November 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶುಭಾರಂಭ

ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್‌ನ ನೂತನ ಉತ್ಪನ್ನಗಳ ಘಟಕಕ್ಕೆ ಚಾಲನೆ

ಉಜಿರೆ: ಕಳೆದ ನಾಲ್ಕು ದಶಕಗಳಿಂದ ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನಗಳು ಹಾಗೂ ಉತ್ತಮ ಸೇವೆಯನ್ನು ನೀಡುತ್ತಾ ಬಂದಿರುವ ಕೆ. ಮೋಹನ್ ಕುಮಾರ್ ಮಾಲಕತ್ವದ ಉಜಿರೆಯ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಸಂಸ್ಥೆಯ ನೂತನ ಉತ್ಪನ್ನಗಳ ಘಟಕಕ್ಕೆ ಚಾಲನೆ ಹಾಗೂ ಶ್ರೀ ಲಕ್ಷ್ಮೀ ಪೂಜಾ ಕಾರ್ಯಕ್ರಮ ನ. 7ರಂದು ನಡೆಯಿತು.

ಶಾಸಕ ಹರೀಶ್ ಪೂಂಜ ಅವರು ನೂತನ ಉತ್ಪನ್ನಗಳ ಘಟಕಕ್ಕೆ ಚಾಲನೆ ನೀಡಿ ಮಾತನಾಡಿ, ಉದ್ಯಮ ಕ್ಷೇತ್ರದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಲಕ್ಷ್ಮೀ ಇಂಡಸ್ಟ್ರೀಸ್‌ನ ಮಾಲಕ ಮೋಹನ್ ಕುಮಾರ್ ಅವರು ಮುಂದಿನ ದಿನಗಳಲ್ಲಿ ಸಾವಿರಾರು ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಮಟ್ಟಕ್ಕೆ ಸಂಸ್ಥೆಯನ್ನು ಬೆಳೆಸಬೇಕು ಎಂದು ಹಾರೈಸಿದರು.

ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ ಅವರು ಶುಭ ಹಾರೈಸಿದರು.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಡಿಜಿಎಂ ತೇಜಸ್ವಿನಿ ವಿ.ಸಿ. ಮಾತನಾಡಿ, ಸರಳ ಹಾಗೂ ಸಜ್ಜನಿಕೆಯ ವ್ಯಕ್ತಿತ್ವದ ಮೋಹನ್ ಕುಮಾರ್ ಅವರ ಉದ್ಯಮದ ಬೆಳವಣಿಗೆಗೆ ಬ್ಯಾಂಕಿನಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಉಜಿರೆ ವರ್ತಕರ ಸಂಘದ ಅಧ್ಯಕ್ಷ ಪ್ರಸಾದ್ ಬಿ.ಎಸ್. ಅವರು ಶುಭ ಹಾರೈಸಿದರು.

ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ ಗಣ್ಯರನ್ನು ಸಂಸ್ಥೆಯ ಮಾಲಕ ಕೆ. ಮೋಹನ್ ಕುಮಾರ್, ಶ್ರೀಮತಿ ರೇಶ್ಮಾ ಮೋಹನ್ ಕುಮಾರ್, ಶ್ರೀಮತಿ ಲೀಲಾವತಿ, ರಾಜು ಮೇಸ್ತ್ರಿ, ಮೌಲ್ಯಲಕ್ಷ್ಮೀ ಹಾಗೂ ಮಾನ್ವಿಲಕ್ಷ್ಮೀ ಅವರು ಸ್ವಾಗತಿಸಿ ಗೌರವಿಸಿದರು.

Related posts

ಕಲ್ಲೇರಿಯಲ್ಲಿ ವಕೀಲರ ಕಚೇರಿ ಶುಭಾರಂಭ

Suddi Udaya

ತಾಲೂಕು ಸಹಕಾರ ಸಂಘಗಳ ಹಿತರಕ್ಷಣಾ ವೇದಿಕೆ: ನೂತನ ಅಧ್ಯಕ್ಷರಾಗಿ ಭಗೀರಥ ಜಿ. ಆಯ್ಕೆ

Suddi Udaya

ಭೂಸೇನೆಯಲ್ಲಿ 20ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಬಾರ್ಯ ಪಿಲಿಗೂಡು ನಿವಾಸಿ ಹವಾಲ್ದಾರ್ ಜಯಾನಂದ ಪೂಜಾರಿ ಮಾ.31 ರಂದು ಸೇವಾ ನಿವೃತ್ತಿ

Suddi Udaya

ವೇಣೂರು ಕಂಬಳದಡ್ಡ ನಿವಾಸಿ ಗಿರಿಜಾ ನಿಧನ

Suddi Udaya

ಕಳೆಂಜ: ಅಕ್ರಮ ಗೋ ಸಾಗಾಟ: ಇಬ್ಬರ ಬಂಧನ

Suddi Udaya

ಅ.11: ಬೆಳ್ತಂಗಡಿಯಲ್ಲಿ ಇಂದಿರಾ ಕ್ಯಾಂಟೀನ್‌ ಉದ್ಘಾಟನೆ: ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಂದ ಚಾಲನೆ

Suddi Udaya
error: Content is protected !!