31.9 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶಿರ್ಲಾಲು :ಬಗ್ಯೋಟ್ಟು ಕಜೆಯಲ್ಲಿ ದುರಂತ, ಬಾವಿಗೆ ಬಿದ್ದು ಅವಿವಾಹಿತ ವ್ಯಕ್ತಿ ರವಿ ಆಚಾರ್ಯ ಸಾವು

ಬೆಳ್ತಂಗಡಿ: ತಾಲೂಕಿನ ಶಿರ್ಲಾಲು ಗ್ರಾಮದ ಬಗ್ಯೋಟ್ಟು ಕಜೆ ಪರಿಸರದ ಕಾಳಿಕಾಂಬ ನಿವಾಸದ ವ್ಯಕ್ತಿ ಮನೆಯ ಬಾವಿಗೆ ಬಿದ್ದು ಸಾವನ್ನಪ್ಪಿದ ದುರಂತ ಘಟನೆ ನಡೆದಿದೆ.

ಮೃತರನ್ನು ಕಾಳಿಕಾಂಬ ನಿವಾಸಿ ರವಿ ಆಚಾರ್ಯ (50 ವರ್ಷ) ಎಂದು ಗುರುತಿಸಲಾಗಿದೆ. ಅವಿವಾಹಿತರಾದ್ದ ರವಿ ಆಚಾರ್ಯ ಅವರು ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು ಎನ್ನಲಾಗಿದ್ದು, ಇವರ ತಾಯಿ ಮತ್ತು ಅತ್ತಿಗೆ ಬೇರೆ ಕಡೆ ವಾಸಿಸುತ್ತಿದ್ದರು.

ಕಳೆದ ಎರಡು ದಿನಗಳ ಹಿಂದೆಯೇ ಇವರು ಆಕಸ್ಮಿಕವಾಗಿ ಬಾವಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದ್ದು, ತಡವಾಗಿ ಘಟನೆ ಬೆಳಕಿಗೆ ಬಂದಿದೆ.

ಸ್ಥಳೀಯರಿಂದ ಮಾಹಿತಿ ಪಡೆದ ವೇಣೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Related posts

ಬೆಳಾಲು: ನಾಲ್ಕು ತಿಂಗಳ ಹೆಣ್ಣು ಮಗು ಕಾಡಿನಲ್ಲಿ ಪತ್ತೆ: ಸಾರ್ವಜನಿಕರಿಂದ ರಕ್ಷಣೆ

Suddi Udaya

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರ್ ದಿನಾಚರಣೆ

Suddi Udaya

ನೇಣು ಬಿಗಿದು ವಿದ್ಯಾರ್ಥಿ ಆತ್ಮಹತ್ಯೆ

Suddi Udaya

ಜ.10- 12: ಜಮಲಾಬಾದ್ ಹಯಾತುಲ್ ಅವುಲಿಯಾ ದರ್ಗಾ ಶರೀಫ್ ನಲ್ಲಿ ಉರೂಸ್ ಮುಬಾರಕ್

Suddi Udaya

ಮಡಂತ್ಯಾರು ನೇಸರ ಸಂಜೀವಿನಿ ಒಕ್ಕೂಟದ ಮಸಾಲಾ ಉತ್ಪನ್ನಗಳ ತರಬೇತಿ ಕಾರ್ಯಾಗಾರ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾದಿಯರ ದಿನಾಚರಣೆ

Suddi Udaya
error: Content is protected !!