ಬೆಳ್ತಂಗಡಿ: ತಾಲೂಕಿನ ನಾಲ್ಕೂರು ಗ್ರಾಮದ ನಿಟ್ಟಡ್ಕದಲ್ಲಿ ಗ್ರಾಮೀಣ ಭಾಗದ ಜನರಿಗೆ ಅತ್ಯುತ್ತಮ ಉಚಿತ ವೈದ್ಯಕೀಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ರೂ. 65 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸುಸಜ್ಜಿತ ಆಯುಷ್ಮಾನ್ ಆರೋಗ್ಯ ಕೇಂದ್ರದ ನೂತನ ಕಟ್ಟಡಕ್ಕೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾ. ಬ್ರಿಜೇಶ್ ಚೌಟ ಹಾಗೂ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ಅವರು ಸೆ. 30ರಂದು ಗುದ್ದಲಿ ಪೂಜೆಯೊಂದಿಗೆ, ಶಿಲಾನ್ಯಾಸ ನೆರವೇರಿಸಿದರು.

ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ಪ್ರಾಥಮಿಕ ಹಂತದಲ್ಲೇ ಗುಣಮಟ್ಟದ ಆರೋಗ್ಯ ಸೇವೆ ಮತ್ತು ಜಾಗೃತಿ ತಲುಪಿಸುವ ನಿಟ್ಟಿನಲ್ಲಿ ಈ ಕೇಂದ್ರವು ಪ್ರಮುಖ ಪಾತ್ರ ವಹಿಸಲಿದ್ದು, ನಿಟ್ಟಡ್ಕ ಹಾಗೂ ನಾಲ್ಕೂರು ಸುತ್ತಮುತ್ತಲಿನ ಪರಿಸರದ ಗ್ರಾಮಸ್ಥರಿಗೆ ಇದರಿಂದ ದೊಡ್ಡ ಮಟ್ಟದ ಆರೋಗ್ಯ ಆಸರೆ ಸಿಗಲಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಸದಾನಂದ ಪೂಜಾರಿ ಉಂಗಿಲಬೈಲು, ಸಂತೋಷ್ ಕುಮಾರ್ ಕಾಪಿನಡ್ಕ, ಸುರೇಶ್ ಪೂಜಾರಿ ಜೈಮಾತಾ, ಬಾಲಕೃಷ್ಣ ಪೂಜಾರಿ ಯೈಕುರಿ, ಕರುಣಾಕರ ಹೆಗ್ಡೆ, ಸುರೇಶ್ ಶೆಟ್ಟಿ ಕುರೆಲ್ಯ, ಶೋಭಾ ಕುಲಾಲ್, ದೇಜಪ್ಪ ಪೂಜಾರಿ, ವಿಶ್ವನಾಥ ಹೊಳ್ಳ, ವಿಜಯ್ ಯೈಕುರಿ, ದಿನೇಶ್ ಪಿ.ಕೆ., ವಸಂತ ಶೆಟ್ಟಿ ರಾಮನಗರ, ಮಂಗಳ ದೇವಾಡಿಗ, ಸವಿತಾ ಶೆಟ್ಟಿ, ಪ್ರೇಮಾ, ರತ್ನರಾಜ್ ಜೈನ್, ಶೇಖರ್ ಶೆಟ್ಟಿ ಕರ್ಮಿತ್ತಿಲ್, ಸಂದೇಶ್ ಶೆಟ್ಟಿ ಪೊನ್ನೆದಕಲ, ದೀಪಕ್ ಹೆಚ್.ಡಿ., ಹೇಮಂತ್ ಕಟ್ಟೆ, ಶಿವಪ್ಪ ಪೂಜಾರಿ ಖಂಡಿಗ, ಸಂಪತ್ ಪಿ. ಕೋಟ್ಯಾನ್, ಪ್ರಶಾಂತ್ ದರ್ಖಾಸು, ಬೇಬಿ ಪರವ, ಗಿರೀಶ್ ನಿಟ್ಟಡ್ಕ, ಸುಂದರ ತೋಟದಪಲ್ಕೆ, ಮೋಹನ್ ಹೆಗ್ಡೆ, ಅಶೋಕ್ ತೋಟದಪಲ್ಕೆ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ನಾಲ್ಕೂರು ಗ್ರಾಮದ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು.












