31.2 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಗುರುವಾಯನಕೆರೆ ಎಕ್ಸೆಲ್‌ ಕಾಲೇಜಿನಲ್ಲಿ ರಾಜ್ಯ ಶಿಕ್ಷಣ ಇಲಾಖೆ ನೌಕರರ ಸಮಾವೇಶ – ಪ್ರಶಸ್ತಿ ವಿಜೇತ ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮ

ಗುರುವಾಯನಕೆರೆ: ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ ಬೆಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಘಟಕ, ಬೆಳ್ತಂಗಡಿ ತಾಲೂಕು ಘಟಕ ಹಾಗೂ ಗುರುವಾಯನಕೆರೆ ಎಕ್ಸೆಲ್ ಸಮೂಹ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ರ ಮೈಸೂರು ವಿಭಾಗ ಮಟ್ಟದ ಸಮಾವೇಶ ಮತ್ತು ರಾಜ್ಯ ಮಟ್ಟದ ಕಾರ್ಯಕಾರಿ ಸಮಿತಿ ಸಭೆ ಹಾಗೂ ಪ್ರಶಸ್ತಿ ವಿಜೇತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಸೆ.27ರಂದು ಎಕ್ಸೆಲ್ ಪದವಿ ಪೂರ್ವ ಕಾಲೇಜು ಗುರುವಾಯನಕೆರೆ ಬೆಳ್ತಂಗಡಿ ಇಲ್ಲಿ ಜರುಗಿತು.

ಕಾರ್ಯಕ್ರಮವನ್ನು ಕರ್ನಾಟಕ ವಿಧಾನ ಪರಿಷತ್ ಶಾಸಕ ಭೋಜೇ ಗೌಡ ಉದ್ಘಾಟಿಸಿ ಮಾತನಾಡಿ ನಾಯಕತ್ವಕ್ಕೆ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ ಮಾದರಿಯಾಗಿದೆ. ನೌಕರರ ಸಮಸ್ಯೆಗಳನ್ನು ವಿಧಾನ ಪರಿಷತ್ತಿನಲ್ಲಿ ಗಮನಸೆಳೆಯುವುದಾಗಿ ತಿಳಿಸಿದರು. ಸುಂದರ ಪ್ರಕೃತಿ ಮಡಿಲಿನಲ್ಲಿರುವ ಎಕ್ಸೆಲ್‌ ಕಾಲೇಜು ಅತ್ಯತ್ತಮ ಗುಣಮಟ್ಟದ ಶಿಕ್ಷಕವನ್ನು ಧಾರೆ ಎರೆಯುತ್ತಿದೆ. ಸರಕಾರ ಮಾಡಲು ಅಸಾಧ್ಯವಾದ ಶೈಕ್ಷಣಿಕ ಸಾಧನೆಯನ್ನು ಎಕ್ಸೆಲ್‌ ವಿದ್ಯಾಸಂಸ್ಥೆಗಳು ಮಾಡಿವೆ. ಗುಣಮಟ್ಟದ ಶಿಕ್ಷಣದೊಂದಿಗೆ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದೆ ಎಂದು ಹೇಳಿದರು.

ಕಲಿಯುಗದಲ್ಲಿ ಸಂಘಟನೆಯೇ ಅತ್ಯಂತ ಪ್ರಬಲ ಶಕ್ತಿ.  ಉತ್ತಮ ಧ್ಯೇಯದೊಂದಿಗೆ ಸಾಗುತ್ತಿರುವ ಸಂಘದೊಂದಿಗೆ ಎಕ್ಸೆಲ್‌ ಶಿಕ್ಷಣ ಸಂಸ್ಥೆ ಜೊತೆಯಾಗಿರುತ್ತದೆ ಎಂದು ಮುಖ್ಯ ಅತಿಥಿಯಾಗಿ  ಪಾಲ್ಗೊಂಡ ಎಕ್ಸೆಲ್‌ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ಸುಮಂತ್‌ ಕುಮಾರ್‌ ಜೈನ್‌ ಹೇಳಿದರು. 

ಮುಖ್ಯ ಅತಿಥಿಗಳಾಗಿ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ  ಶ್ರೀಮತಿ ಮಮತಾ ಗಟ್ಟಿ, ಎಕ್ಸೆಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ   ಸುಮಂತ್ ಕುಮಾರ್ ಜೈನ್, ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಹೇಮಾನಾಥ ಶೆಟ್ಟಿ ಕಾವು, ರಾಜ್ಯಾಧ್ಯಕ್ಷ  ಚೌಡಪ್ಪ, ರಾಜ್ಯ ಪದವಿಪೂರ್ವ ಉಪನ್ಯಾಸಕರ ಸಂಘದ ಸಂಘಟನಾ ಕಾರ್ಯದರ್ಶಿ  ವಿಠಲ್ , ರಾಜ್ಯ ಕೋಶಾಧಿಕಾರಿ ಸಂತೋಷ್ ಪಟ್ಟಣಶೆಟ್ಟಿ, ಪ್ರಧಾನ ಕಾರ್ಯದರ್ಶಿ ರವಿ ಪ್ರಕಾಶ್ ಎಂ ಎಸ್, ಹರೀಶ್ ಅನುದಾನಿತ ಪದವಿ ಪೂರ್ವ ಕಾಲೇಜುಗಳ ರಾಜ್ಯಾಧ್ಯಕ್ಷ ಜಗದೀಶ್ ಶೆಟ್ಟಿ, ದೇವಿ ದಯಾಳ್ ಬಿಲ್ಡರ್ಸ್ ಅಂಡ್ ಡೆವಲಪರ್ಸ್ ಮುಖ್ಯಸ್ಥರು ಶುಭ ಮಂಗಳ ವಿಭಾಗಕಾರ್ಯ ಅಧ್ಯಕ್ಷರು, ರಾಜಾರಾಮ್ ರಾಜ್ಯ ಸಂಘಟನಾ ಕಾರ್ಯದರ್ಶಿ, ಶರ್ಲಿಸುಮಾಲಿನಿ , ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷರು ಪ್ರೇಮನಾಥ್ ಶೆಟ್ಟಿ, ಹಾಗೂ ಎಲ್ಲಾ ಜಿಲ್ಲೆಗಳ ಅಧ್ಯಕ್ಷರು ಉಪಸ್ಥಿತರಿದ್ದರು.

ಎಕ್ಸೆಲ್ ವಿದ್ಯಾ ಸಂಸ್ಥೆಗಳ ಪ್ರಾಂಶುಪಾಲರಾದ ಡಾ. ನವೀನ್‌ ಕುಮಾರ್‌ ಮರಿಕೆ, ಡಾ ಪ್ರಜ್ವಲ್‌ ಕಜೆ, ಸುಮಿತ್ರಾ ಗೌಡ, ಶೈಕ್ಷಣಿಕ ಸಂಯೋಜಕಿ ನಿಶಾ ಪೂಜಾರಿ, ಉಪ ಪ್ರಾಂಶುಪಾಲರಾದ ರೋಹಿತ್‌, ಹರೀಶ್‌, ವೇಣೂರು ಟೆಕ್ನೋ ಸ್ಕೂಲ್‌ನ ಮುಖ್ಯೋಪಾಧ್ಯಾಯ ಶಾಂತಿರಾಜ್‌ ಜೈನ್‌, ಆಡಳಿತಾಧಿಕಾರಿ ಕೀರ್ತಿನಿಧಿ, ವ್ಯವಸ್ಥಾಪಕ ಪ್ರಶಾಂತ್‌ ಬಳಂಜ ಸೇರಿದಂತೆ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಶ್ರೀಮತಿ ಮಮತಾ ಗಟ್ಟಿಯವರು ಶಿಕ್ಷಣ ಇಲಾಖೆ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ತಿಳಿಸಿದರು. ನೌಕರರ ಸಮಸ್ಯೆಗಳ ಬಗ್ಗೆ ಮನವಿ ನೀಡಲಾಯಿತು.

ಜಿಲ್ಲಾ ಕಾರ್ಯದರ್ಶಿ ಪ್ರತೀಪ ಎ ಆರ್ ಸ್ವಾಗತಿಸಿದರು. ಉದಯ ಎಸ್ ಧನ್ಯವಾದ ನೀಡಿದರು. ಡಾ.ಮಂಜುಳಾ ಶೆಟ್ಟಿಯವರು ಕಾರ್ಯಕ್ರಮ ನಿರೂಪಣೆ ಮಾಡಿದರು.

Related posts

ವಿಧಾನ ಸಭಾ ಚುನಾವಣೆ : ಬೆಳ್ತಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಿ.ಆರ್.ಪಿ. ಎಫ್ ಯೋಧರು ಹಾಗೂ ಬೆಳ್ತಂಗಡಿ ಠಾಣೆಯ ಪೊಲೀಸರ ಪಥ ಸಂಚಲನ

Suddi Udaya

ಚಾರ್ಮಾಡಿಯಲ್ಲಿ ವಿದ್ಯಾರ್ಥಿಗಳು ಹಾಗೂ ಕೆಲವು ಸಾರ್ವಜನಿಕರಿನಿಂದ ಬಸ್ ತಡೆಹಿಡಿದು ಗಲಾಟೆ

Suddi Udaya

ದಕ್ಷಿಣ ಕನ್ನಡ ಜಿಲ್ಲಾ ರಬ್ಬರ್ ಟ್ಯಾಪರ್ ಕಾರ್ಮಿಕರ ಸಂಘದ ಅಧ್ಯಕ್ಷ ಕಾಂಗ್ರೆಸ್ ಸೇರ್ಪಡೆ

Suddi Udaya

ಬಳಂಜ:ಆಮ್ಮಿ ಪೂಜಾರಿ ನಿಧನ

Suddi Udaya

ಮುಂಡಾಜೆ ಪದವಿ ಪೂರ್ವ ಕಾಲೇಜಿನಲ್ಲಿ ವಿವೇಕಾನಂದ ಜಯಂತಿ ಆಚರಣೆ

Suddi Udaya

ಹುಣಸೆಕಟ್ಟೆಯ ರಸ್ತೆ ಬದಿಯ ಒಣ ಹುಲ್ಲಿಗೆ ಬೆಂಕಿ : ಬೆಂಕಿ ನಂದಿಸಿದ
ಅಗ್ನಿಶಾಮಕ ದಳ

Suddi Udaya
error: Content is protected !!