November 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಭಜನಾ ಕಮ್ಮಟ; ಆರೋಗ್ಯ ರಕ್ಷಣೆಗೆ ಭಜನೆ ಸಹಕಾರಿ: ವಿವೇಕ್  ಪಾಯಸ್

ಧರ್ಮಸ್ಥಳ: ಆರೋಗ್ಯ ರಕ್ಷಣೆಗೆ ಭಜನೆಯು ಅತಿ ಮುಖ್ಯ ಹಾದಿಯಾಗಿದ್ದು, ಬದುಕಿನ ಸುಗಮದ ದಾರಿಯೇ ಭಜನೆಯಾಗಿದೆ. ಆರೋಗ್ಯವಂತ ಶರೀರವೇ ಆತ್ಮದ ಅರಮನೆ ಎಂದು ರಾಜ್ಯ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ಪಾಯಸ್ ಅಭಿಪ್ರಾಯಪಟ್ಟರು.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಸೆ.29, ಮಂಗಳವಾರದಂದು ನಡೆದ 28ನೇ ವರ್ಷದ ಭಜನಾ ಕಮ್ಮಟದ ಎರಡನೇ ದಿನ ಶಿಬಿರದ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರ ನೆಲೆಯಲ್ಲಿ ಮಾತನಾಡಿದರು.

ಭಜನೆಯಿಂದ ಸಾಮಾಜಿಕ ಪರಿವರ್ತನೆ, ಕೌಟುಂಬಿಕ ಸಾಮರಸ್ಯ ಹಾಗೂ  ಒಳ್ಳೆಯ ನಡತೆಗಳು ಸೃಷ್ಟಿಯಾಗಿ ಸಮಾಜದಲ್ಲಿ ತಲೆದೋರಿರುವ ಸಾಮಾಜಿಕ ಸಮಸ್ಯೆಗಳು  ದೂರವಾಗುತ್ತದೆ.  ಕತ್ತಲನ್ನು ದೂರ ಮಾಡಿ ಬೆಳಕನ್ನ  ಪಸರಿಸುವಲ್ಲಿ ಭಜನೆಯು ಪ್ರಮುಖ ಪಾತ್ರವನ್ನು ವಹಿಸಿದ್ದು, ಭವಿಷ್ಯದ ಹಾದಿಯನ್ನು ತಪ್ಪಿಸುವ ಚಟಗಳನ್ನು ತ್ಯಜಿಸಿ ಒಳ್ಳೆಯ  ಗುಣಗಳನ್ನು ಬೆಳೆಸಿಕೊಳ್ಳಲು ಸಹಾಯಕವಾಗಿದೆ ಎಂದು  ಶಿಬಿರಾರ್ಥಿಗಳಿಗೆ ತಿಳಿಹೇಳಿದರು.

ವರ್ಣಜಾಗೃತಿ, ಮಧ್ಯವರ್ಜನ ಶಿಬಿರ ಹಾಗೂ ಭಜನಾ ಕಮ್ಮಟ  ಇಂತಹ ಹಲವಾರು ಯೋಜನೆಗಳ ಮೂಲಕ ಪೂಜ್ಯ ಹೆಗ್ಗಡೆಯ ದಂಪತಿಗಳು ಸಾವಿರಾರು ಜನರ ಪಾಲಿಗೆ ನೆರಳಾಗಿ ನಿಂತು ಮಾರ್ಗದರ್ಶನವನ್ನು ನೀಡುತ್ತಿದ್ದಾರೆ ಎಂದು ಶ್ಲಾಘನೀಯ ಮಾತುಗಳನ್ನಾಡಿದರು.

ಈ ಸಂದರ್ಭದಲ್ಲಿ ಭಜನಾ ಕಮ್ಮಟದ ಮುಖ್ಯ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್, ಭಜನಾ ಕಮಟ ಪರಿಷತ್ ನ ಎಲ್ಲಾ ಸದಸ್ಯರು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

Related posts

ಉಜಿರೆ ಬೂತ್ ಸಂಖ್ಯೆ 98 ರ ಮತಗಟ್ಟೆಗೆ ಯುವ ನಾಯಕ ರಂಜನ್ ಜಿ ಗೌಡ ಹಾಗೂ ಅಭಿನಂದನ್ ಹರೀಶ್ ಕುಮಾರ್ ‍ಭೇಟಿ

Suddi Udaya

ಹತ್ಯಡ್ಕ ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದಲ್ಲಿ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ: ಧಾರ್ಮಿಕ ಸಭೆ

Suddi Udaya

ಉಜಿರೆ: ಅನುಗ್ರಹದಲ್ಲಿ ಯು.ಕೆ.ಜಿ ಮಕ್ಕಳ ಪದವಿ ಪ್ರದಾನ ಸಮಾರಂಭ

Suddi Udaya

ಅರುವ ‘ನಮ ಮಾತೆರ್ಲ ಒಂಜೇ’ ಕಲಾತಂಡದಿಂದ ಆರ್ಥಿಕ ಸಹಾಯಧನ

Suddi Udaya

ನಾಪತ್ತೆಯಾಗಿದ್ದ ಕೊಯ್ಯೂರು ನಿವಾಸಿ ಮುಹಮ್ಮದ್ ಯಾಸಿರ್ ಬೆಂಗಳೂರಿನಲ್ಲಿ ಪತ್ತೆ

Suddi Udaya

ಶಿಶಿಲ-ಬೈರಾಪುರ ರಸ್ತೆ ಹಕ್ಕೊತ್ತಾಯ ಸಮಾವೇಶಕ್ಕೆ ಮಲೆನಾಡು ಜನ ಹಿತರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಬೆಂಬಲ

Suddi Udaya
error: Content is protected !!