31.2 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

28ನೇ ವರ್ಷದ  ಭಜನಾ ಕಮ್ಮಟದ ಉಪನ್ಯಾಸ ಕಾರ್ಯಕ್ರಮ: ಭಜನೆಯ ಮೂಲಕ ಸಂಸ್ಕಾರದ ಜನನ ಸಾಧ್ಯ : ಉಜಿರೆಯ ಅಶೋಕ ಭಟ್

ಧರ್ಮಸ್ಥಳ: ಪ್ರಸ್ತುತ ಶಿಕ್ಷಣದಲ್ಲಿ ಸಂಸ್ಕಾರದ ಬಲು ಅವಶ್ಯಕತೆಯಿದ್ದು, ಜೀವನದ ಸಾರ್ಥಕತೆಗೆ ಕಾರಣವಾಗುವ ಸಂಸ್ಕಾರವನ್ನು ಭಜನೆಯ ಮುಖೇನ ಒಲಿಸಿಕೊಳ್ಳಬಹುದಾಗಿದೆ ಎಂದು ಉಜಿರೆಯ ಅಶೋಕ ಭಟ್ ಅಭಿಪ್ರಾಯಪಟ್ಟರು.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಸೆ.30 ರಂದು ನಡೆದ 28ನೇ ವರ್ಷದ ಭಜನಾ ಕಮ್ಮಟದ ಮೂರನೇ ದಿನ ಶಿಬಿರದ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸ ನೆಲೆಯಲ್ಲಿ ಮಾತನಾಡಿದರು.

ಇಂದಿನ ಕಾಲದ  ಯುವ ಸಮಾಜವು ವ್ಯವಹಾರಿಕ ಜೀವನದ ಮತ್ತು ಸಂಪಾದನೆಯ ಬದುಕಿನ ನಡುವೆ ಸಂಸ್ಕಾರವನ್ನು ಮರೆಯುತ್ತಿದ್ದು,ಆ ಸಂಸ್ಕಾರದ ಪುನಶ್ಚೇತನಕ್ಕೆ ಭಗವಂತನ ಸ್ಮರಣೆಯು ಸಹಕಾರಿಯಾಗಿದೆ. ವ್ಯಸನಗಳ ಭೀತಿಗೆ ಸಂಸ್ಕಾರದ ಕೊರತೆಯೇ ಕಾರಣವಾಗಿದ್ದು,ಅದಲ್ಲದೆ ಮಕ್ಕಳ ಮೇಲಿನ ಅತಿಯಾದ ಮೋಹವಾತ್ಸಲ್ಯಗಳೂ ಇಂದು ಸಂಸ್ಕಾರವನ್ನು ಮರೆಮಾಚುವಂತೆ ಮಾಡುತ್ತಿದೆ ಎಂದು ಉಲ್ಲೇಖಿಸಿದರು.

  ಭಾರತದ ಅಸ್ಮಿತೆಗೆ ಒಬ್ಬ ಉತ್ತಮ ವ್ಯಕ್ತಿಯಾಗಬೇಕಾದರೆ ಸಂಸ್ಕಾರವು ಅತೀ ಮುಖ್ಯವಾಗಿದ್ದು, ಆ ಸಂಸ್ಕಾರವನ್ನು ಒದಗಿಸುವ ಭಜನೆಗೆ ಅತಿ ಹೆಚ್ಚಿನ ಕೊಡುಗೆ  ನೀಡಿದ ಕೀರ್ತಿಯು ದಾಸ ಪರಂಪರೆಗೆ ಸಲ್ಲುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

 ಆತ್ಮ ಆಧ್ಯಾತ್ಮದ ದಾರಿಯಲ್ಲಿ ಪರಮಾತ್ಮನ ಕಡೆ ಸಾಗಲು ಭಜನೆ ಸನ್ಮಾರ್ಗವಾಗಿದ್ದು, ಖಾವಂದರು ಈ 28 ವರ್ಷಗಳ ಭಜನಾ ಕಮ್ಮಟದ ಮೂಲಕ ಸಮಾಜದಲ್ಲಿ ಅನೇಕ ಧಾರ್ಮಿಕ ಬದಲಾವಣೆಯನ್ನು ತಂದು ಯುವ ಪೀಳಿಗೆಯನ್ನು ಆಧ್ಯಾತ್ಮದ ಕಡೆಗೆ ಪ್ರೇರೇಪಿಸುವಲ್ಲಿ ಯಶಸ್ವಿಯಾಗಿದ್ದಾರೆ ಶ್ಲಾಘನೆಯನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶ್ರೀ ಮಹಾಲಕ್ಷ್ಮಿ ಸೇವಾ ಪ್ರತಿಷ್ಠಾನ, ಶ್ರೀಧಾಮ, ಮಾಣಿಲ ಇಲ್ಲಿನ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು,  ಭಜನಾ ಕಮ್ಮಟ ಸಮಿತಿಯ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್, ಸಮಿತಿಯ ಕಾರ್ಯದರ್ಶಿ ವೀರು ಶೆಟ್ಟಿ, ಭಜನಾ ಕಮ್ಮಟ ಸಮಿತಿಯ ಸರ್ವ ಸದಸ್ಯರು ಹಾಗೂ ಶಿಬಿರಾರ್ಥಿಗಳು ಭಾಗಿಯಾಗಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಸೆ.30 ರಂದು ,  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಆಯೋಜಿಸಲಾದ 28ನೇ ವರ್ಷದ ಭಜನಾ ಕಮ್ಮಟ ದ ಮೂರನೇ ದಿನದ ಶಿಬಿರದಲ್ಲಿ ರಾಮಕೃಷ್ಣ ಕಾಟುಕುಕ್ಕೆ ರಾಜ್ಯ ಮಟ್ಟದ ತರಬೇತುದಾರರು, ಕಾಸರಗೋಡು ಇವರು ಎಲ್ಲಾ ಶಿಬಿರಾರ್ಥಿಗಳಿಗೆ ಭಜನಾ ತರಬೇತಿಯನ್ನು ನೀಡಿದ್ದು, ‘ಹರಿದಾಸ ಸಾಹಿತ್ಯದ ಕಂಗಳಿದ್ಯಾತಕೊ ಕಾವೇರಿ ರಂಗನ ನೋಡದ’ .. ಹಾಗೂ ಇನ್ನಿತರ ಭಜನಾ  ಕೀರ್ತನೆಗಳನ್ನು ತರಬೇತುದಾರರು ಅಭ್ಯಾಸ ಮಾಡಿಸಿದರು.

 ಈ ಸಂದರ್ಭದಲ್ಲಿ ಶ್ರೀ ಮಹಾಲಕ್ಷ್ಮಿ ಸೇವಾ ಪ್ರತಿಷ್ಠಾನ, ಶ್ರೀ ಧಾಮ, ಮಾಣಿಲ ಇಲ್ಲಿನ   ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು, ಭಜನಾ ಕಮ್ಮಟ ಪರಿಷತ್ ನ ಉಪಾಧ್ಯಕ್ಷೆ ಡಾ॥ ಹೇಮಾವತಿ ಅಮ್ಮನವರು,  ಹಾಗೂ ಐಶ್ವರ್ಯ ನಿಶ್ಚಲ್ ಜೈನ್ ಉಪಸ್ಥಿತರಿದ್ದರು.

Related posts

ನಿಡ್ಲೆ: ಬರೆಂಗಾಯ ನಿವಾಸಿ ಪ್ರಭಾಕರ ಆಚಾರ್ಯ ನಿಧನ

Suddi Udaya

ವಿಶ್ವ ರಕ್ತದಾನಿಗಳ ದಿನಾಚರಣೆ ಪ್ರಯುಕ್ತ ಧರ್ಮಸ್ಥಳದಲ್ಲಿ ಬೃಹತ್ ರಕ್ತದಾನ ಶಿಬಿರ

Suddi Udaya

ಬೆಳ್ತಂಗಡಿ ಬ್ಯಾಟರಿ ಅಂಗಡಿಗೆ ಕನ್ನ ಹಾಕಿದ ಕಳ್ಳರು: ಅಂಗಡಿ ಶಟರ್ ಮುರಿದು ಒಳಹೋಗಲು ಪ್ರಯತ್ನ, ಗಾಳಿ-ಮಳೆಗೆ ಸಿಸಿ ಕ್ಯಾಮರಾ ಬಂದ್ ಮಾಡಿದ್ದರಿಂದ ಕಳ್ಳರ ಚಹರೆ ಪತ್ತೆಯಾಗಿಲ್ಲ.

Suddi Udaya

ಕಳಿಯ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

Suddi Udaya

ಪಶುಸಂಗೋಪನಾ ಇಲಾಖೆಯ ಅಧಿಕಾರಿ ಜಯಕೀರ್ತಿ ಜೈನ್ ಸೇವಾ ನಿವೃತ್ತಿ

Suddi Udaya

ಒಡಿಯೂರು ಶ್ರೀ ಸೌಹಾರ್ದ ಸಹಕಾರಿ ಸಂಘದ 22ನೇ ಮಡಂತ್ಯಾರು ಶಾಖೆ ಉದ್ಘಾಟನೆ

Suddi Udaya
error: Content is protected !!