಡಿಂಕಿ, ವಸಂತಾಲ್ಯಾನ್ ಪಾಡಿಂಕಿ, , ರವಿಚಂದ್ರ ಕೋಟ್ರಾಸ್, ಗಣೇಶ್ ಕೋಟ್ರಾಸ್, ತುಷಾಂತ್ ವಾಣಿನಗರ, ಶಶಿ ಗಂಡಿಬಾಗಿಲು, ಶರತ್ ಅಲಂಪಾಡಿ, ಸೃಜನ್ ಅಗರ್ತ, ಗಣೇಶ್ ನೀನಿ, ಜಗದೀಶ್ ನೂಜ, ಗೀತಾ ಅಂಚನ್, ಸಂದೀಪ್,ಮೋಹನ್ ನೂಜ, ಕಿಟ್ಟಣ್ಣ ನೂಜ, ಪ್ರಭಾಕರ್,ವಸಂತ್ ಅಣ್ಣಾಜೆ, ನಿತಿನ್
ಸೇರಿದಂತೆ ಊರ-ಪರವೂರ ಬಾಂಧವರು ಉಪಸ್ಥಿತರಿದ್ದರು.

Related posts

ವೇಣೂರು: ಮಹಾಮಸ್ತಕಾಭಿಷೇಕ ಸಂಪನ್ನ

Suddi Udaya

ಪಡಂಗಡಿ:ಶ್ರೀ ಕ್ಷೇ.ಧ.ಗ್ರಾ. ಯೋಜನೆ ಬಿ.ಸಿ ಟ್ರಸ್ಟ್ ಗುರುವಾಯನಕರೆ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ತಾಲೂಕು ಮಟ್ಟದ ಪದಾಧಿಕಾರಿಗಳ ಸಮಾವೇಶ

Suddi Udaya

ಶಿರ್ಲಾಲು ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯ ಒಕ್ಕೂಟದ ಪದಗ್ರಹಣ

Suddi Udaya

ವಿ.ಹಿಂ.ಪ. ಭಜರಂಗದಳ ಮದ್ದಡ್ಕ ಘಟಕ ವತಿಯಿಂದ ಅಶಕ್ತ ಕುಟುಂಬಕ್ಕೆ ಧನ ಸಹಾಯ ವಿತರಣೆ

Suddi Udaya

ಕೊಯ್ಯೂರು: ಶ್ರೀ ಪಂಚದುರ್ಗಾಪರಮೇಶ್ವರಿ ಭಜನಾ ಮಂಡಳಿಯಿಂದ ಮಕ್ಕಳ ಕುಣಿತ ಭಜನಾ ತಂಡದ ಉದ್ಘಾಟನಾ ಕಾರ್ಯಕ್ರಮ

Suddi Udaya

ಕಡಿರುದ್ಯಾವರ: ಕುಚ್ಚೂರು ಬೈಲು ನಲ್ಲಿ ದ್ವಿತೀಯ ವರ್ಷದ ನಾಗಪ್ರತಿಷ್ಠೆ ವರ್ಷಾಚರಣೆ

Suddi Udaya
error: Content is protected !!