ಬೆಳ್ತಂಗಡಿ: 2025-26ನೇ ಶೈಕ್ಷಣಿಕ ವರ್ಷದಲ್ಲಿ VTU ಯಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಧರ್ಮಸ್ಥಳದ ಜಿ. ಅನನ್ಯ ಪ್ರಭು ರವರು 2ನೇ ರ‍್ಯಾಂಕ್ ಪಡೆದಿರುತ್ತಾರೆ.
ಇವರು ಮೂಡಬಿದ್ರೆ ಮೈಟ್ ವಿದ್ಯಾ ಸಂಸ್ಥೆಯಲ್ಲಿ ಏರೋ ನಾಟಿಕಲ್ ಇಂಜಿನಿಯರಿಂಗ್ ಪೂರೈಸಿದ್ದರು. ಉಜಿರೆ ಎಸ್ ಡಿ ಎಂ ಶಿಕ್ಷಣ ಸಂಸ್ಥೆಯ ಪ್ರಾಥಮಿಕ, ಪ್ರೌಢ ಶಿಕ್ಷಣ ಪೂರೈಸಿದ್ದರು. ಪ್ರಸುತ್ತ ಮಹೇಂದ್ರ ಏರೋ ಸ್ಪೇಸ್ ಸಂಸ್ಥೆಯಲ್ಲಿ ಉದ್ಯೋಗಕ್ಕೆ ನೇಮಕ ಗೊಂಡಿದ್ದಾರೆ.
ಧರ್ಮಸ್ಥಳದ ಉಮೇಶ ಪ್ರಭು ಮತ್ತು ದೀಪಿಕಾ ಪ್ರಭು ದಂಪತಿಯ ಪುತ್ರಿ .












