26 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕುವೆಟ್ಟು ಪಂಚಾಯತ್ ನಲ್ಲಿ ಮಳೆನೀರು ಕೊಯ್ಲು, ತ್ಯಾಜ್ಯ ನಿರ್ವಹಣೆ ಹಾಗೂ ಸೌರಶಕ್ತಿ ಬಗ್ಗೆ ಮಾಹಿತಿ ಕಾರ್ಯಕ್ರಮ

ಕುವೆಟ್ಟು : ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಬೆಂಗಳೂರು, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಇಲಾಖೆ ಬೆಳ್ತಂಗಡಿ ತಾಲೂಕು, ಕುವೆಟ್ಟು ಗ್ರಾಮ ಪಂಚಾಯತ್ ಹಾಗೂ ಪುಣ್ಯಶ್ರೀ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಕುವೆಟ್ಟು ಇವರ ಜಂಟಿ ಆಶ್ರಯದಲ್ಲಿ ತ್ಯಾಜ್ಯ ನಿರ್ವಹಣೆ, ಮಳೆನೀರು ಇಂಗಿಸುವಿಕೆ ಹಾಗೂ ಸೌರಶಕ್ತಿ ಯೋಜನೆಗಳ ಬಗ್ಗೆ ಕಾರ್ಯಗಾರ ಕುವೆಟ್ಟು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಕುವೆಟ್ಟು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇಮ್ತಿಯಾಜ್ ಕಾರ್ಯಕ್ರಮ ಉದ್ಘಾಟಿಸಿ ಮಾಹಿತಿ ಕಾರ್ಯಕ್ರಮಗಳು ಮಹಿಳೆಯರಿಗೆ ಉಪಯುಕ್ತವಾಗಿದೆ, ಇಲ್ಲಿ ಪಡೆಯುವ ಮಾಹಿತಿ ಪ್ರತಿ ಮಹಿಳೆಯರು ಅಳವಡಿಸಿಕೊಳ್ಳಬೇಕು, ಮಳೆನೀರು ಕೊಯ್ಲು ಪ್ರತಿ ಮನೆಯಲ್ಲಿ ಅಳವಡಿಸಿ ನೀರಿನ ಮಹತ್ವ ತಿಳಿಯಬೇಕು ಎಂದರು.ಭಾರತೀಯ ವಿಕಾಸ ಟ್ರಸ್ಟ್ ಇದರ ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀ ಜೀವನ್ ಕೊಲ್ಯ ಮಾತಾಡುತ್ತಾ ಗ್ರಾಮೀಣ ಪ್ರದೇಶದಲ್ಲಿ ತ್ಯಾಜ್ಯ ನಿರ್ವಹಣೆ ಹಾಗೂ ಸೌರಶಕ್ತಿ ಬಳಕೆ ಬಗ್ಗೆ ತಿಳಿದು ನಮ್ಮ ಮಕ್ಕಳಿಗೆ ತಿಳಿಸಬೇಕು, ನಾವು ಪಡೆದ ಮಾಹಿತಿಯನ್ನು ನಮ್ಮ ಮನೆಯಲ್ಲಿ ಮೊದಲು ಅಳವಡಿಸಿ ಗ್ರಾಮದ ಜನತೆ ಅಳವಡಿಸಲು ಪ್ರಯತ್ನ ಪಟ್ಟರೆ ನಮ್ಮ ಗ್ರಾಮ ಸ್ವಚ್ಛ ಗ್ರಾಮ ಆಗಬಹುದು ಎಂದು ತಿಳಿಸಿದರು.

ಇಂದಿನ ಕಾರ್ಯಕ್ರಮದಲ್ಲಿ ಸೆಲ್ಕೋ ಸಂಸ್ಥೆ ಸೀನಿಯರ್ ಮ್ಯಾನೇಜರ್ ರವೀನಾ ಬಂಗೇರ ಸೌರಶಕ್ತಿ ಬಗ್ಗೆ, ಜೀವನ್ ಕೊಲ್ಯ ಮಳೆಕೊಯ್ಲು ಬಗ್ಗೆ, ಗೌತಮ್ ತ್ಯಾಜ್ಯ ನಿರ್ವಹಣೆ ಬಗ್ಗೆ ಮತ್ತು ಸಾಮಾಜಿಕ ಭದ್ರತೆಯ ಬಗ್ಗೆ ಉಷಾ ಕಾಮತ್ ಮಾಹಿತಿ ನೀಡಿದರು.

NRLM ಬೆಳ್ತಂಗಡಿ ತಾಲೂಕಿನ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀಮತಿ ಪ್ರತಿಮಾ , NRLM ಕೃಷಿಯೇತರ ತಾಲೂಕು ವ್ಯವಸ್ಥಾಪಕರಾದ ನಿತೀಶ್, ಒಕ್ಕೂಟದ ಅಧ್ಯಕ್ಷರಾದ ಹರಿಣಾಕ್ಷಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುವೆಟ್ಟು ಪಂಚಾಯತ್ ಮುಖ್ಯ ಪುಸ್ತಕ ಬರಹಗಾರರಾದ ಅಮೃತ ನಿರೂಪಿಸಿ, LCRP ಉಷಾ ಸ್ವಾಗತಿಸಿ, LCRP ಜಯಶೀಲಾ ಧನ್ಯವಾದಗೈದರು. ಕುವೆಟ್ಟು ಪಂಚಾಯತ್ ವ್ಯಾಪ್ತಿಯ ಸ್ವ ಸಹಾಯ ಸಂಘದ ಸದಸ್ಯರು, ಬೆಳ್ತಂಗಡಿ ತಾಲೂಕಿನ MBK ಗಳು ಮತ್ತು ತ್ಯಾಜ್ಯ ನಿರ್ವಹಣೆಯ ಸಿಬ್ಬಂದಿಗಳು ಕಾರ್ಯಾಗಾರದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.

Related posts

ಶಿರ್ಲಾಲು :ಬೆಳ್ತಂಗಡಿ ಕೋಟಿ ಚೆನ್ನಯ ಕ್ರೀಡಾಕೂಟ 2025 ರ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಪ್ರಸನ್ನ ಕಾಲೇಜ್ ಕ್ಯಾಂಪಸ್‌ನಲ್ಲಿ ಹೋಟೆಲ್ ಸಮಡೈನ್ ಶುಭಾರಂಭ ; ಮಾಜಿ ಸಚಿವ ಗಂಗಾಧರ ಗೌಡರಿಂದ ಉದ್ಘಾಟನೆ

Suddi Udaya

ಗ್ಯಾಸ್ ಸಿಲಿಂಡ‌ರ್ ನೀಡಲು ನಿರಾಕರಣೆ ಮಾಡಿದ ವಿತರಕನ ಮೇಲೆ ಹಲ್ಲೆ: ಪ್ರಕರಣ ದಾಖಲು

Suddi Udaya

ಅರಸಿನಮಕ್ಕಿ: ಅರಿಕೆಗುಡ್ಡೆ ವನದುರ್ಗಾ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ವ್ರತಾಚರಣೆ

Suddi Udaya

ಹತ್ಯಡ್ಕ ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದಲ್ಲಿ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ: ಧಾರ್ಮಿಕ ಸಭೆ

Suddi Udaya

ಮಹಾಕುಂಭಮೇಳದಲ್ಲಿ ಪವಿತ್ರ ಸ್ನಾನಗೈದ ಯುವ ಕಾಂಗ್ರೆಸ್ ರಾಜ್ಯ ಸಮಿತಿಯ ಕಾರ್ಯದರ್ಶಿ ಪವನ್ ಸಾಲ್ಯಾನ್ ಕೊಲ್ಲಾಜೆ

Suddi Udaya
error: Content is protected !!