31.9 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಇಂದಬೆಟ್ಟು ಆಯುಷ್ಮಾನ್ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಕಟ್ಟಡಕ್ಕೆ ಶಿಲಾನ್ಯಾಸ

ಇಂದಬೆಟ್ಟು ಗ್ರಾಮದ ಬೆದ್ರಬೆಟ್ಟು ಭಾಗದ ಜನತೆಯ ದಶಕಗಳ ಬೇಡಿಕೆ ಆಯುಷ್ಮಾನ್ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಕಟ್ಟಡಕ್ಕೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ 65 ಲಕ್ಷ ಅನುದಾನವನ್ನು ಮಂಜೂರುಗೊಳಿಸಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರು ಹಾಗೂ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ರವರು ಗಣ್ಯರ ಹಾಗೂ ಗ್ರಾಮಸ್ಥರ ಉಪಸ್ಥಿತಿಯಲ್ಲಿ ಶಿಲಾನ್ಯಾಸ ನೆರವೇರಿಸಿದರು.

ಈ ವೇಳೆ ದಶಕಗಳ ಬೇಡಿಕೆಯನ್ನು ಈಡೇರಿಸುತ್ತಿರುವ ಸಂಸದರು ಹಾಗೂ ಶಾಸಕರನ್ನು ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಇಂದಬೆಟ್ಟು ಶಕ್ತಿ ಕೇಂದ್ರದ ಅಧ್ಯಕ್ಷರಾದ ಶ್ರೀಕಾಂತ್ ಎಸ್ ಇಂದಬೆಟ್ಟು, ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ಶ್ರೀಮತಿ ಆಶಾಲತಾ, ಆನಂದ ಅಡಿಲು, ಸತೀಶ್ ಗೌಡ ಚೌಕದಕಟ್ಟೆ, ಪ್ರಮೋದ್ ಕುಮಾರ್ ಬೆದ್ರಬೆಟ್ಟು, ತಾಲೂಕು ಆರೋಗ್ಯಾಧಿಕಾರಿ, ಬೂತ್ ಸಮಿತಿಯ ಅಧ್ಯಕ್ಷರುಗಳಾದ ಶಶಿಧರ ಗೌಡ ಪಡೆಂಕ್ಕಲ್, ಸಂಜೀವ ಗೌಡ ದರ್ಖಸು, ಗಣೇಶ್ ಆಚಾರ್ಯ ಮುಂಡ್ರಬೆಟ್ಟು, ನವೀನ್ ಜೈನ್, ಪ್ರತೀಶ್ ಕಡಿತ್ಯಾರು, ಯುವ ಮೋರ್ಚಾ ಸದಸ್ಯರಾದ ಸಂತೋಷ್ ಕುಮಾರ್ ಉಂಬೆಜೆ, ಪಳನಿ ಸ್ವಾಮಿ ಎರ್ಮಳ, ಮಂಡಲದ ಪದಾಧಿಕಾರಿಗಳು ಪಕ್ಷದ ಅನನ್ಯ ಜವಾಬ್ದಾರಿಯ ಪದಾಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮದ ಹಿರಿಯರು ಕಿರಿಯರು ಹಾಗೂ ಮಹಿಳೆಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು, ಚಂದ್ರಶೇಖರ ಕಾಂಜಾನು ಕಾರ್ಯಕ್ರಮ ನಿರೂಪಿಸಿದರು. ಗ್ರಾಮಸ್ಥರು ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಸಂಸದರು ಹಾಗೂ ಶಾಸಕರಿಗೆ ನೀಡಿ ವಿನಂತಿಸಿದರು ಹಂತ ಹಂತವಾಗಿ ತಮ್ಮ ಬೇಡಿಕೆಗಳನ್ನು ಇಬ್ಬರು ಸೇರಿ ಮುಂದಿನ ದಿನಗಳಲ್ಲಿ ಈಡೇರಿಸುವುದಾಗಿ ತಿಳಿಸಿದರು.

Related posts

ಕನ್ಯಾಡಿ ಶ್ರೀ ರಾಮಕ್ಷೇತ್ರದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ಅಯೋಧ್ಯೆಯ ಸಂಸದರು, ಮೇಯರ್ ಹಾಗೂ ಶಾಸಕರಿಗೆ ಅಯೋಧ್ಯೆ ಶಾಖಾ ಮಠದ ಶಿಲಾನ್ಯಾಸಕ್ಕೆ ಆಹ್ವಾನ

Suddi Udaya

ಉಜಿರೆ: ನೀರಚಿಲುಮೆ ಬಳಿ ಕೆಎಸ್‌ ಆರ್ ಟಿ ಸಿ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ: ಬೈಕ್ ಸವಾರ ಮೃತ್ಯು, ಸಹಸವಾರ ಗಾಯ

Suddi Udaya

ಸ್ಪಂದನಾ ನಿಧನ: ಬೆಳ್ತಂಗಡಿ ಬ್ಲಾಕ್ ಕಾಂಗ್ರೇಸ್ ಸಂತಾಪ

Suddi Udaya

ಕಬಡ್ಡಿ ಪಂದ್ಯಾಟ: ಮಚ್ಚಿನ ಸರಕಾರಿ ಪ್ರೌಢ ಶಾಲೆಯ ಬಾಲಕಿಯರು ದ್ವಿತೀಯ ಸ್ಥಾನ

Suddi Udaya

ಜಪಾನ್ ದೇಶದಲ್ಲಿ ನಡೆಯುವ ಅಂತರಾಷ್ಟ್ರೀಯ ಮಟ್ಟದ ವಿಜ್ಞಾನ ಕಾರ್ಯಕ್ರಮ SAKURA ಗೆ ಮೂಡುಬಿದಿರೆಯ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಆಯ್ಕೆ

Suddi Udaya

ಸೋಣಂದೂರು ಸ ಹಿ ಪ್ರಾ ಶಾಲೆಯಲ್ಲಿ ಮಕ್ಕಳ ಹಬ್ಬ ಮತ್ತು ಪ್ರತಿಭಾ ಪುರಸ್ಕಾರ

Suddi Udaya
error: Content is protected !!