28 C
ಪುತ್ತೂರು, ಬೆಳ್ತಂಗಡಿ
September 29, 2026
ಗ್ರಾಮಾಂತರ ಸುದ್ದಿಜಿಲ್ಲಾ ಸುದ್ದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿರಾಜ್ಯ ಸುದ್ದಿರಾಷ್ಟ್ರೀಯ ಸುದ್ದಿವರದಿಸರ್ಕಾರಿ ಇಲಾಖಾ ಸುದ್ದಿ

ಸೌಜನ್ಯ ಪ್ರಕರಣದ ಮರು ತನಿಖೆ: 16 ಮಂದಿ ಎಸ್ಐಟಿ ಸಹಾಯಕ ಅಧಿಕಾರಿಗಳ ನೇಮಕ

ಬೆಳ್ತಂಗಡಿ : ಕಾಲೇಜ್ ವಿದ್ಯಾರ್ಥಿನಿ ಕು.ಸೌಜನ್ಯ ಕೊಲೆ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ಮರು ತನಿಖೆಗೆ ಆದೇಶ ಮಾಡಿದ ಬಳಿಕ ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖಾ ದಳದ ಮುಖಸ್ಥರಾಗಿ ಎನ್.ಶಶಿಕುಮಾರ್ ಐಪಿಎಸ್, ಪೊಲೀಸ್ ಮಹಾನಿರೀಕ್ಷಕರು ಹಾಗೂ ಸದಸ್ಯರುಗಳಾದ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಸಿ.ಹೆಚ್.ಸುಧೀರ್ ಕುಮಾರ್ ರೆಡ್ಡಿ, ಬೆಂಗಳೂರು ರಾಜ್ಯ ಗುಪ್ತ ವಾರ್ತೆ ಶ್ರೀಮತಿ ನಿಶಾ ಜೇಮ್ಸ್ , ಬೆಂಗಳೂರು ಸಿಐಡಿ ಪೊಲೀಸ್ ಅಧೀಕ್ಷಕರಾದ ಲೋಕೇಶ್ ಜಗಲಸಾರ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವೆಂಕಟೇಶ್ ಪ್ರಸನ್ನ ಅವರನ್ನು ಒಳಗೊಂಡ ಐದು ಮಂದಿಯ ಅಧಿಕಾರಿಗಳ ತಂಡವನ್ನು ಸೆ.24 ರಂದು ಸರಕಾರ ರಚನೆ ಮಾಡಿತ್ತು.‌ಇದೀಗ ತನಿಖಾ ತಂಡದ ಸಹಾಯಕರಾಗಿ 16 ಮಂದಿಯನ್ನು ನೇಮಕ ಮಾಡಿ ಡಿಜಿ&ಐಜಿಪಿ ಡಾ.ಎಂ.ಎ.ಸಲೀಂ ಅವರು ಸೆ.29 ರಂದು ಆದೇಶ ಮಾಡಿದ್ದಾರೆ.

ಎಸ್ಐಟಿ ತನಿಖಾ ಸಹಾಯಕರಾಗಿ ಮಂಗಳೂರು ನಗರ ಸಿಸಿಬಿಯ ಎಸಿಪಿ ಮನೋಜ್ ಕುಮಾರ್ ನಾಯಕ್, ಬೆಂಗಳೂರು ಸಿಸಿಬಿ ಎಸಿಪಿ ರಾಮಚಂದ್ರ.ಬಿ, ಸಿಐಡಿ ಇನ್ಸ್‌ಪೆಕ್ಟರ್ ದೀಪಕ್, ಇನ್ಸ್‌ಪೆಕ್ಟರ್ ಮೋಹನ್ ಡಿ ಪಾಟೀಲ್, ಮಡಿವಾಳ ಸಂಚಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಈಶ್ವರಿ, ಕೋಣಾಜೆ ಪೊಲೀಸ್ ಠಾಣೆಯ ಪಿಎಸ್ಐ ಪುನೀತ್ ಗಾವಂಕರ್, ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಪ್ರದೀಪ್, ಕಂಕನಾಡಿ ಪೊಲೀಸ್ ಠಾಣೆಯ ಮ.ಪಿಎಸ್ಐ ಅನಿತಾ ನಿಕಂ, ಮಂಗಳೂರು ಸಿಸಿಬಿ ಎಎಸ್ಐ ಮೋಹನ್, ಕಂಕನಾಡಿ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರದೀಪ್ ಕುಮಾರ್ ರೈ, ಗೋವರ್ಧನ್, ದಿನೇಶ್.ಎನ್, ಉಳ್ಳಾಲ ಪೊಲೀಸ್ ಠಾಣೆಯ ಸಿಬ್ಬಂದಿ ರಾಧಕೃಷ್ಣ.ಕೆ.ಕೆ, ಕಾವೂರು ಪೊಲೀಸ್ ಠಾಣೆಯ ಸಿಬ್ಬಂದಿ ರೆಜಿ.ವಿ.ಎಂ, ಸುರತ್ಕಲ್ ಪೊಲೀಸ್ ಠಾಣೆಯ ಸಿಬ್ಬಂದಿ ರಾಜೇಂದ್ರ ಪ್ರಸಾದ್.ವಿ.ಪಿ, ಕಂಕನಾಡಿ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿ ಪ್ರಮೀಳಾ ಅವರನ್ನು ಒಳಗೊಂಡ ತನಿಖಾ ತಂಡವನ್ನು ರಚನೆ ಮಾಡಲಾಗಿದೆ.

ನೇಮಕ ಮಾಡಿದ ತನಿಖಾ ಸಹಾಯಕರು ತಕ್ಷಣ ತಮ್ಮ ಠಾಣೆಗಳಿಂದ ಬಿಡುಗಡೆಗೊಂಡು ಎಸ್ಐಟಿ ತನಿಖಾ ತಂಡ ಬೆಂಗಳೂರಿನಲ್ಲಿ ವರದಿ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ.

Related posts

ಭಾರೀ ಮಳೆ ಹಿನ್ನೆಲೆ: ನಾಳೆ(ಜು.17)ದ.ಕ. ಜಿಲ್ಲಾ ಎಲ್ಲಾ ಅಂಗನವಾಡಿ, ಶಾಲೆಗಳು ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಣೆ

Suddi Udaya

ಉಜಿರೆ: ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನ ಮೊದಲ ವರ್ಷದ ಬಿಇ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ

Suddi Udaya

ಗುರುವಾಯನಕೆರೆ ಅಂಗಡಿಯ ಬ್ಯಾನರ್ ಗೆ ಬೆಂಕಿ ಆರೋಪಿಯನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

Suddi Udaya

ದ.ಕ ಜಿಲ್ಲೆಯ 8 ಕ್ಷೇತ್ರಗಳಲ್ಲೂ ಬಿಜೆಪಿ ಜಯಭೇರಿ ಭಾರಿಸಲಿದೆ: ಬೆಳ್ತಂಗಡಿ ಕ್ಷೇತ್ರದಲ್ಲಿ ಹರೀಶ್ ಪೂಂಜ 50 ಸಾವಿರ ಮತಗಳ ಅಂತರದಿಂದ ಗೆಲುವು: ಬಿಜೆಪಿ ಪ್ರಚಾರ ಸಭೆಯಲ್ಲಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಹೇಳಿಕೆ

Suddi Udaya

ಇಂದಬೆಟ್ಟು: ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಕೆಸರುಗದ್ದೆ ಕ್ರೀಡಾಕೂಟ

Suddi Udaya

ಕೊಕ್ಕಡ ಶ್ರೀ ಲಕ್ಷ್ಮೀ ಲೇಡಿಸ್ ಬ್ಯೂಟಿಪಾರ್ಲರ್ ಸ್ಥಳಾಂತರಗೊಂಡು ಶುಭಾರಂಭ

Suddi Udaya
error: Content is protected !!