ಕಡಿರುದ್ಯಾವರ : ಕಡಿರುದ್ಯಾವರ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಶ್ರೀ ಲಕ್ಷ್ಮೀ ವೆಂಕಟೇಶ್ವರ ಸಮುದಾಯ ಭವನದಲ್ಲಿ ಇತ್ತೀಚೆಗೆ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಸಂಘದ ಅಧ್ಯಕ್ಷ ರತ್ನಾಕರ ಗೌಡ ಮಾತನಾಡಿ ಸಂಘವು 2025-26 ನೇ ಸಾಲಿನಲ್ಲಿ ರೂ.1327799.25 ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.25 ಡಿವಿಡೆಂಟ್ ನೀಡುವುದಾಗಿ ತಿಳಿಸಿದರು.
ಹೈನುಗಾರಿಕಾಯ ಬಗ್ಗೆ ಹೈನುಗಾರಿಕೆಗೆ ಬೇಕಾಗುವ ಎಲ್ಲಾ ತರಹದ ಮಾಹಿತಿ ಮಾರ್ಗದರ್ಶನವನ್ನು ದ.ಕ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಬೆಳ್ತಂಗಡಿಯ ಡಾ| ಗಣಪತಿ ರವರು ಹಾಗೂ ವಿಸ್ತರಣಾಧಿಕಾರಿ ದ.ಕ ಹಾಲು ಒಕ್ಕೂಟ ಬೆಳ್ತಂಗಡಿ ಸಂದೀಪ್ ಕುಮಾರ್ ಜೈನ್ ನೀಡಿದರು.
ಈ ವೇಳೆ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಬಹುಮಾನ ಹಾಗೂ 2025-26 ನೇ ಸಾಲಿನಲ್ಲಿ ಸಂಘದ ಅತೀ ಹೆಚ್ಚು ಹಾಲುನ್ನು ಪೂರೈಸಿದವರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಹಾಗೂ ಸದಸ್ಯರಿಗೆ ಪ್ರೋತ್ಸಾಹ ಬಹುಮಾನವನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಶ್ರೀಧರ ಗೌಡ ಡಿ., ನೋಣಯ್ಯ ಗೌಡ, ಲಕ್ಷ್ಮಣ ಗೌಡ, ಜಯಾನಂದ ಗೌಡ, ಗೋಪಾಲ ಗೌಡ, ಕುಂಞ, ತುಂಗಯ್ಯ ನಾಯ್ಕ, ರಾಮಣ್ಣ ಸುವರ್ಣ, ಪದ್ಮಣಿ ಎಲ್.ಎಸ್., ರಜನಿ, ಲೀಲಾವತಿ, ಕಾರ್ಯದರ್ಶಿ ಅಶ್ವಿನಿ ಎಂ, ಉಪಸ್ಥಿತರಿದ್ದರು.
ಸಂಘದ ಸಿಬ್ಬಂದಿ ವರ್ಗದವರು ಪ್ರಾರ್ಥಿಸಿದರು . ಉಪಾಧ್ಯಕ್ಷ ಪ್ರವೀಣ್ ಕೆ. ಗೌಡ ಕಾರ್ಯಕ್ರಮ ನಿರೂಪಿಸಿದರು. ಧನ್ಯವಾದವಿತ್ತರು.












