28 C
ಪುತ್ತೂರು, ಬೆಳ್ತಂಗಡಿ
September 29, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಬೆಳ್ತಂಗಡಿ ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರದಲ್ಲಿ ಅನಂತ ಚತುರ್ದಶಿ ವ್ರತಾಚರಣೆಯ ಮಹಾಪರ್ವ

ಬೆಳ್ತಂಗಡಿಯ ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರದಲ್ಲಿ ಅನಂತನೋಪಿ ವೃತಾಚರಣೆಯ ಮಹಾಪರ್ವವು ಸೆ. 24, 25 ಮತ್ತು 26ರಂದು ಜೈನಾಗಮ ಪದ್ಧತಿಯಂತೆ ವೈಶಿಷ್ಟ್ಯ ಪೂರ್ಣವಾಗಿ ನಡೆಯಿತು.

ಜೈನ ಧರ್ಮದಲ್ಲಿ ಅನಂತ ನೋಂಪಿ (ಅನಂತ ಚತುರ್ದಶಿ ವ್ರತ) ಅತ್ಯಂತ ಪವಿತ್ರ ಮತ್ತು ಆಳವಾದ ಆಧ್ಯಾತ್ಮಿಕ ಮಹತ್ವವನ್ನು ಹೊಂದಿರುವ ಆಚರಣೆಯಾಗಿದೆ.
ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ದಶಿಯಂದು ಆಚರಿಸಲಾಗುವ ಈ ವ್ರತವು ಭೌತಿಕ ಸುಖಗಳಿಗಿಂತ ಆತ್ಮದ ಶುದ್ಧೀಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತದೆ. ಜೈನ ಪರಂಪರೆಯಲ್ಲಿ ಈ ವ್ರತಾಚರಣೆಗೆ ಬಹಳ ಮಹತ್ವ ಇದೆ. ಈ ನೋಂಪಿಯ ಸಂದರ್ಭದಲ್ಲಿ ಅನಂತನಾಥ ಸ್ವಾಮಿಯ ಸ್ಮರಣೆ ಅನಂತ ಗುಣಗಳ ಪ್ರತೀಕವಾಗಿದೆ. ಅನಂತನಾಥ ಸ್ವಾಮಿಯು ತಮ್ಮ ಕರಗಿದ ಕರ್ಮಗಳಿಂದ ‘ಅನಂತ ಜ್ಞಾನ’, ‘ಅನಂತ ದರ್ಶನ’, ‘ಅನಂತ ಸುಖ’ ಮತ್ತು ‘ಅನಂತ ವೀರ್ಯ’ ಎಂಬ ಅನಂತ ಚತುಷ್ಟಯರನ್ನು ಹೊಂದಿದವರು. ಅವರ ಆರಾಧನೆ ನಮಗೆ ಆತ್ಮ ಕಲ್ಯಾಣದ ದಾರಿಯನ್ನು ತೋರಿಸುತ್ತದೆ.

ಶಾಂತಿ ಮತ್ತು ವೈರಾಗ್ಯ ಮೂರ್ತಿಯಾದ ಸ್ವಾಮಿಯ ಜನ್ಮ, ದೀಕ್ಷೆ ಮತ್ತು ಕೇವಲಜ್ಞಾನ ಕಲ್ಯಾಣಕಗಳನ್ನು ಸ್ಮರಿಸುತ್ತಾ, ಸಂಸಾರದ ಮೋಹವನ್ನು ತ್ಯಜಿಸಿ ವೈರಾಗ್ಯದ ಕಡೆಗೆ ಸಾಗಲು ಈ ದಿನ ಪ್ರೇರಣೆ ನೀಡುತ್ತದೆ. ಈ ಪರ್ವವು
ಕರ್ಮಗಳ ವಿಮೋಚನೆ ಮತ್ತು ಆತ್ಮಶುದ್ಧಿ, ಆತ್ಮನ ಉದ್ಧಾರದ ಮೂಲ ಅಂಶವಾಗಿದೆ. ‘ಅನಂತ’ ಎಂದರೆ ಕೊನೆಯಿಲ್ಲದ್ದು. ಈ ವ್ರತವನ್ನು ಆಚರಿಸುವುದರಿಂದ ಆತ್ಮಕ್ಕೆ ಅಂಟಿಕೊಂಡಿರುವ ಅನಾದಿ ಕಾಲದ ಕರ್ಮ ಬಂಧನಗಳು ನಾಶವಾಗಿ, ಆತ್ಮವು ಪರಮ ಶಾಂತಿಯನ್ನು ಪಡೆಯುತ್ತದೆ ಎಂಬ ನಂಬಿಕೆ ಇದೆ. ಈ ಧಾರ್ಮಿಕ ಆಚರಣೆಯ ಸಂದರ್ಭದಲ್ಲಿ ಉಪವಾಸ ಮತ್ತು ತಪಸ್ಸು ಬಹಳ ಶ್ರೇಷ್ಠತೆಯನ್ನು ಪಡೆದುಕೊಂಡಿದೆ.

ಜೈನ ಧರ್ಮದಲ್ಲಿ ನೋಂಪಿ ಎಂದರೆ ಕೇವಲ ಪೂಜೆಯಲ್ಲ, ಅದು ಆತ್ಮ ನಿಗ್ರಹದ ದಾರಿ. ಈ ದಿನ ಪೂಜಾ ನಿರತ ಶ್ರಾವಕರು ಉಪವಾಸ, ಏಕಾಸನ (ಒಂದು ಹೊತ್ತು ಊಟ) ಅಥವಾ ಕಠಿಣ ವ್ರತಗಳನ್ನು ಕೈಗೊಂಡು ಕಾಯ-ವಾಚಾ-ಮನಸ್ಸಿನಿಂದ ಶುದ್ಧರಾಗುತ್ತಾರೆ. ಈ ವ್ರತದ ಅಂಗವಾಗಿ 14 ಗಂಟುಗಳಿರುವ ಪವಿತ್ರ ಅನಂತ ದಾರವನ್ನು (ರಕ್ಷಾಸೂತ್ರ) ಪೂಜಿಸಿ, ಪುರುಷರು ಬಲಗೈಗೆ ಮತ್ತು ಮಹಿಳೆಯರು ಕೊರಳಿಗೆ ಧರಿಸುತ್ತಾರೆ.
ಈ 14 ಗಂಟುಗಳು ಜೈನ ವಿಶ್ವವಿಜ್ಞಾನದ ಪ್ರಕಾರ 14 ರಾಜುಲೋಕಗಳನ್ನು (ಬ್ರಹ್ಮಾಂಡದ ವಿಸ್ತಾರ) ಅಥವಾ ತೀರ್ಥಂಕರರ ಗುಣಗಳನ್ನು ಮತ್ತು ಜೈನ ಧರ್ಮದ ನಿಯಮಗಳನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುವುದನ್ನು ಸೂಚಿಸುತ್ತವೆ. ಇದು ನಕಾರಾತ್ಮಕ ಶಕ್ತಿಗಳಿಂದ ರಕ್ಷಣೆ ನೀಡುತ್ತದೆ ಎಂಬ ವಿಶ್ವಾಸವಿದೆ.

ಸುಖ, ಶಾಂತಿ ಮತ್ತು ಸಮೃದ್ಧಿ ಲೌಕಿಕ ಮತ್ತು ಪಾರಮಾರ್ಥಿಕ ಲಾಭವೇ ಇದರ ಮೂಲ ಉದ್ದೇಶವಾಗಿದೆ. ಈ ನೋಂಪಿಯನ್ನು ಭಕ್ತಿಯಿಂದ ಆಚರಿಸುವುದರಿಂದ ಸಂಸಾರದಲ್ಲಿ ಎದುರಾಗುವ ಕಷ್ಟಗಳು, ರೋಗ-ರುಜಿನಗಳು ನಿವಾರಣೆಯಾಗಿ ಸುಖ, ಶಾಂತಿ, ಐಶ್ವರ್ಯ ಮತ್ತು ದೀರ್ಘಾಯುಷ್ಯ ದೊರೆಯುತ್ತದೆ. ಕಷ್ಟದಲ್ಲಿದ್ದ ಜೀವಿಗಳು ಈ ವ್ರತದ ಪ್ರಭಾವದಿಂದ ಉದ್ಧಾರವಾಗಿರುವ ಕಥೆಗಳು ಜೈನ ಪುರಾಣಗಳಲ್ಲಿ ದಾಖಲೀಕರಣಗೊಂಡಿದೆ. ಧ್ಯಾನ ಮತ್ತು ಸ್ವಾಧ್ಯಾಯದ ಮೂಲಕ ಜೈನ ಶ್ರಾವಕರು ಈ ದಿನ ಜಿನಾಲಯಗಳಿಗೆ (ಬಸದಿ) ಭೇಟಿ ನೀಡಿ ಅನಂತನಾಥ ಸ್ವಾಮಿಗೆ ವಿಶೇಷ ಅಭಿಷೇಕ, ಪೂಜೆ, ಮತ್ತು ಅರ್ಘ್ಯವನ್ನು ಸಮರ್ಪಿಸುತ್ತಾರೆ. ಸಂಜೆ ವೇಳೆ ಜಿನ ಭಜನೆ, ಧರ್ಮಗ್ರಂಥಗಳ ಓದು (ಸ್ವಾಧ್ಯಾಯ) ಮತ್ತು ಧ್ಯಾನದಲ್ಲಿ ತೊಡಗುತ್ತಾರೆ.
ಆದ್ದರಿಂದ ಈ ದಿನ ಅವರ ತಪಸ್ಸು ಮತ್ತು ಆಧ್ಯಾತ್ಮಿಕ ಸಾಧನೆಯನ್ನು ಸ್ಮರಿಸಿ, ಜಿನಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕ ಮತ್ತು ಅರ್ಚನೆಗಳನ್ನು ಮಾಡಲಾಗುತ್ತದೆ. ಅದೇ ರೀತಿ ದಶಲಕ್ಷಣ ಪರ್ವದ ಮುಕ್ತಾಯ ದಿಗಂಬರ ಜೈನ ಸಮುದಾಯದವರು ಆಚರಿಸುವ ಹತ್ತು ದಿನಗಳ ಪವಿತ್ರ ದಶಲಕ್ಷಣ ಪರ್ವ (ಪರ್ಯೂಷಣ ಪರ್ವ) ಅನಂತ ಚತುರ್ದಶಿಯ ದಿನದಂದೇ ಸಂಪೂರ್ಣಗೊಳ್ಳುತ್ತದೆ.

ಹತ್ತು ದಿನಗಳ ಕಾಲ ಕ್ಷಮೆ, ಮಾರ್ದವ, ಆರ್ಜವ ಮುಂತಾದ ಉತ್ತಮ ಧರ್ಮಗಳನ್ನು ಪಾಲಿಸಿದ ಶ್ರಾವಕರು ಈ ದಿನದಂದು ತೀವ್ರವಾದ ಉಪವಾಸ ಮತ್ತು ಜಪ-ತಪಗಳಲ್ಲಿ ತೊಡಗಿಕೊಳ್ಳುತ್ತಾರೆ ಮರುದಿನ ‘ಕ್ಷಮಾವಾಣಿ’ ಪರ್ವವನ್ನು ಆಚರಿಸಿ, ಜಗತ್ತಿನ ಎಲ್ಲಾ ಜೀವಿಗಳಲ್ಲಿ ಕ್ಷಮೆಯನ್ನು ಯಾಚಿಸಲಾಗುತ್ತದೆ. ಅಂತೆಯೇ ‘ಅನಂತ ಚತುಷ್ಟಯ’ ಸಾಧನೆಯ ಸಂಕೇತ ಜೈನ ತತ್ವಶಾಸ್ತ್ರದ ಪ್ರಕಾರ, ಆತ್ಮವು ತನ್ನ ಕರ್ಮಗಳನ್ನು ನಾಶಪಡಿಸಿಕೊಂಡಾಗ ಅದಕ್ಕೆ ಅನಂತ ಚತುಷ್ಟಯ ಅಂದರೆ ನಾಲ್ಕು ಅನಂತ ಗುಣಗಳು ಪ್ರಾಪ್ತಿಯಾಗುತ್ತವೆ.


ಅನಂತ ಜ್ಞಾನ ,ಅನಂತ ದರ್ಶನ ,ಅನಂತ ವೀರ್ಯ, ಅನಂತ ಸುಖ. ಈ ದಿನ ಆಚರಿಸುವ ವ್ರತ ಮತ್ತು ಉಪವಾಸಗಳು ಭೌತಿಕ ಆಸೆಗಳನ್ನು ತ್ಯಜಿಸಿ, ಆತ್ಮದ ಈ ಅನಂತ ಸ್ವರೂಪವನ್ನು ಅರಿತುಕೊಳ್ಳಲು ಪ್ರೇರೇಪಿಸುತ್ತವೆ. .ಒಟ್ಟಾರೆಯಾಗಿ, ಜೈನರಲ್ಲಿ ಅನಂತ ನೋಂಪಿ ಎಂದರೆ ಕೇವಲ ಒಂದು ಹಬ್ಬವಲ್ಲ; ಅದು ಕರ್ಮಗಳ ಕ್ಷಯ, ಆತ್ಮಶುದ್ಧಿ ಮತ್ತು ಜಿತೇಂದ್ರಿಯತ್ವವನ್ನು ಸಾಧಿಸುವ ಪರಮ ಪವಿತ್ರ ದಿನವಾಗಿದೆ ಎಂದು ಸಮಯೋಚಿತವಾಗಿ ಮಂತ್ರ ಪಠಣದ ಬಗ್ಗೆ ವಿವರವಾದ ಮಾಹಿತಿಯನ್ನು ಬಸದಿಯ ಪ್ರಧಾನ ಅರ್ಚಕರಾದ ಜಯರಾಜ್ ಇಂದ್ರರವರು ತಿಳಿಹೇಳಿದರು.


ಈ ಅನಂತ ನೋಂಪಿಯಲ್ಲಿ ಉದಯಕುಮಾರ್ ಬಪ್ಪಕೋಡಿ, ಕಣಿಯೂರು, ಸುಪ್ರೀತಾ ಶ್ರೀಕೀರ್ತಿ ಬೈಲಂಗಡಿ, ಸುಜಾತಾ ಧನಕೀರ್ತಿ ಆರಿಗ, ಮೂಡಂಗಲ್ಲು ,ಧರ್ಮಸ್ಥಳ, ಪದ್ಮಲತಾ ಸುರೇಂದ್ರ ಕುಮಾರ್ ಜೈನ್, ಸಂಪೂಜ್ಯ ,ಧರ್ಮಸ್ಥಳ. ಶಕುಂತಲಾ ಜಯಕೀರ್ತಿ ಜೈನ್, ಧರ್ಮಸ್ಥಳ. ವಂದನಾ ಧರಣೇಂದ್ರ ಕುಮಾರ್ ಉಜಿರೆ, ಪ್ರೇಮ ಗುಣಪಾಲ ಭಂಗ ಉಜಿರೆ, ಶ್ರೇಷ್ಠ ಪಡಿವಾಳ್ ಬೆಳ್ತಂಗಡಿ, ಅಭಿಜ್ಞಾ ರಾಜೇಂದ್ರ ಜೈನ್ ಧರ್ಮಸ್ಥಳ, ಸುಶೀಲಮ್ಮ ಗುಣಪಾಲ ಜೈನ್ ಉಜಿರೆ, ಮಮತಾ ಸುರೇಶ್ ಜೈನ್ ಗುರುವಾಯನಕೆರೆ, ನಿರೀಕ್ಷೆ ಮಹಾವೀರ್ ಸುಮನಿಧಿ, ಗುರುವಾಯನಕೆರೆ, ಶಾರದಾ ಅನಂತರಾಜ್ ಜೈನ್ ,ದೇವಚಂದ್ರ , ಜೈನ್ ಪೇಟೆ ಬೆಳ್ತಂಗಡಿ, ಶೃತಿ ಪ್ರಭಾಚಂದ್ರ ಜೈನ್, ಪಾದಮನೆ ಇಂದಬೆಟ್ಟು, ವತ್ಸಲಾ ಜ್ಯೋತಿರಾಜ್ ಧರ್ಮಸ್ಥಳ, ಸ್ವಾತಿ ಸುದರ್ಶನ್ ಜೈನ್ ಕಕ್ಕಿಂಜೆ, ಸುಮಂಗಲ ವಿಜಯಚಂದ್ರ, ಓಂಶ್ರೀ , ನಿಡಗಲ್, ಚೈತ್ರ ಭರತ್ ಕುಮಾರ್ ಉಜಿರೆರವರು ಪೂಜೆಯಲ್ಲಿ ಪಾಲ್ಗೊಂಡಿದ್ದರು.


ಈ ವಿಧಿ ವಿಧಾನದಲ್ಲಿ ಧರಣೇಂದ್ರ ಇಂದ್ರ ಪೆರ್ಮಾಣ, ಮಹಾವೀರ ಇಂದ್ರ ವೇಣೂರು, ನವೀನ ಇಂದ್ರ ಬೆಳ್ತಂಗಡಿ ಸಹಕರಿಸಿದರು.
ಧಾರ್ಮಿಕ ವಿಧಿ ವಿಧಾನಗಳಿಗೆ ಬಸದಿಯ ಆನುವಂಶಿಕ ಆಡಳಿತ ಮೊಕ್ತೇಸರರಾದ ಕೆ. ಜಯವರ್ಮರಾಜ ಬಳ್ಳಾಲ್ ರವರು ಮಾರ್ಗದರ್ಶನ ನೀಡಿದರು.

Related posts

ಹುಣ್ಸೆಕಟ್ಟೆ ಶ್ರೀ ರಾಮ ಭಜನಾ ಮಂಡಳಿ ವತಿಯಿಂದ ವಿಜಯರತ್ನ ಪ್ರಶಸ್ತಿ ಪುರಸ್ಕೃತ ಸುಮಂತ್ ಕುಮಾರ್ ಜೈನ್ ರವರಿಗೆ ಅಭಿನಂದನೆ

Suddi Udaya

ಗುರುವಾಯನಕೆರೆ ಕೆರೆ ಬಳಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು ಪರಾರಿಯಾದ ಲಾರಿ: ತಪ್ಪಿದ ಅನಾಹುತ

Suddi Udaya

ಅರಿಕೆಗುಡ್ಡೆ ಶ್ರೀ ವನದುರ್ಗ ಕ್ಷೇತ್ರಕ್ಕೆ ಯುವ ವಾಗ್ಮಿ ಹಾರಿಕಾ ಮಂಜುನಾಥ್ ಭೇಟಿ

Suddi Udaya

ಪತ್ರಕರ್ತ ನಿಶಾಂತ್ ಬಿಲ್ಲಂಪದವು ಮೇಲಿನ ಹಲ್ಲೆ ಪ್ರಕರಣ: ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಖಂಡನೆ: ಆರೋಪಿಯ ವಿರುದ್ಧ ಸೂಕ್ತ ತನಿಖೆಗೆ ರಾಜ್ಯಪಾಲರಿಗೆ ಹಾಗೂ ಪೊಲೀಸ್ ಇಲಾಖೆಗೆ ಮನವಿ

Suddi Udaya

ಬೆಳ್ತಂಗಡಿ ತಾಲೂಕು ಸರಕಾರಿ ನಿವೃತ್ತ ನೌಕರರು ಮತ್ತು ಹಿರಿಯ ನಾಗರಿಕ ಸೇವಾ ಸಂಸ್ಥೆಯ ನೂತನ ಕಟ್ಟಡದ ಭೂಮಿ ಪೂಜಾ ಕಾರ್ಯಕ್ರಮ

Suddi Udaya

ಎ.18: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಎಸ್.ಡಿ.ಪಿ.ಐ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ ನಾಮಪತ್ರ ಸಲ್ಲಿಕೆ

Suddi Udaya
error: Content is protected !!