28 C
ಪುತ್ತೂರು, ಬೆಳ್ತಂಗಡಿ
September 29, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಇಂದಬೆಟ್ಟು ಸಮೃದ್ಧಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ವಾರ್ಷಿಕ ಮಹಾಸಭೆ

ಇಂದಬೆಟ್ಟು : ಸಮೃದ್ಧಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಇಂದಬೆಟ್ಟು ಇದರ ವಾರ್ಷಿಕ ಮಹಾಸಭೆಯನ್ನು ಕಾಶ್ಮೀ ಡಿ. ಶ್ರೀದೇವಿಯವರ ಅಧ್ಯಕ್ಷತೆಯಲ್ಲಿ ಇಂದಬೆಟ್ಟು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಸಲಾಯಿತು.

ವೇದಿಕೆಯಲ್ಲಿದ್ದ ಗಣ್ಯರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ವಲಯ ಮೇಲ್ವಿಚಾರಕ ಜಯಾನಂದ ಪ್ರಾಸ್ತಾವಿಕವಾಗಿ ಸಂಜೀವಿನಿ ಯೋಜನೆಯಿಂದ ಮಹಿಳೆಯರು ಸ್ವಾವಲಂಬನೆ ಜೀವನದ ಬಗ್ಗೆ ಒಕ್ಕೂಟ ರಚನೆಯ ಉದ್ದೇಶದ ಬಗ್ಗೆ ಸಂಜೀವಿನಿ ಯೋಜನೆಯ ದ್ಯೇಯೋದ್ದೇಶದ ಬಗ್ಗೆ ಮಾತುಗಳನ್ನಾಡಿದರು.

2025- 26ನೇ ಸಾಲಿನ ಒಕ್ಕೂಟದ ವಾರ್ಷಿಕ ವರದಿಯನ್ನು ಮತ್ತು ಜಮೆ ಖರ್ಚನ್ನು ಶ್ರುತಿಯವರು ಸಭೆಯಲ್ಲಿ ಮಂಡಿಸಿದರು. ಪಂಚಾಯತ್ ಕಾರ್ಯದರ್ಶಿ ಗಿರಿಯಪ್ಪ ಒಕ್ಕೂಟ ವನ್ನು ಉದ್ದೇಶಿಸಿ ಮಾತನಾಡಿ ಶುಭ ಹಾರೈಸಿದರು.
ನೂತನ ಪದಾಧಿಕಾರಿಗಳಿಗೆ ಹೂಗುಚ್ಚ ನೀಡಿ ಒಕ್ಕೂಟಕ್ಕೆ ಸ್ವಾಗತಿಸಲಾಯಿತು. ಒಕ್ಕೂಟದಲ್ಲಿ ಉತ್ತಮ ಸ್ವಉದ್ಯೋಗ ಮಾಡಿ ಮಾದರಿ ಮಹಿಳೆ ಗುರುತಿಸಿದ ಎಲ್ಸಿ, ಸ್ವಚ್ಛತಾ ಸಿಬ್ಬಂದಿ ಜಯಶ್ರೀ, ಸಮಗ್ರ ಕೃಷಿಯಲ್ಲಿ ಯಶಸ್ವಿ ಕಂಡ ಸಂಘದ ಸದಸ್ಯೆ ಸುಜಾತರವರನ್ನು ಗೌರವಿಸಿ ಸನ್ಮಾನಿಸಲಾಯಿತು. ನಂತರ ಸಭೆಯಲ್ಲಿ ನಿರ್ಗಮಿತ ಪದಾಧಿಕಾರಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಒಕ್ಕೂಟದ ಅಧ್ಯಕ್ಷರು ಸಿಬ್ಬಂದಿಗಳಿಗೆ ಮತ್ತು ವಲಯ ಮೇಲ್ವಿಚಾರಕರಾದ ಜಯಾನಂದ‌ ಅವರಿಗೂ ಸ್ಮರಣಿಕೆ ನೀಡಿ ಗೌರವಿಸಿದರು.
ಒಕ್ಕೂಟದ ಸದಸ್ಯೆ ಆಲ್ಫೋನ್ಸಾ ಸ್ವಾಗತಿಸಿದರು. ಕಾರ್ಯಕ್ರಮವನ್ನು ಸೌಮ್ಯಶ್ರೀ ನಿರೂಪಿಸಿ, ಕೃಷಿ ಸಖಿ ಕವಿತಾ ಧನ್ಯವಾದಗಳು ಸಮರ್ಪಿಸಿದರು.

Related posts

ಧರ್ಮಸ್ಥಳ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಮಂತ್ರಿಮಂಡಲದ ಉದ್ಘಾಟನೆ

Suddi Udaya

ಹೆಣ್ಣು ಮಕ್ಕಳ ಮತ್ತು ಮಹಿಳೆಯರ ಮೇಲೆ ಆಗುತ್ತಿರುವ ಕೊಲೆ, ಅತ್ಯಾಚಾರ ಮತ್ತು ದೌರ್ಜನ್ಯ ಖಂಡಿಸಿ, ಕಠಿಣ ಕ್ರಮಕೈಗೊಳ್ಳುವಂತೆ ಬೆಳ್ತಂಗಡಿ ಸ್ನೇಹ ಕಿರಣ್ ಮಹಿಳಾ ಜಿಲ್ಲಾ ಒಕ್ಕೂಟದಿಂದ ಜಿಲ್ಲಾಧಿಕಾರಿಯವರಿಗೆ, ಪೊಲೀಸ್ ಕಮಿಷನರಿಗೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿಯವರಿಗೆ ಮನವಿ

Suddi Udaya

ಅಪ್ಸರಾ ಫ್ಯಾಶನ್ ಸೆಂಟರ್ ನಲ್ಲಿ ಮಾನ್ಸೂನ್ ಸೇಲ್ : ಪ್ರತೀ ಖರೀದಿಯ ಮೇಲೆ ಶೇ.25 ರಷ್ಟು ಡಿಸ್ಕೌಂಟ್

Suddi Udaya

ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯಿಂದ ಜ್ಞಾನದೀಪ ಶಿಕ್ಷಕರ ಮಂಜೂರಾತಿ ಪತ್ರ ವಿತರಣೆ

Suddi Udaya

ಮಾ.9: ಬಜಿರೆಯಲ್ಲಿ 60 ಕೆ.ಜಿ ವಿಭಾಗದ ಪುರುಷರ ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ: ಯಂಗ್ ಬಾಯ್ಸ್ ಟ್ರೋಫಿ

Suddi Udaya

ಮುಂಡಾಜೆಯ ದುಂಬೆಟ್ಟು ಪ್ರದೇಶದಲ್ಲಿ ಚಿರತೆ ಹಾವಳಿ

Suddi Udaya
error: Content is protected !!