September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಚುನಾವಣೆತಾಲೂಕು ಸುದ್ದಿಬೆಳ್ತಂಗಡಿರಾಜಕೀಯ

ಬೆಳ್ತಂಗಡಿ: ವಿಧಾನ ಪರಿಷತ್ ಉಪಚುನಾವಣೆ, ಬೆಳ್ತಂಗಡಿಯಲ್ಲಿ 676 ಮತದಾರರು ಬೆಳ್ತಂಗಡಿಯ 49 ಮತಗಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಪತ್ರಿಕಾಗೋಷ್ಠಿಯಲ್ಲಿ ತಹಿಶೀಲ್ದಾರ್ ಪೃಥ್ವಿ ಸಾನಿಕಾಮ್ ಮಾಹಿತಿ

ಬೆಳ್ತಂಗಡಿ: ವಿಧಾನ ಪರಿಷತ್‌ಗೆ ನಡೆಯುವ ಉಪಚುನಾವಣೆಯ ಮತದಾನ ಅ.21ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಅ.21 ರಂದು ಮತದಾನ ಪ್ರಕ್ರಿಯೆ ಮುಕ್ತಾಯವಾಗುವವರೆಗೆ ತಾಲೂಕಿನ ಒಟ್ಟು 49 ಮತದಾನ ಕೇಂದ್ರಗಳ ಸುತ್ತಮುತ್ತ 100 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ ಎಂದು ತಹಿಶೀಲ್ದಾರ್ ಪೃಥ್ವಿ ಸಾನಿಕಮ್ ಆದೇಶಿಸಿದ್ದಾರೆ.

ಅವರು ಅ. 20ರಂದು ತಾಲೂಕು ಕಛೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮತಗಟ್ಟೆ ವ್ಯಾಪ್ತಿಯಲ್ಲಿ ಜನರು ಹೆಚ್ಚು ಜನರು ಗುಂಪು ಸೇರುವುದು, ಯಾವುದೇ ರಾಜಕೀಯ ಚಟುವಟಿಕೆ ಮಾಡುವುದು.ಮತ ಕಟ್ಟೆ ಪ್ರದೇಶದಲ್ಲಿ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸುವಂತಿಲ್ಲ ಎಂದರು.

48 ಗ್ರಾಮ ಪಂಚಾಯತ್ ಮತ್ತು ಒಂದು ಪಟ್ಟಣ ಪಂಚಾಯತ್ ಸೇರಿದಂತೆ ಒಟ್ಟು 49 ಮತಗಟ್ಟೆಗಳಿವೆ.ಒಂದು ಮತಗಟ್ಟೆಯಲ್ಲಿ ಮೂವರು ಸಿಬ್ಬಂದಿಗಳು ಹಾಗೂ ಒಂದು ಪಿಸಿಯವರನ್ನು ನಿಯೋಜನೆ ಮಾಡಲಾಗುತ್ತದೆ.‌ಸೂಕ್ಷ್ಮ ಪ್ರದೇಶಕ್ಕೆ ಹೆಚ್ಚುವರಿ ಪೋಲೀಸರನ್ನು ನೇಮಿಸಲಾಗುತ್ತದೆ.ತಾಲೂಕಿನಲ್ಲಿ 325 ಪುರುಷ,351 ಮಹಿಳಾ, ಒಟ್ಟು 676 ಮತದಾರರಿದ್ದಾರೆ.ಮತದಾನ ಬೆಳಿಗ್ಗೆ 8 ರಿಂದ ಸಂಜೆ 4 ರವರೆಗೆ ನಡೆಯಲಿದೆ. ಚುನಾವಣಾ ಸಂದರ್ಭದಲ್ಲಿ ಪೋಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕರ್ತವ್ಯದಲ್ಲಿರುತ್ತಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ಉಪಸ್ಥಿತರಿದ್ದರು.

Related posts

ಜ.18: ಗೇರುಕಟ್ಟೆ ಪರಪ್ಪು ವಲಿಯುಲ್ಲಾಹಿ ಫಕೀರ್ ಮುಹಿಯುದ್ದೀನ್ ರವರ ಉರೂಸ್ ಕಾರ್ಯಕ್ರಮ

Suddi Udaya

ಶಿಶಿಲ ಗ್ರಾ.ಪಂ. ಅಧ್ಯಕ್ಷರಾಗಿ ಸುಧೀನ್, ಉಪಾಧ್ಯಕ್ಷರಾಗಿ ಯತೀಶ್ ಆಯ್ಕೆ

Suddi Udaya

ಬೆಳ್ತಂಗಡಿಗೆ ಉಪರಾಷ್ಟ್ರಪತಿ ಭೇಟಿ ಹಿನ್ನಲೆ ಡಿಸಿ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ

Suddi Udaya

ವೇಣೂರು: ಪಡ್ಡಂದಡ್ಕ ನೂರುಲ್ ಹುಧಾ ಮಸೀದಿಯಲ್ಲಿ ಸಂಭ್ರಮದ ಈದುಲ್ ಅಧಾ ಆಚರಣೆ

Suddi Udaya

ನಾವೂರು: ನವೋದಯ ಯುವಕ ಮಂಡಲದಿಂದ ಅಂಗನವಾಡಿ ಮಕ್ಕಳಿಗೆ ಸ್ಲೇಟು ವಿತರಣೆ

Suddi Udaya

ಬೆಳ್ತಂಗಡಿ ಜ್ಯೋತಿ ಹಾಸ್ಪಿಟಲ್ ವತಿಯಿಂದ ನಾರಾವಿಯ ಕುತ್ಲೂರಿನಲ್ಲಿ ಕ್ಯಾನ್ಸರ್ ತಪಾಸಣಾ ಶಿಬಿರ

Suddi Udaya
error: Content is protected !!