ಕಲ್ಮಂಜ: ಇತ್ತೀಚೆಗೆ ಬಂಟ್ವಾಳ ಕೊಯಿಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಜಿಲ್ಲಾಮಟ್ಟದ ಒಲಂಪಿಯಾಡ್ ಯೋಗಾಸನ ಸ್ಪರ್ಧೆಯಲ್ಲಿ ಸರಕಾರಿ ಪ್ರೌಢಶಾಲೆ ಕಲ್ಮಂಜದ ನಾಲ್ಕು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಎಂಟನೇ ತರಗತಿಯ ತ್ರಿಶಾ ಪ್ರಥಮ ಸ್ಥಾನ, 9 ನೇ ತರಗತಿಯ ಆಯುಷ್ ಗೌಡ ಪ್ರಥಮ ಸ್ಥಾನ, 10ನೇ ತರಗತಿಯ ಮನ್ವಿತ ಪ್ರಥಮ ಹಾಗೂ ಹತ್ತನೇ ತರಗತಿಯ ಪ್ರಾಚಿ ದ್ವಿತೀಯ ಸ್ಥಾನ ಪಡೆದು ನ.14ರಂದು ಮಂಡ್ಯದಲ್ಲಿ ನಡೆಯಲಿರುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ. ಇವರಿಗೆ ಆಂಗ್ಲ ಭಾಷಾ ಶಿಕ್ಷಕಿ ಪ್ರೇಮಲತಾ ತರಬೇತಿ ನೀಡಿದ್ದು, ದೈಹಿಕ ಶಿಕ್ಷಣ ಶಿಕ್ಷಕಿ ವಸಂತಿ ಎಮ್ ಇವರು ಸಹಕರಿಸಿರುತ್ತಾರೆ.















